14 ವರ್ಷದ ವೈಭವ್ ಸೂರ್ಯವಂಶಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (SMAT) ಅತಿ ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾನೆ. ಬಿಹಾರ ಪರ 108 ರನ್ (ಔಟಾಗದೆ) ಗಳಿಸಿ ದಾಖಲೆ ಬರೆದಿದ್ದಾನೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಅಬ್ಬರಿಸಿದ್ದಾರೆ. 14 ವರ್ಷ 250 ದಿನಗಳ ವಯಸ್ಸಿನಲ್ಲಿ, ಮಹಾರಾಷ್ಟ್ರ ವಿರುದ್ಧ ಬಿಹಾರ ಪರ 61 ಎಸೆತಗಳಲ್ಲಿ 108* ರನ್ ಗಳಿಸಿ ಇತಿಹಾಸ ನಿರ್ಮಿಸಿದ್ದಾರೆ.
ಈ ಹಿಂದೆ ಈ ದಾಖಲೆ ಮಹಾರಾಷ್ಟ್ರದ ವಿಜಯ್ ಜೋಲ್ (18 ವರ್ಷ 118 ದಿನ) ಹೆಸರಲ್ಲಿತ್ತು. ವೈಭವ್ ನಾಲ್ಕು ವರ್ಷ ಮೊದಲೇ ಈ ದಾಖಲೆ ಮುರಿದಿರುವುದು ಅವರ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ.
24
61 ಎಸೆತಗಳಲ್ಲಿ 7 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ ಶತಕ
ಈಡನ್ ಗಾರ್ಡನ್ಸ್ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ಸಹಕರಿಸದಿದ್ದರೂ, ವೈಭವ್ ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. 61 ಎಸೆತಗಳಲ್ಲಿ 7 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 108* ರನ್ ಗಳಿಸಿದರು.
ಬಿಹಾರ ತಂಡ ಗಳಿಸಿದ ಒಟ್ಟು 176 ರನ್‌ಗಳಲ್ಲಿ ಅರ್ಧಕ್ಕಿಂತ ಹೆಚ್ಚು ರನ್‌ಗಳು ವೈಭವ್ ಬ್ಯಾಟ್‌ನಿಂದಲೇ ಬಂದಿರುವುದು ವಿಶೇಷ.
34
15 ವರ್ಷ ತುಂಬುವ ಮುನ್ನವೇ ಮೂರು ಟಿ20 ಶತಕ ಸಿಡಿಸಿ ವೈಭವ್
ಇದು SMATನಲ್ಲಿ ವೈಭವ್‌ಗೆ ಮೊದಲ ಶತಕ. ಆದರೆ ಅವರ ಟಿ20 ದಾಖಲೆಗಳು ಅಚ್ಚರಿ ಮೂಡಿಸುತ್ತವೆ. ಐಪಿಎಲ್ 2025ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಶತಕ ಬಾರಿಸಿದ್ದರು. 15 ವರ್ಷ ತುಂಬುವ ಮುನ್ನವೇ ಮೂರು ಟಿ20 ಶತಕ ಸಿಡಿಸಿದ್ದಾರೆ.
ಇಷ್ಟು ಚಿಕ್ಕ ವಯಸ್ಸಿನಲ್ಲೇ ಅವರ ಶಾಟ್ ಆಯ್ಕೆ, ಪಂದ್ಯದ ತಿಳುವಳಿಕೆಯನ್ನು ಕ್ರಿಕೆಟ್ ಪಂಡಿತರು ಶ್ಲಾಘಿಸುತ್ತಿದ್ದಾರೆ.
ಬಿಹಾರ 176/3 ಗಳಿಸಿದರೂ, ಮಹಾರಾಷ್ಟ್ರ 19.1 ಓವರ್‌ಗಳಲ್ಲಿ ಗುರಿ ತಲುಪಿತು. ವೈಭವ್ ಅವರ ಅದ್ಭುತ ಇನ್ನಿಂಗ್ಸ್ ಹೊರತಾಗಿಯೂ, ಕಳಪೆ ಬೌಲಿಂಗ್‌ನಿಂದ ಬಿಹಾರ ಸೋತಿತು. ಆದರೂ ಪಂದ್ಯದ ಹೈಲೈಟ್ ವೈಭವ್ ಶತಕವೇ ಆಗಿತ್ತು.