ಮುಂಬೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸ್ಮೃತಿ ಮಂಧನಾ ಅವರ ಗೆಳತಿ ಹಾಗೂ ಭಾರತ ಮಹಿಳಾ ತಂಡದ ಆಟಗಾರ್ತಿ ಜೆಮಿಮಾ ರೋಡ್ರಿಗ್ಸ್, ಮಹಿಳಾ ಬಿಗ್‌ಬ್ಯಾಷ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಸ್ಮೃತಿಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ಸ್ಮೃತಿ ಮಂಧನಾ ಜೊತೆ ಇರಲು ಅನುಮತಿ ನೀಡಬೇಕೆಂಬ ಜೆಮಿಮಾ ಮನವಿಯನ್ನು ಫ್ರಾಂಚೈಸಿ ಒಪ್ಪಿಕೊಂಡಿದೆ. ಇದು ಜೆಮಿಮಾಗೂ ಸವಾಲಿನ ಸಮಯವಾಗಿದ್ದು, ಅವರ ಹೃದಯಪೂರ್ವಕ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಬ್ರಿಸ್ಬೇನ್ ಹೀಟ್ ಸಿಇಒ ಹೇಳಿದ್ದಾರೆ.
310
ಸ್ಮೃತಿ ಜತೆ ಇರಲು ಬಯಸಿದ ಜೆಮಿಮಾ
ಸ್ಮೃತಿ ಮದುವೆ ಮುಂದೂಡಲ್ಪಟ್ಟ ಬೆನ್ನಲ್ಲೇ ಜೆಮಿಮಾ ಈ ನಿರ್ಧಾರ ಕೈಗೊಂಡಿದ್ದಾರೆ. ಈ ನಡುವೆ, ಸ್ಮೃತಿ-ಪಲಾಶ್ ಮುಚ್ಚಲ್ ಜೊತೆಗಿನ ಮದುವೆಯಿಂದ ಸಂಪೂರ್ಣವಾಗಿ ಹಿಂದೆ ಸರಿಯಲಿದ್ದಾರೆ ಎಂಬ ವರದಿಗಳೂ ಬರುತ್ತಿವೆ.
ಮದುವೆ ಮುಂದೂಡಲು ಪಲಾಶ್ ಅವರ ಅಕ್ರಮ ಸಂಬಂಧವೇ ಕಾರಣ ಎಂದು ವರದಿಗಳು ಹೇಳುತ್ತಿವೆ. ಭಾನುವಾರದಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸ್ಮೃತಿ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ನಡೆಯಬೇಕಿತ್ತು.
510
ಮದುವೆ ದಿನ ಸ್ಮೃತಿ ತಂದೆಗೆ ಅನಾರೋಗ್ಯ
ಮದುವೆಯ ದಿನ ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧನಾ ಅವರಿಗೆ ಅನಾರೋಗ್ಯ ಉಂಟಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಇದೇ ಕಾರಣಕ್ಕೆ ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಎರಡೂ ಕುಟುಂಬಗಳು ತಿಳಿಸಿದ್ದವು.
610
ಮೇರಿ ಡಿಕೋಸ್ಟಾ ಜತೆ ಪಲಾಶ್ ಫ್ಲರ್ಟ್
ಮೇರಿ ಡಿ ಕೋಸ್ಟಾ ಎಂಬ ಯುವತಿ ಪಲಾಶ್ ಜೊತೆ ನಡೆಸಿದ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಇದು ನಿಜವಾಗಿಯೂ ಪಲಾಶ್ ಜೊತೆಗಿನ ಚಾಟ್ ಹೌದೋ ಅಲ್ಲವೋ ಎಂಬ ಬಗ್ಗೆ ಇನ್ನೂ ಖಚಿತತೆ ಇಲ್ಲ.
710
ಪೂಲ್‌ನಲ್ಲಿ ಒಟ್ಟಿಗೆ ಈಜಲ್ ಪಲಾಶ್ ಆಹ್ವಾನ
ಈ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಕುರಿತು ಎರಡೂ ಕುಟುಂಬಗಳು ಇನ್ನೂ ಪ್ರತಿಕ್ರಿಯಿಸಿಲ್ಲ. ಯುವತಿಯನ್ನು ಮ್ಯಾರಿಯಟ್ ಹೋಟೆಲ್‌ನ ಪೂಲ್‌ನಲ್ಲಿ ಒಟ್ಟಿಗೆ ಈಜಲು ಆಹ್ವಾನಿಸುವುದು, ಸ್ಮೃತಿ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆಗಳು ಮತ್ತು ಪಲಾಶ್ ಅವರ ಉತ್ತರಗಳು ಈ ವಾಟ್ಸಾಪ್ ಚಾಟ್‌ನಲ್ಲಿವೆ.
810
ಮದುವೆ ಸಂಬಂಧಿತ ಫೋಟೋ ಡಿಲೀಟ್ ಮಾಡಿದ ಮಂಧನಾ
ಮದುವೆ ಮುಂದೂಡಿದ ಬೆನ್ನಲ್ಲೇ ಸ್ಮೃತಿ ಮಂಧನಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಪಲಾಶ್ ಮುಚ್ಚಲ್ ಪ್ರಪೋಸ್ ಮಾಡಿದ್ದ ವಿಡಿಯೋವನ್ನೂ ಸ್ಮೃತಿ ತೆಗೆದುಹಾಕಿದ್ದಾರೆ.
910
ಸ್ಮೃತಿ ಆಪ್ತೆಯರ ಪೋಸ್ಟ್‌ಗಳು ಡಿಲೀಟ್
ಸ್ಮೃತಿ ಮಾತ್ರವಲ್ಲದೆ, ಅವರ ಆಪ್ತ ಸ್ನೇಹಿತೆಯರಾದ ಜೆಮಿಮಾ ರೋಡ್ರಿಗ್ಸ್ ಮತ್ತು ಶ್ರೇಯಾಂಕ ಪಾಟೀಲ್ ಕೂಡ ಸ್ಮೃತಿ ಮದುವೆಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ತಮ್ಮ ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರೆ.
1010
ಸ್ಮೃತಿ ತಂದೆ ಡಿಸ್ಚಾರ್ಜ್
ಇದೀಗ ಸ್ಮೃತಿ ಮಂಧನಾ ಅವರ ತಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಿದ್ದೂ ಸ್ಮೃತಿ ಮಂಧನಾ ಹಾಗೂ ಪಲಾಶ್ ಮುಚ್ಚಲ್ ಅವರ ಮದುವೆಯ ಕುರಿತಂತೆ ಯಾವುದೇ ಅಪ್‌ಡೇಟ್ ಹೊರಬಿದ್ದಿಲ್ಲ.