SM 18.. ಕ್ರಿಕೆಟರ್ ಸ್ಮೃತಿ ಮಂಧಾನ ಅರಮನೆಯಂತಹ ಮನೆ ಹೇಗಿದೆ ನೋಡಿ.. PHOTOS

Published : Apr 30, 2026, 10:12 PM IST

Smriti Mandhana: ಭಾರತೀಯ ಮಹಿಳಾ ಕ್ರಿಕೆಟರ್, ಆರ್ ಸಿಪಿ ಸ್ಟಾರ್ ಸ್ಮೃತಿ ಮಂಧಾನ ಮನೆಯ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮನೆಯನ್ನು ಹೊರಗಿನಿಂದ ನೋಡಿದರೆ ಭವ್ಯವಾದ ಅರಮನೆಯಂತೆ ಕಾಣುತ್ತದೆ. ಆದರೆ ಒಳಗಡೆ ಏನೇನಿದೆ ನೋಡೋಣ. 

PREV
17
ಸ್ಮೃತಿ ಮಂಧಾನ

ಸ್ಮೃತಿ ಮಂಧಾನ ಇಂದು ಭಾರತೀಯ ಕ್ರಿಕೆಟ್‌ನಲ್ಲಿ ಜನಪ್ರಿಯ ತಾರೆ. ಕ್ರಿಕೆಟ್ ಹೊರತಾಗಿ ಸ್ಮೃತಿ ಮಂಧಾನ ತಮ್ಮ ಶಾಂತ ಸ್ವಭಾವ, ಸರಳ ಮನೋಭಾವ ಮತ್ತು ಒತ್ತಡವನ್ನು ನಿಭಾಯಿಸುವ ಸ್ಥಿರ ವಿಧಾನದಿಂದಾಗಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸ್ಮೃತಿ ಮಂಧಾನ ಹಂಚಿಕೊಂಡಿರುವ ಮನೆಯ ಫೋಟೊ ವೈರಲ್ ಆಗುತ್ತಿದ್ದು, ಹೇಗಿದೆ ನೋಡಿ ಕ್ರಿಕೆಟ್ ಸ್ಟಾರ್ ಅರಮನೆಯಂತಹ ಮನೆ.

27
ಹೇಗಿದೆ ಸ್ಮೃತಿ ಮಂಧಾನ ಭವ್ಯ ಅರಮನೆ

ಸ್ಮೃತಿ ಮಂಧಾನ ಮನೆ ಖಂಡಿತವಾಗಿಯೂ ಹೊರಗಿನಿಂದ ನೋಡಿದರೆ ಭವ್ಯವಾದ ಅರಮನೆಯಂತಿದೆ. ಮನೆಯ ಮುಖ್ಯದ್ವಾರದಲ್ಲಿ SM 18 ಎಂದು ಸ್ಮೃತಿ ಹೆಸರನ್ನು ಹಾಗೂ ಜೆರ್ಸಿ ನಂಬರ್ ಬರೆಯಲಾಗಿದೆ. ಮನೆಯ ಒಳಗಡೆ ಸಿನಿಮಾ ಸ್ಟಾರ್ ಗಳ ಮನೆಯಂತೆ ಲಕ್ಸುರಿ ಇಲ್ಲ. ಸ್ಮೃತಿ ಮಂಧಾನರಂತೆ ಅವರ ಮನೆ ಕೂಡ ತುಂಬಾನೆ ಸಿಂಪಲ್ ಆಗಿ, ಸಾಮಾನ್ಯ ವ್ಯಕ್ತಿಗೆ ವಾಸಿಸಲು ಮನೆ ಹೇಗಿರಬೇಕೋ, ಅದೇ ರೀತಿಯಾಗಿದೆ.

37
ಸುಂದರವಾದ ಲಿವಿಂಗ್ ರೂಮ್

ಲಿವಿಂಗ್ ರೂಮ್ ಸಿಂಪಲ್ ಮತ್ತು ಎಲಿಗೆಂಟ್ ಆಗಿದೆ. ಕೋಣೆಯ ಒಂದು ಬದಿಯನ್ನು ದೊಡ್ಡ ಕಂದು ಬಣ್ಣದ ಸೋಫಾ ಇದ್ದು, ಹೊರಗಿನ ಕಿಟಕಿಗಳಿಗೆ ಅಭಿಮುಖವಾಗಿದೆ. ಸೋಫಾ ಬಳಿ ವುಡನ್ ಲ್ಯಾಂಪ್ ಇದೆ. ಇಡೀ ಕೋಣೆಯು ಮುಕ್ತ, ಶಾಂತವಾಗಿದ್ದು, ಇದು ಸ್ಮೃತಿ ಮಂಧಾನ ಕುಟುಂಬ ಮಾತನಾಡುವ, ಪಂದ್ಯಗಳನ್ನು ನೋಡುವ ಅಥವಾ ಸಾಮಾನ್ಯ ಸಂಜೆ ವಿಶ್ರಾಂತಿ ಪಡೆಯುವ ಸ್ಥಳದಂತೆ ಕಾಣುತ್ತದೆ.

47
ಟ್ರೋಫಿ ವಾಲ್

ಸ್ಮೃತಿ ಮನೆಯ ಒಂದು ಕೋಣೆಯುದ್ದಕ್ಕೂ ಗೋಡೆಯ ಮೇಲೆ, ಒಂದು ದೊಡ್ಡ ಕ್ಯಾಬಿನೆಟ್ ನಿರ್ಮಾಣ ಮಾಡಿದ್ದು, ಅದರಲ್ಲಿ ಪೂರ್ತಿಯಾಗಿ ಸ್ಮೃತಿ ಮಂಧಾನಗೆ ಸಿಕ್ಕ ಟ್ರೋಫಿ , ಸರ್ಟಿಫಿಕೇಟ್, ಬಹುಮಾನ ಮತ್ತು ಪದಕಗ ಎಲ್ಲವೂ ಇವೆ. ಕಪಾಟುಗಳನ್ನು ಅಚ್ಚುಕಟ್ಟಾಗಿ ವಿಂಗಡಿಸಲಾಗಿದೆ.

57
ವಾಕಿಂಗ್ ವಾರ್ಡ್ ರೋಬ್

ವಾಕಿಂಗ್ ವಾರ್ಡ್ ರೋಬ್ ಇದ್ದು, ಇದು ಸುಂದರವಾಗಿದೆ. ಇಲ್ಲಿ ಜಾಕೆಟ್‌ಗಳು, ಶರ್ಟ್‌ಗಳು ಮತ್ತು ಕ್ಯಾಶುಯಲ್ ಬಟ್ಟೆಗಳೆಲ್ಲವೂ ಸೆಪೆರೇಟ್ ಆಗಿ ಜೋಡಿಸಲಾಗಿದೆ. ಕೆಳಭಾಗದಲ್ಲಿ, ಸ್ಪೋರ್ಟ್ಸ್ ಶೂಗಳನ್ನು ಹೊಂದಿರುವ ಶೂ ರ್ಯಾಕ್ ಇದೆ. ನೆಲದ ಬಳಿ ಒಂದು ಟ್ರಾವೆಲ್ ಬ್ಯಾಗ್ ಇದೆ. ಇನ್ನು ವಾರ್ಡ್ರೋಬ್ ಚೌಕಟ್ಟಿನೊಳಗೆ ಒಂದು ಸಣ್ಣ ಆಸನವನ್ನು ನಿರ್ಮಿಸಲಾಗಿದೆ, ಇದು ಕುಳಿತು ಬಟ್ಟೆಗಳನ್ನು ಆರಿಸಲು ಸುಲಭವಾಗುವಂತೆ ಮಾಡಲಾಗಿದೆ.

67
ಸ್ಮೃತಿ ಮಂಧಾನ ಬೆಡ್ ರೂಮ್

ಸ್ಮೃತಿ ಮಂಧಾನ ಮಲಗುವ ಕೋಣೆ ಫ್ರೆಂಡ್ಲಿಯಾಗಿದೆ. ಮರದ ನೆಲಕ್ಕೆ ಹೊಂದಿಕೆಯಾಗುವ ಕಂದು ಬಣ್ಣದ ಹಾಸಿಗೆಯನ್ನು ಹೊಂದಿದೆ. ಪಕ್ಕದ ಮೇಜಿನ ಮೇಲೆ, ಕೆಲವು 'ಶಿನ್‌ಚಾನ್' ಕಾರ್ಟೂನ್ ಟಾಯ್ ಗಳಿವೆ. ಹಾಸಿಗೆಯ ಮೇಲೆ ಸ್ಮೃತಿ ಮಂಧಾನ ಭಾವಚಿತ್ರವಿದೆ. ಮಲಗುವ ಕೋಣೆಯ ವಾರ್ಡ್ರೋಬ್ ಬಾಗಿಲುಗಳು ಹಳದಿ ಮತ್ತು ಬಿಳಿ ಫಲಕಗಳನ್ನು ಹೊಂದಿವೆ. ಅಲ್ಲಿ ಕ್ರಿಕೆಟ್ ಬ್ಯಾಟ್ ಕೂಡ ಇವೆ.

77
ಸ್ಮೃತಿಯ ಹೋಮ್ ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್

ಅವರ ಜಿಮ್ ಪ್ರದೇಶದಲ್ಲಿ ಬೆಂಚ್ ಪ್ರೆಸ್ ಸೆಟಪ್, ಡಂಬ್ಬೆಲ್ಸ್, ಪ್ಲೇಟ್‌ಗಳು, ಸೈಕ್ಲಿಂಗ್ ಟ್ರೈನರ್ ಮತ್ತು ಮ್ಯಾಟ್‌ಗಳಂತಹ ಉಪಕರಣಗಳಿವೆ. ಇನ್ನು ಸ್ಮೃತಿ ಮಂಧಾನ ಮನೆಯೊಳಗೆ ಸುಂದರವಾದ ಇನ್ ಡೋರ್ ಸ್ವಿಮ್ಮಿಂಗ್ ಪೂಲ್ ಕೂಡ ಇದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories