ಶಿಖರ್ ಧವನ್ - ದಿನೇಶ್ ಕಾರ್ತಿಕ್: ವಿಚ್ಛೇದಿತ IPL ಕ್ರಿಕೆಟಿಗರು !

First Published | Sep 23, 2021, 4:50 PM IST

2021ರ  IPL ಮ್ಯಾಚ್‌ಗಳು ನಿಧಾನವಾಗಿ ಕಾವೇರುತ್ತಿದೆ. ಇದರ ನಡುವೆ ಆಟಗಾರರ ಪರ್ಸನಲ್‌ ಲೈಫ್‌ನ ವಿಷಯಗಳು ಸಹ ಸಾಕಷ್ಟು ಚರ್ಚೆಯಾಗುತ್ತಿವೆ.  ಇತ್ತೀಚೆಗೆ, ದೆಹಲಿ ಕ್ಯಾಪಿಟಲ್ಸ್ ಆಟಗಾರ ಶಿಖರ್ ಧವನ್ 8 ವರ್ಷಗಳ ದಾಂಪತ್ಯದ ನಂತರ ಅವರ ಪತ್ನಿ ಆಯೇಷಾ ಮುಖರ್ಜಿಯವರನ್ನು ವಿಚ್ಛೇದನ ಮಾಡಿದರು. ಇದೇ ರೀತಿ  ಅನೇಕ  IPL ಆಟಗಾರರು  ತಮ್ಮ ಪಾರ್ಟನರ್‌ನಿಂದ ಬೇರೆಯಾಗಿರುವ ಉದಾಹರಣೆಗಳಿವೆ. ಅಂತಹ  ಐಪಿಎಲ್ ಸ್ಟಾರ್ಸ್‌ ಯಾರು ಇಲ್ಲಿದೆ ಮಾಹಿತಿ. 

शिखर धवन

ಶಿಖರ್ ಧವನ್: ದೆಹಲಿ ಕ್ಯಾಪಿಟಲ್ಸ್ ಆಟಗಾರ ಶಿಖರ್ ಧವನ್ ಮತ್ತು ಅವರ ಪತ್ನಿ ಆಯೇಷಾ ಮುಖರ್ಜಿ  ಐಪಿಎಲ್ 2021 ರ  ಎರಡನೇ ಹಂತದ  ಮ್ಯಾಚ್‌ಗಳ ಕೆಲವು ದಿನಗಳ ಮೊದಲು ವಿಚ್ಛೇದನ ಪಡೆದರು. ಧವನ್ 2012 ರಲ್ಲಿ ಆಸ್ಟ್ರೇಲಿಯಾದ ಪ್ರಜೆ ಆಯೇಷಾ ಮುಖರ್ಜಿಯನ್ನು ವಿವಾಹವಾದರು. ಆಯೇಷಾ ಧವನ್ ಗಿಂತ 10 ವರ್ಷ ದೊಡ್ಡವರು ಮತ್ತು ಈಗಾಗಲೇ ಅವರಿಗೆ 2 ಹೆಣ್ಣುಮಕ್ಕಳಿದ್ದರು. ಶೀಕರ್‌ ಮತ್ತು ಆಯೇಷಾಗೆ  ಜೊರವರ್ ಎಂಬ ಮಗ ಇದ್ದಾನೆ.

मोहम्मद शमी

ಮೊಹಮ್ಮದ್ ಶಮಿ: ಪಂಜಾಬ್ ಕಿಂಗ್ಸ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅಧಿಕೃತವಾಗಿ  ಇನ್ನೂ ವಿಚ್ಛೇದನ ಪಡೆಯದೆ ಇರಬಹುದು, ಆದರೆ ಅವರ ಪತ್ನಿ ಸುಮಾರು 4 ವರ್ಷಗಳಿಂದ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹಸಿನ್ ಜಹಾನ್ ಹಲವು ಗಂಭೀರ ಆರೋಪಗಳನ್ನು ಮಾಡುವ ಮೂಲಕ ಶಮಿಯೊಂದಿಗಿನ ಸಂಬಂಧವನ್ನು ಮುರಿದರು. ಅವರಿಗೆ 6 ವರ್ಷದ ಮಗಳು ಐರಾ ಇದ್ದಾಳೆ.

Tap to resize

ದಿನೇಶ್ ಕಾರ್ತಿಕ್: ಕೆಕೆಆರ್ ಆಟಗಾರ ದಿನೇಶ್ ಕಾರ್ತಿಕ್ ಈ ಹಿಂದೆ ನಿಕಿತಾ ವಂಜಾರಾರನ್ನು ಮದುವೆಯಾಗಿದ್ದರು. ಆದರೆ ನಿಕಿತ ಅವರು ಕ್ರಿಕೆಟಿಗ ಮುರಳಿ ವಿಜಯ್ ಅವರನ್ನು ಪ್ರೀತಿಸಿ ದಿನೇಶ್ ಗೆ ವಿಚ್ಛೇದನ ನೀಡಿ ಅವರನ್ನು ಮದುವೆಯಾದರು. ನಂತರ ದಿನೇಶ್ 2015 ರಲ್ಲಿ ಚೆನ್ನೈನಲ್ಲಿ ಭಾರತೀಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ವಿವಾಹವಾದರು.

ವಿನೋದ್ ಕಾಂಬ್ಳಿ: 2008 ರಲ್ಲಿ  ವಿನೋದ್ ಕಾಂಬ್ಳಿ ತನ್ನ ಬಾಲ್ಯದ ಗೆಳತಿ ನೊಯೆಲ್ಲಾ ಲೂಯಿಸ್ ರನ್ನು ವಿವಾಹವಾದರು. ಆದರೆ,  ಅವರು ಮಾಡೆಲ್ ಆಂಡ್ರಿಯಾ ಹೆವಿಟ್ ಅವರನ್ನು ಪ್ರೀತಿಸುತ್ತಿದ್ದ ಕಾರಣ ಅವರ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಮೊದಲ ಹೆಂಡತಿಯಿಂದ ವಿಚ್ಛೇದನ. ನಂತರ, ಅವರು ಆಂಡ್ರಿಯಾಳನ್ನು ವಿವಾಹವಾದರು ಮತ್ತು ಈಗ ಮಗುವಿನ ತಂದೆಯಾಗಿದ್ದಾರೆ ವಿನೋದ್‌ ಕಾಂಬ್ಳಿ.

Brett Lee

ಬ್ರೆಟ್ ಲೀ: ಆಸ್ಟ್ರೇಲಿಯಾದ ಮಾಜಿ ಆಟಗಾರ ಮತ್ತು ಐಪಿಎಲ್‌ನಲ್ಲಿ ಕಾಮೆಂಟರಿ ಪ್ಯಾನೆಲ್‌ನ ಭಾಗವಾದ ಬ್ರೆಟ್ ಲೀ 2006 ರಲ್ಲಿ ಎಲಿಜಬೆತ್ ಕೆಂಪ್ ಎಂಬ ಮಹಿಳೆಯನ್ನು ವಿವಾಹವಾದರು, ಆದರೆ ಅವರು ಕೇವಲ ಎರಡು ವರ್ಷಗಳಲ್ಲಿ ವಿಚ್ಛೇದನ ಪಡೆದರು. ನಂತರ ಅವರು 2014 ರಲ್ಲಿ ಲಾನಾ ಆಂಡರ್ಸನ್ ಅವರನ್ನು ವಿವಾಹವಾದರು.

ಜಾಂಟಿ ರೋಡ್ಸ್: ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ನ ಫೀಲ್ಡಿಂಗ್ ಕೋಚ್ ಆಗಿರುವ ಜಾಂಟಿ ರೋಡ್ಸ್ ವಿಶ್ವದ ಅತ್ಯುತ್ತಮ ಫೀಲ್ಡರ್ ಆಗಿದ್ದಾರೆ. ಅವರು ಈ ಹಿಂದೆ ಕೇಟ್ ಮೆಕಾರ್ಥಿ ಎಂಬ ಮಹಿಳೆಯನ್ನು ಮದುವೆಯಾಗಿದ್ದರು, ಆದರೆ ಅವರ ವಿವಾಹವು 19 ವರ್ಷಗಳ ನಂತರ 2013 ರಲ್ಲಿ ಮುರಿದುಹೋಯಿತು. ನಂತರ ಅವರು ಮುಂದಿನ ವರ್ಷ ಮೆಲಾನಿ ವುಲ್ಫ್ ಅವರನ್ನು ವಿವಾಹವಾದರು.
 

ಮೊಹಮ್ಮದ್ ಅಜರುದ್ದೀನ್: ವಿರಾಟ್ ಕೊಹ್ಲಿಯ ನಾಯಕತ್ವವನ್ನು ಇತ್ತೀಚೆಗೆ ಪ್ರಶ್ನಿಸಿದ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ವೈಯಕ್ತಿಕ ಜೀವನ ಕೂಡ ವಿವಾದಗಳಿಂದ ಕೂಡಿದೆ. ಅವರು ಆರಂಭದಲ್ಲಿ ನೌರೀನ್ ಎಂಬ ಹುಡುಗಿಯನ್ನು ಮದುವೆಯಾದರು ಮತ್ತು  ಇಬ್ಬರು ಗಂಡುಮಕ್ಕಳಿದ್ದರು. ಆದಾಗ್ಯೂ, 1996 ರಲ್ಲಿ ಬಾಲಿವುಡ್ ನಟಿ ಸಂಗೀತಾ ಬಿಜ್ಲಾನಿಯನ್ನು ಪ್ರೀತಿಸಿದ ನಂತರ ಅವರ ಮೊದಲ ಮದುವೆ ಮುರಿದುಹೋಯಿತು. ಆದರೆ ಸಂಗೀತ ಮತ್ತು ಅವರ ಮದುವೆ 2010 ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತು.

Latest Videos

click me!