ಗೆಲುವಿನ ಬಳಿಕ ಆರ್‌ಸಿಬಿ, ವಿರಾಟ್ ಕೊಹ್ಲಿ ಅಣಕಿಸಿದ ಶುಬಮನ್ ಗಿಲ್, ಶುರುವಾಯ್ತು ವಿವಾದ

Published : May 01, 2026, 03:34 PM IST

ಗೆಲುವಿನ ಬಳಿಕ ಆರ್‌ಸಿಬಿ, ವಿರಾಟ್ ಕೊಹ್ಲಿ ಅಣಕಿಸಿದ ಶುಬಮನ್ ಗಿಲ್, ಶುರುವಾಯ್ತು ವಿವಾದ, ಗಿಲ್ ವಿಕೆಟ್ ಪತನವನ್ನು ಕೊಹ್ಲಿ ಸಂಭ್ರಮಿಸಿದ ಪರಿಯಲ್ಲೇ ರಹಸ್ಯ ಒಂದು ಅಡಗಿತ್ತು. ಇದೀಗ ಗಿಲ್ ಪೋಸ್ಟ್‌ನಿಂದ ಸಾಬೀತಾಗಿದೆ.

PREV
15
ಆರ್‌ಸಿಬಿ ಸೋಲಿಸಿದ ಜಿಟಿ ನಾಯಕನಿಂದ ಪೋಸ್ಟ್

ಆರ್‌ಸಿಬಿ ಗೆಲುವಿನ ನಾಗಾಲೋಟಕ್ಕೆ ಗುಜರಾತ್ ಟೈಟಾನ್ಸ್ ಕಳೆದ ಪಂದ್ಯದಲ್ಲಿ ಬ್ರೇಕ್ ಹಾಕಿತ್ತು. ಆರ್‌ಸಿಬಿ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿತ್ತು. 155 ರನ್‌ಗೆ ಆರ್‌ಸಿಬಿ ತಂಡ ಕಟ್ಟಿ ಹಾಕಿ ಗುಜರಾತ್ ಗೆಲುವಿನ ಸಂಭ್ರಮ ಆಚರಿಸಿತ್ತು. ಆದರೆ ಈ ಪಂದ್ಯಕ್ಕೂ ಮೊದಲು, ಪಂದ್ಯದ ನಡುವೆ ಹಾಗೂ ಪಂದ್ಯದ ಬಳಿಕ ನಡೆದ ಕೆಲ ಘಟನೆಗಳು ಇದೀಗ ಭಾರಿ ಚರ್ಚೆಯಾಗುತ್ತಿದೆ. ಈ ಪೈಕಿ ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿಯನ್ನು ಜಿಟಿ ನಾಯಕ ಗಿಲ್ ಅಣಕಿಸಿ ಪೋಸ್ಟ್ ಹಾಕಿದ್ದಾರೆ.

25
ಪ್ಲೋ ಬೋಲ್ಡ್ ಟ್ಯಾಗ್

ಸುಲಭ ಟಾರ್ಗೆಟ್ ಬೆನ್ನಟ್ಟಿದ್ದ ಗುಜರಾತ್ ಟೈಟಾನ್ಸ್, ಆರ್‌ಸಿಬಿ ಮಣಿಸಿತ್ತು. ಗೆಲುವಿನ ಬಳಿಕ ಶುಬಮನ್ ಗಿಲ್, ತಮ್ಮ ಗೆಲುವಿನ ಸಂಭ್ರಮದಲ್ಲಿ ಕೊಹ್ಲಿ ಸಪ್ಪೆ ಮೊರೆಯಲ್ಲಿರುವ ಫೋಟೋ ಒಂದನ್ನು ಹಾಕಿದ್ದಾರೆ. ಇಷ್ಟೇ ಅಲ್ಲ ಆರ್‌ಸಿಬಿಯ ಟ್ಯಾಗ್ ಲೈನ್ ಪ್ಲೇ ಬೋಲ್ಡ್‌ನ್ನು ಇದೀಗ ಗಿಲ್ ತಮ್ಮ ಪೋಸ್ಟ್‌ನಲ್ಲಿ ಬಳಸಿಕೊಂಡು ಕೊಹ್ಲಿ ಹಾಗೂ ಆರ್‌ಸಿಬಿ ಅಕಣಿಸಿದ್ದಾರೆ.

35
ಆರ್‌ಸಿಬಿ ರೋಸ್ಟ್ ಮಾಡಿದ ಗಿಲ್

ಆರ್‍‌‌ಸಿಬಿ ವಿರುದ್ದ ಜೇಸನ್ ಹೋಲ್ಡರ್ ಉತ್ತಮ ಪ್ರದರ್ಶನ ನೀಡಿದ್ದರು. ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೋಲ್ಡರ್ ಫೋಟೋ ಹಾಕಿ ಪ್ಲೇ ಹೋಲ್ಡ್, ಬೋಲ್ಡ್ ಪ್ರದರ್ಶನ ಎಂದು ಬರೆದುಕೊಂಡಿದ್ದಾರೆ. ಹೋಲ್ಡರ್ ಫೋಟೋ ಮೊದಲು ಹಾಕಿದ್ದಾರೆ. ಬಳಿಕ ಗಿಲ್ ಸಿಕ್ಸರ್ ಸಿಡಿಸಿದ ಬಳಿಕ ಕೊಹ್ಲಿ , ಗಿಲ್ ದಿಟ್ಟಿಸಿ ನೋಡುತ್ತಿರುವ ಫೋಟೋವನ್ನು ಬಳಸಿದ್ದಾರೆ.

45
ಕೊಹ್ಲಿ ಸೆಲೆಬ್ರೆಷನ್

ಶುಬಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ನಡುವಿನ ಸಂಬಂಧ ಹಳಸಿದೆಯಾ? ಪಂದ್ಯದ ನಡುವೆ ಇವರಿಬ್ಬರ ಮಾತುಕತೆ, ಒಳಗೊಳಗೆ ನಡೆಯುತ್ತಿದ್ದ ಸ್ಲೆಡ್ಜಿಂಗ್ ಭಾರಿ ಗಮನಸೆಳೆದಿತ್ತು. ಅಬ್ಬರಿಸುತ್ತಿದ್ದ ಶುಬಮನ್ ಗಿಲ್ ಕ್ಯಾಚ್ ಪಡೆದ ವಿರಾಟ್ ಕೊಹ್ಲಿ ಅತಿಯಾಗಿ ಸಂಭ್ರಮಿಸಿದ್ದರು. ರಭಸವಾಗಿ ಬಂದ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ, ಚೆಂಡನ್ನು ಮೈದಾನಕ್ಕೆ ಎಸೆದು ಗಿಲ್ ಗುರಾಯಿಸಿ ಸಂಭ್ರಮಿಸಿದ್ದರು.

55
ಆರ್‌ಸಿಬಿ ಫ್ಯಾನ್ಸ್ ಗರಂ

ಪಂದ್ಯದ ನಡುವೆಯೂ ಕೊಹ್ಲಿ ಹಾಗೂ ಗಿಲ್ ನಡುವಿನ ಸಣ್ಣ ಸಣ್ಣ ಸ್ಲೆಡ್ಜಿಂಗ್ ಅಬಿಮಾನಿಗಳನ್ನು ರಂಜಿಸಿತ್ತು. ಆದರೆ ಪಂದ್ಯದ ಬಳಿಕ ಗಿಲ್ ಪೋಸ್ಟ್ ಆರ್‌ಸಿಬಿ ಅಭಿಮಾನಿಗಳನ್ನು ಕೆರಳಿಸಿದೆ. ಇತ್ತೀಚೆಗೆ ಸಿಎಸ್‌ಕೆ ವಿರುದ್ದ ಗೆಲುವು ದಾಖಳಿಸಿದ ಬಳಿಕ ಗಿಲ್ ಇದೇ ರೀತಿ ಪೋಸ್ಟ್ ಮಾಡಿ ಭಾರಿ ವಿವಾದ ಸೃಷ್ಟಿಸಿದ್ದರು.

ಆರ್‌ಸಿಬಿ ಫ್ಯಾನ್ಸ್ ಗರಂ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories