ಡಿ.07ಕ್ಕೆ ಸ್ಮೃತಿ ಮಂಧನಾ ಮದುವೆ ಪೋಸ್ಟ್‌ಗೆ ಸಹೋದರ ಸ್ಪಷ್ಟನೆ, ಏನಿದು ಹೊಸ ಬಾಂಬ್

Published : Dec 02, 2025, 08:12 PM IST

ಡಿ.07ಕ್ಕೆ ಸ್ಮೃತಿ ಮಂಧನಾ ಮದುವೆ ಪೋಸ್ಟ್‌ಗೆ ಸಹೋದರ ಸ್ಪಷ್ಟನೆ, ಏನಿದು ಹೊಸ ಬಾಂಬ್, ಪಲಾಶ್ ಮುಚ್ಚಾಲ್ ಹಾಗೂ ಮಂಧನಾ ಮದುವೆ ಬಹುತೇಕ ರದ್ದಾಗಿದೆ ಎಂಬ ಮಾತುಗಳ ನಡುವೆ ಡಿಸೆಂಬರ್ 7ಕ್ಕೆ ಹೊಸ ದಿನಾಂಕ ಫಿಕ್ಸ್ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ.

PREV
15
ಡಿಸೆಂಬರ್ 7ಕ್ಕೆ ಸ್ಮೃತಿ ಮಂಧನಾ ಮದುವೆ?

ಭಾರತೀಯ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧನಾ ಮದುವೆ ದಿಢೀರ್ ಮುಂದೂಡಿಕೆಯಾಗಿ ಕೋಲಾಹಲ ಸೃಷ್ಟಿಸಿತ್ತು. ಸ್ಮೃತಿ ಮಂಧನಾ ತಂದೆ ದಿಢೀರ್ ಆಸ್ಪತ್ರೆ ದಾಖಲಾದ ಕಾರಣ ಮದುವೆ ಮುಂದೂಡಿಕೆಯಾಗಿದೆ ಎಂದು ವರದಿಯಾಗಿತ್ತು. ಆದರೆ ಪಲಾಶ್ ಮುಚ್ಚಾಲ್ ಬೇರೊಬ್ಬ ಯುವತಿ ಜೊತೆ ಸಂಬಂಧ ಇರುವ ಕಾರಣದಿಂದ ಮದುವೆ ಬಹುತೇಕ ಮುರಿದು ಬಿದ್ದಿತ್ತು. ಇದರ ನಡುವೆ ಇದೀಗ ಡಿಸೆಂಬರ್ 7ಕ್ಕೆ ಮದುವೆ ಎಂಬ ಮಾಹಿತಿ ಹರಿದಾಡುತ್ತಿದೆ.

25
ಸ್ಮೃತಿ ಸಹೋದರನ ಸ್ಪಷ್ಟನೆ

ಡಿಸೆಂಬರ್ 7ಕ್ಕೆ ಸ್ಮೃತಿ ಮಂಧನಾ ಮದುವೆ ಎಂಬ ಮಾಹಿತಿಗಳು, ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿಡಾಡುತ್ತಿದೆ. ಸ್ಮೃತಿ ಮಂಧನಾ ಹಾಗೂ ಪಲಾಶ್ ಮುಚ್ಚಾಲ್ ಕುಟುಂಬಸ್ಥರು ಹೊರಡಿಸಿರುವ ಆಮಂತ್ರಣ ಪತ್ರಿಕೆ ಎಂಬ ಪೋಸ್ಟ್ ವೈರಲ್ ಆಗಿದೆ.ಇದರ ಬೆನ್ನಲ್ಲೇ ಸ್ಮೃತಿ ಮಂಧನಾ ಸಹೋದರ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ಊಹಾಪೋಹ ಸುದ್ದಿಗಳು, ಗಾಳಿ ಸುದ್ದಿಗೆ ಕಿವಿಗೊಡಬೇಡಿ. ಮದುವೆ ದಿನಾಂಕ ಫಿಕ್ಸ್ ಮಾಡಿಲ್ಲ ಎಂದಿದ್ದಾರೆ.

35
ಸ್ಮೃತಿ ಮದುವೆ ಯಾವಾಗ?

ಸ್ಮೃತಿ ಮಂಧನಾ ಮದುವೆ ಯಾವಾಗ ಅನ್ನೋ ಕುರಿತು ಕುಟುಂಬ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಕುರಿತು ಯಾವುದೇ ಆಮಂತ್ರಣ ಹೊರಡಿಸಿಲ್ಲ. ಸ್ಮೃತಿ ಮಂಧನಾ ಮದುವೆ ಕುರಿತು ಗಾಳಿ ಸುದ್ದಿಗಳು ಹರಿದಾಡುತ್ತಿದೆ. ಆದರೆ ಇದ್ಯಾವುದು ಕುಟುಂಬದ ನಿರ್ಧಾರಗಳಲ್ಲ. ಇದಕ್ಕೆ ಕಿವಿಗೊಡಬೇಡಿ ಎಂದು ಸ್ಮೃತಿ ಮಂಧನಾ ಸಹೋದರ ಹೇಳಿದ್ದಾರೆ.

45
ಅದ್ದೂರಿಯಾಗಿ ನಡೆದಿದ್ದ ಕಾರ್ಯಕ್ರಮ

ಸ್ಮೃತಿ ಮಂಧನಾ ಮದುವೆಗೂ ಮೊದಲು ಮೆಹಂದಿ, ಹಳದಿ, ಸಂಗೀತ್ ಸೆರಮನಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರೆದಿತ್ತು. ಈ ಎಲ್ಲಾ ಕಾರ್ಯಕ್ರಮದಲ್ಲಿ ಸ್ಮೃತಿ ಮಂಧನಾ ಹಾಗೂ ಪಲಾಶ್ ಮುಚ್ಚಾಲ್ ಅಷ್ಟೇ ಸಂಭ್ರಮದಿಂದ ಪಾಲ್ಗೊಂಡಿದ್ದರು. ಇಬ್ಬರು ಕುಣಿದು ಕುಪ್ಪಳಿಸಿದ್ದರು. ಆದರೆ ನವೆಂಬರ್ 23ಕ್ಕೆ ಮದುವೆ ನಡೆಯಬೇಕಿತ್ತು. ಅದೇ ದಿನ ಬೆಳಗ್ಗೆ ಮದುವೆ ಮುಂದೂಡಿಕೆ ಖಚಿತಗೊಂಡಿತ್ತು.

ಅದ್ದೂರಿಯಾಗಿ ನಡೆದಿದ್ದ ಕಾರ್ಯಕ್ರಮ

55
ಸ್ಮೃತಿ ತಂದೆ ಚೇತರಿಸಿಕೊಂಡರೂ ಮದುವೆ ಸುದ್ದಿ ಇಲ್ಲ

ಸ್ಮೃತಿ ಮಂಧನಾ ಆರೋಗ್ಯದ ಕಾರಣದಿಂದ ಮದುವೆ ಮುಂದೂಡಿಕೆಯಾಗಿತ್ತು. ಆದರೆ ಶ್ರೀನಿವಾಸ್ ಮಂಧನಾ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದರೂ ಮದುವೆ ಕುರಿತು ಕುಟುಂಬ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇತ್ತ ಸ್ಮೃತಿ ಮಂಧನಾ ಕೂಡ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಿಂದ ಪಲಾಶ್ ಮಚ್ಚಾಲ್ ಜೊತೆಗಿನ ಎಲ್ಲಾ ಫೋಟೋ ವಿಡಿಯೋ ಡಿಲೀಟ್ ಮಾಡಿದ್ದಾರೆ.

ಸ್ಮೃತಿ ತಂದೆ ಚೇತರಿಸಿಕೊಂಡರೂ ಮದುವೆ ಸುದ್ದಿ ಇಲ್ಲ

Read more Photos on
click me!

Recommended Stories