ಲಾರ್ಡ್ಸ್ ಟೆಸ್ಟ್‌ ಪಂದ್ಯ ಸೋಲಿನ ಬೆನ್ನಲ್ಲೇ ಅಚ್ಚರಿ ಹೇಳಿಕೆ ನೀಡಿದ ಟೀಂ ಇಂಡಿಯಾ ಕ್ಯಾಪ್ಟನ್ ಶುಭ್‌ಮನ್ ಗಿಲ್!

Published : Jul 15, 2025, 11:41 AM IST

ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ 22 ರನ್ ಅಂತರದ ರೋಚಕ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಗಿಲ್, ಈ ಸೋಲಿನ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಗಿಲ್ ಏನಂದ್ರು ನೀವೇ ನೋಡಿ. 

PREV
18

ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಬರ್ಮಿಂಗ್‌ಹ್ಯಾಮ್ ಟೆಸ್ಟ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಆದರೆ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿ ಕೇವಲ 22 ರನ್ ಅಂತರ ವಿರೋಚಿತ ಸೋಲು ಅನುಭವಿಸಿತ್ತು.

28

ಇದೀಗ ಐದು ಪಂದ್ಯಗಳ ಆಂಡರ್‌ಸನ್-ತೆಂಡೂಲ್ಕರ್ ಟೆಸ್ಟ್ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 2-1 ಅಂತರದ ಮುನ್ನಡೆ ಸಾಧಿಸಿದೆ. ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯವು ಉಭಯ ತಂಡಗಳ ಸಮಬಲದ ಹೋರಾಟಕ್ಕೆ ಸಾಕ್ಷಿಯಾಯಿತು.

38

ಆದರೆ ಕೊನೆಯವರೆಗೂ ಗೆಲುವಿಗಾಗಿ ಭಾರತ ತಂಡ ಹೋರಾಟ ನಡೆಸಿತಾದರೂ, ಅಂತಿಮ ಘಟ್ಟದಲ್ಲಿ ಮುಗ್ಗರಿಸಿತು. ಇನ್ನು ಪಂದ್ಯ ಮುಕ್ತಾಯದ ಬಳಿಕ ಟೀಂ ಇಂಡಿಯಾ ಕ್ಯಾಪ್ಟನ್ ಶುಭ್‌ಮನ್ ಗಿಲ್, ತಮ್ಮ ತಂಡದ ಸೋಲಿನ ಕುರಿತಂತೆ ತನ್ನದೇ ಆದ ವ್ಯಾಖ್ಯಾನ ಮಾಡಿದ್ದಾರೆ.

48

ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ತಮ್ಮ ತಂಡ ಆಡಿದ ರೀತಿಯ ಬಗ್ಗೆ ನಮಗೆ ಹೆಮ್ಮೆಯಿದೆ. ಐದನೇ ದಿನದ ಕೊನೆಯ ಸೆಷನ್‌ನ ಕೊನೆಯ ವಿಕೆಟ್‌ವರೆಗೂ ನಮ್ಮ ತಂಡ ಛಲದಿಂದ ಆಡಿರುವುದರ ಬಗ್ಗೆ ಹೆಮ್ಮೆಯಿದೆ ಎಂದು ಶುಭ್‌ಮನ್ ಗಿಲ್ ಹೇಳಿದ್ದಾರೆ.

58

ನಾವು ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತುತ್ತೇವೆ ಎನ್ನುವ ವಿಶ್ವಾಸವಿತ್ತು. ಆದರೆ ಇಂಗ್ಲೆಂಡ್ ತಂಡವು ನಿರಂತರವಾಗಿ ಶಿಸ್ತುಬದ್ದ ದಾಳಿಯನ್ನು ನಡೆಸಿತು. ನಮ್ಮ ಅಗ್ರಕ್ರಮಾಂಕದ ಬ್ಯಾಟಿಂಗ್ ವಿಭಾಗದಿಂದ ಇನ್ನೊಂದು 50+ ರನ್ ಜತೆಯಾಟ ಮೂಡಿಬಂದಿದ್ದರೇ ಫಲಿತಾಂಶ ನಮ್ಮ ಪರ ಬರುತ್ತಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಗಿಲ್ ಹೇಳಿದ್ದಾರೆ.

68

ಅವರು ನಮಗಿಂತ ಚೆನ್ನಾಗಿ ಆಡಿದರು. ನಮಗೆ ದೊಡ್ಡ ಗುರಿಯೇನೂ ಸಿಕ್ಕಿರಲಿಲ್ಲ. ಇನ್ನೊಂದು 50-60 ರನ್ ಜತೆಯಾಟ ಬಂದರೆ ಗುರಿ ಸುಲಭವಾಗುತ್ತೆ ಎನ್ನುವುದು ಗೊತ್ತಿತ್ತು ಎಂದು ಟೀಂ ಇಂಡಿಯಾ ಕ್ಯಾಪ್ಟನ್ ಹೇಳಿದ್ದಾರೆ.

78

ರವೀಂದ್ರ ಜಡೇಜಾ ಓರ್ವ ಅನುಭವಿ ಆಟಗಾರ. ಹೀಗಾಗಿ ಅವರಿಗೆ ನಾವು ಯಾವುದೇ ಸಂದೇಶ ನೀಡಿರಲಿಲ್ಲ. ಕೆಳಕ್ರಮಾಂಕದ ಬ್ಯಾಟರ್‌ಗಳ ಜತೆ ಜಡ್ಡು ಅತ್ಯುತ್ತಮವಾಗಿ ಜತೆಯಾಟವಾಡಿದರು ಎಂದು ಶುಭ್‌ಮನ್ ಗಿಲ್ ಹೇಳಿದ್ದಾರೆ.

88

ಈ ಟೆಸ್ಟ್‌ ಸರಣಿಯ ಇನ್ನುಳಿದ ಪಂದ್ಯಗಳು ಇನ್ನಷ್ಟು ರೋಚಕ ಕಾದಾಟಕ್ಕೆ ಸಾಕ್ಷಿಯಾಗುವ ವಿಶ್ವಾಸವಿದೆ ಎಂದು ಗಿಲ್ ಹೇಳಿದ್ದಾರೆ. ಇದರ ಜತೆಗೆ ಬುಮ್ರಾ ಮುಂದಿನ ಟೆಸ್ಟ್ ಆಡುತ್ತಾರಾ ಎನ್ನುವ ಪ್ರಶ್ನೆಗೆ ಸದ್ಯದಲ್ಲೇ ಆ ಬಗ್ಗೆ ತಿಳಿಯಲಿದೆ ಎಂದು ಹೇಳಿದ್ದಾರೆ.

Read more Photos on
click me!

Recommended Stories