ವಿರಾಟ್-ಅನುಷ್ಕಾ ಮಧ್ಯೆ ಎಲ್ಲವೂ ಸರಿಯಾಗಿದೆಯಾ? ಮಗಳೊಂದಿಗೆ ಮುಂಬೈಗೆ ಮರಳಿದ ನಟಿ!

First Published | Sep 23, 2021, 4:37 PM IST

ಬಾಲಿವುಡ್‌ ನಟಿ ಅನುಷ್ಕಾಶರ್ಮ ಮತ್ತು ಆಕೆಯ ಪುತ್ರಿ ವಾಮಿಕಾ ಜೂನ್ ತಿಂಗಳಿನಲ್ಲಿ ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾ ಜೊತೆ ಇಂಗ್ಲೆಂಡಿಗೆ ತೆರಳಿದ್ದರು. ಈಗ ಅನುಷ್ಕಾ ಶರ್ಮಾ 3 ತಿಂಗಳ ನಂತರ ಮುಂಬೈಗೆ ಮರಳಿದ್ದಾರೆ. ಪ್ರಸ್ತುತ ವಿರಾಟ್‌ ಕೊಹ್ಲಿ ದುಬೈನಲ್ಲಿ ನಡೆಯುತ್ತಿರುವ 2021ರ ಐಪಿಎಲ್‌ನ ಎರಡನೇ ಹಂತ ಟೂರ್ನಿಯಲ್ಲಿ ಬ್ಯುಸಿಯಾಗಿದ್ದಾರೆ. ವಿರಾಟ್‌ ಕೊಹ್ಲಿಯನ್ನು ಬಿಟ್ಟು ದುಬೈಯಿಂದ ಮುಂಬೈಗೆ ಮಗಳ ಜೊತೆ ಅನುಷ್ಕಾ ಮರಳಿರುವುದು ಜನರಲ್ಲಿ ವಿರಾಟ್‌ ಮತ್ತು ಅನುಷ್ಕಾ ನಡುವೆ ಎಲ್ಲವೂ ಸರಿಯಾಗಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಇಲ್ಲಿದೆ ವಿವರ

ಸುಮಾರು ಮೂರು ತಿಂಗಳ ನಂತರ ಅನುಷ್ಕಾ ಶರ್ಮ ಮಗಳ ಜೊತೆ ಮುಂಬೈಗೆ ಮರಳಿದ್ದಾರೆ. ಜೂನ್ ತಿಂಗಳಿನಲ್ಲಿ ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾ ಜೊತೆ ನಟಿ ಇಂಗ್ಲೆಂಡಿಗೆ ತೆರಳಿದ್ದರು. ನಂತರ ಪತಿ ಜೊತೆ ದುಬೈಗೆ ಹೋಗಿದ್ದ ಅನುಷ್ಕಾ ಈಗ ಮಗಳ ಜೊತೆ ವಾಪಸ್ಸಾಗಿದ್ದಾರೆ. 

ಮುಂಬೈಗೆ ಹಿಂದಿರುಗಿದ ನಟಿ ಅನುಷ್ಕಾ ಇನ್‌ಸ್ಟಾಗ್ರಾಮ್‌ ಮೂಲಕ  ಮುಂಬೈನ ತನ್ನ ಅಪಾರ್ಟ್‌ಮೆಂಟ್‌ನಿಂದ ಸಮುದ್ರದ ಫೋಟೋವನ್ನು  ಪೋಸ್ಟ್ ಮಾಡಿದ್ದಾರೆ. ಫೋಟೋ ಜೊತೆ 'ಮುಂಬೈ' ಎಂದು ಅನುಷ್ಕಾ ಬರೆದಿದ್ದಾರೆ. ಆದರ ನಂತರ  ಅವರು  ವರ್ಕೌಟ್ ನಂತರದ ಸೆಲ್ಫಿಯಾದ ಇನ್ನೊಂದು ಫೋಟೋವನ್ನು ಹಂಚಿಕೊಂಡರು.

Tap to resize

ಜೂನ್‌ನಿಂದ ಅನುಷ್ಕಾ ಯುಕೆಯ ಮತ್ತು ನಂತರ ಯುಎಇ ನಲ್ಲಿದ್ದರು. ಅವರು  ತಮ್ಮ ಕುಟುಂಬದೊಂದಿಗೆ ಹಾಲಿಡೇ ಎಂಜಾಯ್‌ ಮಾಡಿದ  ಅನೇಕ ಫೋಟೋಗಳು ಮತ್ತು ವೀಡಿಯೊಗಳನ್ನು  ಸೋಶಿಯಲ್‌ ಮಿಡೀಯಾದಲ್ಲಿ ಹಂಚಿಕೊಂಡಿದ್ದಾರೆ.

ಮಗಳು ವಾಮಿಕಾಗೆ  ಆರು ತಿಂಗಳು ತುಂಬಿದಾಗ, ವಿರಾಟ್‌ ಅನುಷ್ಕಾ ದಂಪತಿಗಳು ಪಿಕ್ನಿಕ್‌ ಹೋಗಿ ಮಗಳ ಆರು ತಿಂಗಳ ಬರ್ತ್‌ಡೇ ಯನ್ನು ಇಂಗ್ಲೆಂಡಿನಲ್ಲಿ ಸೆಲೆಬ್ರೆಟ್‌ ಮಾಡಿದ್ದರು ಮತ್ತು ಆ ಸಮಯದ ಫೋಟೋಗಳನ್ನು  ಹಂಚಿಕೊಂಡಿದ್ದರು.  

ಇಂಡಿಯನ್ ಪ್ರೀಮಿಯರ್ ಲೀಗ್ 2021 ರ  ಅಂತ್ಯದ ನಂತರ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕತ್ವದಿಂದ ಕೆಳಗಿಳಿಯುತ್ತಾರೆ ಮತ್ತು ಟಿ 20 ವಿಶ್ವಕಪ್ ನಂತರ ಅವರು ಭಾರತದ ಟಿ 20 ಕ್ಯಾಪ್ಷನ್ಸಿಯನ್ನು ಬಿಡುತ್ತಿದ್ದಾರೆ. 

ಈಗ, ಅನುಷ್ಕಾ ಶರ್ಮಾ ಮಗಳ ಜೊತೆ ಮುಂಬೈಗೆ ಹಿಂತಿರುಗಿದ್ದರಿಂದ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ದಂಪತಿಗಳ ನಡುವೆ ಏನಾದರೂ ತಪ್ಪಾಗಿದೆ ಎಂದು ಶಂಕಿಸಿದ್ದಾರೆ ಏಕೆಂದರೆ ಮದುವೆಯ ನಂತರ ಐಪಿಎಲ್ ಪಂದ್ಯಗಳಲ್ಲಿ ಅನುಷ್ಕಾ ಯಾವಾಗಲೂ ವಿರಾಟ್‌ನೊಂದಿಗೆ ಇರುತ್ತಾರೆ.
 

ವಿರಾಟ್ ಪ್ರಸ್ತುತ ದುಬೈನಲ್ಲಿದ್ದಾರೆ. ಐಪಿಎಲ್ ಪಂದ್ಯಗಳು ಅಕ್ಟೋಬರ್ 15 ರಂದು ಕೊನೆಗೊಳ್ಳುತ್ತದೆ. ಅನುಷ್ಕಾ ಈಗ ಮೂರು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿಲ್ಲ. ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಅವರ ಜೀರೋ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು.
 

ಆದಾಗ್ಯೂ, ಅನುಷ್ಕಾ ತನ್ನ ಸಹೋದರ ಕರ್ಣೇಶ್ ಶರ್ಮಾ ಜೊತೆ ಅವರ ಸ್ವಂತ ನಿರ್ಮಾಣ ಸಂಸ್ಥೆಯಾದ ಕ್ಲೀನ್ ಸ್ಲೇಟ್ ಫಿಲ್ಮ್ಜ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ OTT ಪ್ಲಾಟ್‌ಫಾರ್ಮ್‌ಗಳಿಗಾಗಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರು ಪ್ರಸ್ತುತ ಕಲಾ ಸಿನಿಮಾದ ಪೋಸ್ಟ್-ಪ್ರೊಡಕ್ಷನ್‌ ಕೆಲಸ ಮಾಡುತ್ತಿದ್ದಾರೆ. ಇದು ಇರ್ಫಾನ್ ಖಾನ್ ಅವರ ಮಗ ಬಾಬಿಲ್ ಅವರ ನಟನೆಯ ಡೆಬ್ಯೂ ಆಗಿದೆ.

Latest Videos

click me!