IPL 2021: ಈ ಆಟಗಾರನ ಪತ್ನಿ ಜತೆ ಪಾರ್ಟಿ ಎಂಜಾಯ್‌ ಮಾಡಿದ ಚಹಲ್ ಪತ್ನಿ ಧನಶ್ರೀ ವರ್ಮಾ..!

First Published | Sep 23, 2021, 4:10 PM IST

ದುಬೈ: 14ನೇ ಆವೃತ್ತಿಯ ಐಪಿಎಲ್‌(IPL 2021) ಯುಎಇ ಚರಣದಲ್ಲಿ ಭರ್ಜರಿಯಾಗಿಯೇ ಆರಂಭವಾಗಿದೆ. ಇದೇ ವೇಳೆ ಮೋಜು-ಮಸ್ತಿ ಕೂಡಾ ಕಡಿಮೆಯಾಗಿಲ್ಲ. ಒಂದು ಕಡೆ ಬಯೋ ಬಬಲ್‌ನಲ್ಲಿ ಕ್ರಿಕೆಟಿಗರು ಮೈದಾನದಲ್ಲಿ ಬ್ಯುಸಿಯಾಗಿದ್ದರೆ, ಮತ್ತೊಂದೆಡೆ ಆಟಗಾರರ ಪತ್ನಿಯರು ಬಿಂದಾಸ್ ಪಾರ್ಟಿ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಕ್ರಿಕೆಟಿಗರ ಪತ್ನಿಯರು ಒಟ್ಟಾಗಿ ಪಾರ್ಟಿ ಮಾಡುತ್ತಿರುವುದು ಕಂಡು ಬಂದಿದೆ. ಈ ಪಾರ್ಟಿಯಲ್ಲಿ ಆರ್‌ಸಿಬಿ ಸ್ಪಿನ್ನರ್ ಯುಜುವೇಂದ್ರ ಚಹಲ್(Yuzvendra Chahal) ಪತ್ನಿ ಧನಶ್ರೀ ವರ್ಮಾ(Dhanashree Verma) ಕೂಡಾ ಕಂಡು ಬಂದಿದ್ದಾರೆ. ಇದೇ ವೇಳೆ ಎಬಿ ಡಿವಿಲಿಯರ್ಸ್‌(Ab De Villiers) ಪತ್ನಿ ಡೇನಿಯಲ್ ಡಿವಿಲಿಯರ್ಸ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದು ಆರ್‌ಸಿಬಿ ಗರ್ಲ್ಸ್‌ ಗ್ಯಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ(Virat Kohli) ಪತ್ನಿ ಅನುಷ್ಕಾ ಶರ್ಮಾ ಎಲ್ಲಾ ಕಾಣಿಸಿಕೊಳ್ಳದಿರುವುದಕ್ಕೆ ಅಭಿಮಾನಿಗಳು ನಿರಾಶರಾಗಿದ್ದಾರೆ.

ಐಪಿಎಲ್‌ 2021 ಟೂರ್ನಿಗೆ ಕೆಲವು ವಿದೇಶಿ ಕ್ರಿಕೆಟಿಗರು ತಮ್ಮ ಪತ್ನಿಯರನ್ನು ಯುಎಇ ಗೆ ಕರೆ ತಂದಿದ್ದಾರೆ. ಈ ಪೈಕಿ ಮಿಸ್ಟರ್ 360 ಖ್ಯಾತಿಯ ಆಟಗಾರ ಎಬಿ ಡಿವಿಲಿಯರ್ಸ್‌ ಕೂಡಾ ಒಬ್ಬರಾಗಿದ್ದಾರೆ. ಪ್ರತಿಸಲದಂತೆ ಈ ಬಾರಿಯೂ ಎಬಿಡಿ ತಮ್ಮ ಪತ್ನಿ ಡೇನಿಯಲ್‌ ಡಿವಿಲಿಯರ್ಸ್ ಅವರನ್ನು ಯುಎಇಗೆ ಕರೆದುಕೊಂಡು ಬಂದಿದ್ದಾರೆ.
(Photo source- Instagram)
 

ಬುಧವಾರ(ಸೆ.22) ಡೇನಿಯಲ್‌ ಡಿವಿಲಿಯರ್ಸ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೈಕಿ ಆರ್‌ಸಿಬಿಯ ಗರ್ಲ್ಸ್‌ ಗ್ಯಾಂಗ್ ಒಟ್ಟಿಗೆ ಪಾರ್ಟಿ ಮಾಡುವ ಚಿತ್ರವೂ ಇದೆ. ಈ ಚಿತ್ರದಲ್ಲಿ ಚಹಲ್ ಪತ್ನಿ ಧನಶ್ರೀ ವರ್ಮಾ ಮಾತ್ರವಲ್ಲದೇ ಆರ್‌ಸಿಬಿಯ ಇತರೆ ಆಟಗಾರರ ಪತ್ನಿಯರೂ ಕಾಣಿಸಿಕೊಂಡಿದ್ದಾರೆ.
(Photo source- Instagram)

Tap to resize

ಒಂದು ಫೋಟೋದಲ್ಲಿ ಧನಶ್ರೀ ವರ್ಮಾ ಸೆಲ್ಫಿ ತೆಗೆದುಕೊಳ್ಳುತ್ತಿದ್ದು, ಅವರ ಹಿಂದೆ ಡಿವಿಲಿಯರ್ಸ್‌ ಪತ್ನಿ ಹಾಗೂ ಆರ್‌ಸಿಬಿಯ ಗರ್ಲ್ಸ್‌ ಗ್ಯಾಂಗ್ ಮುದ್ದಾಗಿ ಪೋಸ್‌ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಧನಶ್ರೀ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
(Photo source- Instagram)

ಇನ್ನೊಂದು ಭಾವಚಿತ್ರದಲ್ಲಿ ಧನಶ್ರೀ ವರ್ಮಾ, ಡೇನಿಯಲ್ ಡಿವಿಲಿಯರ್ಸ್ ಸೇರಿದಂತೆ 6 ಆರ್‌ಸಿಬಿ ಗರ್ಲ್ಸ್‌ ಗ್ಯಾಂಗ್ ಚಿಯರ್ಸ್‌ ಮಾಡುತ್ತಿರುವ ಫೋಟೋ ಕೂಡಾ ಇದೆ. ಕೈಯಲ್ಲಿ ಇವರೆಲ್ಲಾ ತಂಪು ಪಾನೀಯಗಳನ್ನು ಹಿಡಿದುಕೊಂಡಂತೆ ಕಂಡು ಬಂದಿದೆ.
(Photo source- Instagram)

ಈ ಆರ್‌ಸಿಬಿ ಗರ್ಲ್ಸ್‌ ಗ್ಯಾಂಗ್ ನೋಡಿದ ತಕ್ಷಣ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಎಲ್ಲಿ ಎಂದು?. ಆದರೆ ಅನುಷ್ಕಾ ಶರ್ಮಾ ಯುಎಇನಿಂದ ಮುಂಬೈಗೆ ವಾಪಾಸ್ಸಾಗಿದ್ದಾರೆ ಎಂದು ಹೇಳಲಾಗುತ್ತಿದೆ.
(Photo source- Instagram)

ಇನ್ನು ಬುಧವಾರವೇ ಅನುಷ್ಕಾ ಶರ್ಮಾ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಎರಡು ಫೋಟೋಗಳನ್ನು ಶೇರ್ ಮಾಡಿದ್ದು, ಇದರಲ್ಲಿ ಒಂದು ಫೋಟೋ ಮುಂಬೈನ ಅರಬ್ಬೀ ಸಮುದ್ರದಂತೆ ಭಾಸವಾಗುತ್ತಿದೆ. 
(Photo source- Instagram)

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್ 24ರಂದು ನಡೆಯಲಿರುವ ಪಂದ್ಯದಲ್ಲಿ ಮೂರು ಬಾರಿಯ ಐಪಿಎಲ್‌ ಚಾಂಪಿಯನ್‌ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಾಕಷ್ಟು ಪೈಪೋಟಿಯಿಂದ ಕೂಡಿರಲಿದ್ದು, ಗೆಲುವು ಯಾವ ತಂಡದ ಪಾಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ.

Latest Videos

click me!