ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ 2025ರ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಮೃತಿ ಮಂಧನಾ ಅವರ ನಿವ್ವಳ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಮ್ಯಾಚ್ ಫೀಸ್, ಬಿಸಿಸಿಐ ಕಾಂಟ್ರ್ಯಾಕ್ಟ್, ಡಬ್ಲ್ಯುಪಿಎಲ್, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ..
ಭಾರತೀಯ ಮಹಿಳಾ ಕ್ರಿಕೆಟ್ ತಂಡ 2025ರ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸುವಲ್ಲಿ ಸ್ಟಾರ್ ಓಪನರ್ ಸ್ಮೃತಿ ಮಂಧನಾ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ, ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.
25
ಸ್ಮೃತಿ ಮಂಧನಾ ಆದಾಯ ವಿವರ
ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಬಹುಮಾನದ ರೂಪದಲ್ಲಿ 40 ಕೋಟಿ ರೂ. ಸಿಕ್ಕಿದೆ. ಇದರ ಜೊತೆಗೆ ಬಿಸಿಸಿಐ 51 ಕೋಟಿ ರೂ. ಬೋನಸ್ ಘೋಷಿಸಿದೆ. ಅತಿ ಹೆಚ್ಚು ಸಂಪಾದಿಸುವ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ಸ್ಮೃತಿ ಮಂಧನಾ ಅವರ ಆದಾಯ ಮತ್ತು ಆಸ್ತಿ ವಿವರಗಳು ಸದ್ಯ ಇಂಟರ್‌ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿವೆ.
35
ಸ್ಮೃತಿ ಮಂಧನಾ ವಾರ್ಷಿಕ ಸಂಬಳ ಎಷ್ಟು?
ಈಗಾಗಲೇ ಪುರುಷರಿಗೆ ಸಮಾನವಾಗಿ ಮಹಿಳಾ ಕ್ರಿಕೆಟಿಗರಿಗೂ ಬಿಸಿಸಿಐ ಮ್ಯಾಚ್ ಫೀಸ್ ಹೆಚ್ಚಿಸಿದೆ. ಇದರ ಪ್ರಕಾರ, ಸ್ಮೃತಿ ಒಂದು ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಏಕದಿನಕ್ಕೆ 6 ಲಕ್ಷ ರೂ., ಮತ್ತು ಟಿ20 ಪಂದ್ಯಕ್ಕೆ 3 ಲಕ್ಷ ರೂ. ಪಡೆಯುತ್ತಾರೆ. ಇದಲ್ಲದೆ, ಬಿಸಿಸಿಐ ಗ್ರೇಡ್-ಎ ಸೆಂಟ್ರಲ್ ಕಾಂಟ್ರ್ಯಾಕ್ಟ್ ಅಡಿಯಲ್ಲಿ ಅವರು ವಾರ್ಷಿಕ 50 ಲಕ್ಷ ರೂ. ಸಂಬಳ ಪಡೆಯುತ್ತಾರೆ.
ಮಹಿಳಾ ಪ್ರೀಮಿಯರ್ ಲೀಗ್ (WPL) ಮೊದಲ ಸೀಸನ್‌ನಲ್ಲಿ ಆರ್‌ಸಿಬಿ ಸ್ಮೃತಿಯನ್ನು 3.4 ಕೋಟಿ ರೂ.ಗೆ ಖರೀದಿಸಿತ್ತು. ಹ್ಯುಂಡೈ, ಹೀರೋ, ರೆಡ್ ಬುಲ್, ನೈಕ್, ಮಾಸ್ಟರ್‌ಕಾರ್ಡ್, ಬಾಟಾ, ಪವರ್, ಗಲ್ಫ್ ಆಯಿಲ್‌ನಂತಹ ಅನೇಕ ಪ್ರಸಿದ್ಧ ಬ್ರ್ಯಾಂಡ್‌ಗಳಿಗೆ ಅವರು ರಾಯಭಾರಿಯಾಗಿದ್ದಾರೆ. ಪ್ರತಿ ಬ್ರ್ಯಾಂಡ್ ಒಪ್ಪಂದಕ್ಕೆ ಸ್ಮೃತಿ 75 ಲಕ್ಷದಿಂದ 1.5 ಕೋಟಿ ರೂ.ವರೆಗೆ ಪಡೆಯುತ್ತಾರೆ ಎನ್ನಲಾಗಿದೆ.
55
ಸ್ಮೃತಿ ಮಂಧನಾ ಬಳಿಯಿದೆ ಐಷಾರಾಮಿ ಮನೆ
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸ್ಮೃತಿಗೆ ಜಿಮ್, ಹೋಮ್ ಥಿಯೇಟರ್‌ನಂತಹ ಸೌಲಭ್ಯಗಳಿರುವ ಐಷಾರಾಮಿ ಮನೆಯಿದೆ. ಮುಂಬೈ ಮತ್ತು ದೆಹಲಿಯಲ್ಲೂ ಆಸ್ತಿಗಳಿವೆ ಎನ್ನಲಾಗಿದೆ. ಅವರು ಎಸ್‌ಎಂ18 ಸ್ಪೋರ್ಟ್ಸ್ ಕೆಫೆ ಎಂಬ ರೆಸ್ಟೋರೆಂಟ್ ಕೂಡ ನಡೆಸುತ್ತಿದ್ದಾರೆ. ಸ್ಮೃತಿ ಬಳಿ ಸುಮಾರು 70 ಲಕ್ಷ ರೂ. ಮೌಲ್ಯದ ರೇಂಜ್ ರೋವರ್ ಇವೊಕ್ ಕಾರು ಇದೆ. ಸದ್ಯ ಸ್ಮೃತಿ ಮಂಧನಾ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 34 ಕೋಟಿ ರೂ. ಎಂದು ಅಂದಾಜಿಸಲಾಗಿದೆ.