ಮಗಳು ಸನಾ ಎಜುಕೇಷನ್‌ಗೆ ಸೌರವ್ ಗಂಗೂಲಿ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

First Published Oct 12, 2023, 1:31 PM IST

ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಪುತ್ರಿ ಸನಾ ಗಂಗೂಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಲಂಡನ್‌ನಲ್ಲಿ ಪದವಿ ಶಿಕ್ಷಣವನ್ನು ಸನಾ ಪೂರೈಸಿದ್ದಾರೆ. ಈವರೆಗೂ ಮಗಳ ಶಿಕ್ಷಣಕ್ಕೆ ಸೌರವ್ ಗಂಗೂಲಿ ಖರ್ಚು ಮಾಡಿದ ಹಣ ಎಷ್ಟು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಟೀಂ ಇಂಡಿಯಾ ಕಂಡ ದಿಗ್ಗಜ ನಾಯಕರಲ್ಲಿ ಒಬ್ಬರೆನಿಸಿದ್ದಾರೆ. ದಾದಾ ನಾಯಕರಾದ ಬಳಿಕ ಭಾರತ ತಂಡ ಉನ್ನತ ಹಂತಕ್ಕೇರಿತ್ತು.
 

ಕೋಲ್ಕತಾದ ಮಹಾರಾಜ ಖ್ಯಾತಿಯ ಸೌರವ್ ಗಂಗೂಲಿ, ಐಶಾರಾಮಿ ಜೀವನದ ಮೂಲಕವೇ ಗಮನ ಸೆಳೆದಿದ್ದಾರೆ. ಸೌರವ್ ಗಂಗೂಲಿಗೆ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ.
 

ಸೌರವ್ ದಂಪತಿಗೆ ಒಬ್ಬಳೇ ಮಗಳು

ಸೌರವ್ ಗಂಗೂಲಿ ಹಾಗೂ ಅವರ ಪತ್ನಿ ಡೋನಾ ಗಂಗೂಲಿಗೆ ಏಕೈಕ ಸುಂದರ ಮಗಳಿದ್ದಾರೆ. ಸೌರವ್ ಗಂಗೂಲಿ-ಡೋನಾ ಗಂಗೂಲಿಯ ಮುದ್ದಿನ ಮಗಳೇ ಸನಾ ಗಂಗೂಲಿ.
 

ಮಗಳ ಶಿಕ್ಷಣಕ್ಕೆ ದಾದಾ ಖರ್ಚು ಮಾಡಿದ್ದೆಷ್ಟು?

ನಾವಿಂದು ಸೌರವ್ ಗಂಗೂಲಿ ತಮ್ಮ ಮುದ್ದಿನ ಮಗಳಿಗೆ ವಿಶ್ವದರ್ಜೆಯ ಶಿಕ್ಷಣ ನೀಡಲು ಖರ್ಚು ಮಾಡಿದ ಹಣವೆಷ್ಟು ಎನ್ನುವುದನ್ನು ನೋಡೋಣ ಬನ್ನಿ.
 

ಸನಾ ಶಾಲಾ ಶಿಕ್ಷಣ:

ಸನಾ ಗಂಗೂಲಿ 2006 ರಿಂದ 2020ರವರೆಗೆ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಕೋಲ್ಕತಾದ ಪ್ರಖ್ಯಾತ ಲೊರೆಟ್ಟೋ ಹೌಸ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದರು.
 

ಶಾಲೆಯ ಫೀ ಎಷ್ಟು?:

ಲೊರೆಟ್ಟೋ ಹೌಸ್ ಸ್ಕೂಲ್ ವೆಬ್‌ಸೈಟ್‌ನಲ್ಲೇ ಉಲ್ಲೇಖಿಸಿರುವಂತೆ ಈ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಯಿಂದ ಪ್ರತಿ ನಾಲ್ಕು ತಿಂಗಳಿಗೆ 14 ಸಾವಿರ ರುಪಾಯಿ ಫೀ ಕಲೆಕ್ಟ್ ಮಾಡುತ್ತದೆ. ಇನ್ನು ತಿಂಗಳ ಫೀ 4,128 ರುಪಾಯಿ ಸಂಗ್ರಹಿಸುತ್ತದೆ. ಇದರ ಜತೆಗೆ ಈ ಶಾಲೆಯೂ ಪ್ರತಿ ವಿದ್ಯಾರ್ಥಿಯಿಂದ ವಾರ್ಷಿಕ 2,000 ಕಲೆಕ್ಟ್ ಮಾಡುತ್ತಿದೆ.
 

ಸನಾ ಉನ್ನತ ಶಿಕ್ಷಣ:

ಸನಾ ಗಂಗೂಲಿ ತಮ್ಮ ಉನ್ನತ ಶಿಕ್ಷಣ ಪಡೆಯಲು ಲಂಡನ್‌ನತ್ತ ಮುಖ ಮಾಡಿದರು. ಅಲ್ಲಿ ಪ್ರಖ್ಯಾತ ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಬಿ.ಎಸ್ಸಿ, ಎಕಾನೋಮಿಕ್ಸ್‌ನಲ್ಲಿ ಪದವಿ ಪಡೆದರು.
 

ಕಾಲೇಜ್ ಫೀ ಎಷ್ಟು?

ಯೂನಿವರ್ಸಿಟಿ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿರುವಂತೆ, ಭಾರತದ ರುಪಾಯಿ ಲೆಕ್ಕಾಚಾರದಲ್ಲಿ 35 ಲಕ್ಷ ರುಪಾಯಿಗಳಾಗಿವೆ. ಇಷ್ಟೆಲ್ಲಾ ಹಣವನ್ನು ಖರ್ಚು ಮಾಡಿ ಮಗಳಿಗೆ ಸೌರವ್ ಗಂಗೂಲಿ ಉನ್ನತ ಶಿಕ್ಷಣ ಕೊಡಿಸಿದ್ದಾರೆ.
 

click me!