ಗಿಲ್-ಗಂಭೀರ್ ಮಾಡಿದ ಎಡವಟ್ಟಿನಿಂದ ಲಾರ್ಡ್ಸ್‌ ಟೆಸ್ಟ್‌ನಲ್ಲಿ ಭಾರತಕ್ಕೆ ಸೋಲು! ಮಾಡಿದ ಮಿಸ್ಟೇಕ್ ಏನು?

Published : Jul 15, 2025, 09:56 AM IST

ಲಾರ್ಡ್ಸ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 22 ರನ್ ಅಂತರದ ವಿರೋಚಿತ ಸೋಲು ಅನುಭವಿಸಿದೆ. 193 ರನ್‌ಗಳ ಗುರಿ ಬೆನ್ನಟ್ಟುವಾಗ ನಾಯಕ ಗಿಲ್ ಮತ್ತು ಕೋಚ್ ಗಂಭೀರ್ ತೆಗೆದುಕೊಂಡ ನಿರ್ಧಾರಗಳು ಭಾರತಕ್ಕೆ ದುಬಾರಿಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

PREV
18

ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್‌ನ ಕೊನೆಯ ದಿನ ರೋಚಕ ಅಂತ್ಯ ಕಂಡಿದೆ. 193 ರನ್‌ಗಳ ಗುರಿ ಬೆನ್ನಟ್ಟಲು ವಿಫಲವಾದ ಭಾರತ 22 ರನ್ ಅಂತರದ ಸೋಲು ಅನುಭವಿಸಿದೆ

28

ಭಾರತದ ಕುಸಿತಕ್ಕೆ ನಾಯಕ ಗಿಲ್ ಮತ್ತು ಕೋಚ್ ಗಂಭೀರ್ ತೆಗೆದುಕೊಂಡ ನಿರ್ಧಾರಗಳೇ ಕಾರಣ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

48

ಮೊದಲ ಇನ್ನಿಂಗ್ಸ್‌ನಲ್ಲಿ ನಿತೀಶ್ ರೆಡ್ಡಿ-ರವೀಂದ್ರ ಜಡೇಜಾ 70ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನೀಡಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಆ ಅವಕಾಶವನ್ನು ಗಿಲ್-ಗಂಭೀರ್ ಕೈಚೆಲ್ಲಿದರು. ಭಾರತ 82 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತು.

58

ಇನ್ನು ನಾಲ್ಕನೇ ದಿನದಾಟದ ಕೊನೆಯಲ್ಲಿ ನೈಟ್ ವಾಚ್‌ಮನ್ ರೂಪದಲ್ಲಿ ಗಿಲ್-ಗಂಭೀರ್ ಜೋಡಿ ಆಕಾಶ್‌ದೀಪ್ ಅವರನ್ನು ಕಣಕ್ಕಿಳಿಸಿದ್ದು ದೊಡ್ಡ ಎಡವಟ್ಟು ಎನಿಸಿಕೊಂಡಿತು. ಇದು ಕೂಡಾ ಟೀಂ ಇಂಡಿಯಾ ಸೋಲಿಗೆ ಕಾರಣ ಎನಿಸಿಕೊಂಡಿತು.

68

ಇಂಗ್ಲೆಂಡ್ ವೇಗಿ ಆರ್ಚರ್ ದಾಳಿಗೆ ಭಾರತದ ಟಾಪ್ ಆರ್ಡರ್ ಚೆಲ್ಲಾಪಿಲ್ಲಿಯಾಯಿತು. ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್ ವಿಕೆಟ್ ಪಡೆದ ಆರ್ಚರ್ ಭಾರತಕ್ಕೆ ಆಘಾತ ನೀಡಿದರು.

78

ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಕೆ ಎಲ್ ರಾಹುಲ್‌ರನ್ನು ಔಟ್ ಮಾಡಿದ ನಂತರ ಭಾರತದ ಕಷ್ಟಗಳು ಶುರುವಾದವು. ರಾಹುಲ್ 39 ರನ್ ಗಳಿಸಿ ಔಟ್ ಆದರು.

88

ಆಲ್ರೌಂಡರ್ ರವೀಂದ್ರ ಜಡೇಜಾ ಅಜೇಯ ಅರ್ಧಶತಕ ಸಿಡಿಸಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

Read more Photos on
click me!

Recommended Stories