ರೋಹಿತ್ ಶರ್ಮಾ ಮೇಲೆ, ರೋಹಿತ್ ಮಾತುಗಳ ಮೇಲೆ ನಂಬಿಕೆ ಇರಲಿಲ್ಲ. ವಿಶ್ವಕಪ್ ಟೂರ್ನಿಗೆ ಕೆಲ ದಿನಗಳಿರುವಾಗಲೇ ಟಿ20 ತಂಡದಿಂದ ಹೊರಬಿದ್ದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ. ತಮ್ಮ ಕರಿಯರ್‌ನ ಅತ್ಯಂತ ಕಠಿಣ ಹಾಗೂ ತೀವ್ರ ನೋವಿನ ದಿನಗಳ ಕುರಿತು ಸ್ಯಾಮ್ಸನ್ ಹೇಳಿದ್ದಾರೆ.
2026ರಲ್ಲಿ ಟೀಂ ಇಂಡಿಯಾ ಸತತ 2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು. ಈ ಗೆಲುವಿನ ಹಿಂದೆ ಸಂಜು ಸ್ಯಾಮ್ಸನ್ ಪರಿಶ್ರಮ ಪ್ರಮುಖವಾಗಿತ್ತು. ಆದರೆ ಸಂಜು ಸ್ಯಾಮ್ಸನ್ ಕ್ರಿಕೆಟ್ ಹಾದಿ ಯಶಸ್ಸಿನ ಸಿಹಿಗಿಂತ ನೋವಿನ ದಿನಗಳೇ ಹೆಚ್ಚು. ಸಂಜು ಸ್ಯಾಮ್ಸನ್ ಫಾರ್ಮ್, ಇಂಜುರಿ, ನಡತೆ, ಇತರರಿಗೆ ಸ್ಥಾನ ಕೊಡುವ, ಪರೀಕ್ಷೆ, ಪ್ರಯೋಗಗಳ ಕಾರಣದಿಂದ ತಮ್ಮ ಸ್ಥಾನ ಬಿಟ್ಟುಕೊಡಬೇಕಾಗಿ ಬಂದಿದೆ. ಇದೀಗ ಸಂಜು ಸ್ಯಾಮ್ಸನ್ ತಮ್ಮ ಕರಿಯರ್‌ನ ನೋವಿನ ದಿನಗಳ ಕುರಿತು ಮಾತನಾಡಿದ್ದಾರೆ.
26
ಎಲ್ಲವನ್ನು ಕಳೆದುಕೊಂಡಂತಿತ್ತು
ಜಿಯೋಸ್ಟಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಜು ಸ್ಯಾಮ್ಸನ್, ಟಿ20 ವಿಶ್ವಕಪ್ ಟೂರ್ನಿ ಸಮೀಪಿಸುತ್ತಿದ್ದಂತೆ ಟಿ20 ತಂಡದಿಂದ ಹೊರಬಿದ್ದೆ. ನ್ಯೂಜಿಲೆಂಡ್ ಟಿ20 ಸರಣಿ ಬಳಿಕ ನನ್ನ ಅತ್ಯಂತ ನೋವಿನ ದಿನಗಳನ್ನು ಎಣಿಸಿದ್ದೆ. ಪರಿಶ್ರಮ ವ್ಯರ್ಥವಾಗಿತ್ತು. ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಯಾರು ಏನು ಹೇಳಿದರೂ ಕೇಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
36
ರೋಹಿತ್ ಶರ್ಮಾ ಮೇಲೆ ನಂಬಿಕೆ ಇರಲಲ್ಲ
ಈ ವೇಳೆ ರೋಹಿತ್ ಶರ್ಮಾ ನನ್ನ ಬಳಿ ಬಂದು ಧೈರ್ಯ ನೀಡಿದ್ದರು. ಜೊತೆಗೆ ಅಭಯ ನೀಡಿದ್ದರು. ವಿಶ್ವಕಪ್ ತಂಡದಲ್ಲಿ ನಿನಗೆ ಸ್ಥಾನವಿದೆ, ಚಿಂತೆ ಬಿಡು ಎಂದಿದ್ದರು. ಅಂದು ರೋಹಿತ್ ಶರ್ಮಾ ಅವರ ಅನುಭವದ ಮಾತುಗಳು ಅಥವಾ ಅವರು ಮುಂದಿನ ದಿನಗಳನ್ನು ಅರಿತು ಮಾತನಾಡಿರುತ್ತಾರೆ.ಆದರೆ ನನಗೆ ರೋಹಿತ್ ಶರ್ಮಾ ಮಾತಿನ ಮೇಲೆ ನಂಬಿಕೆ ಇರಲಿಲ್ಲ. ಕಾರಣ ನಾನು ಹಲವು ಬಾರಿ ಹೀಗೆ ತಂಡದಿಂದ ಹೊರಬಿದ್ದಿದ್ದೆ.
ರೋಹಿತ್ ಶರ್ಮಾ ಅವರ ಅನುಭವದ ಮೂಲಕ ನನ್ನ ಕರಿಯರ್ ಕುರಿತು ಹೇಳಿದಾಗ ನನಗೆ ನಂಬಿಕೆ ಇರಲಿಲ್ಲ. ಇದಕ್ಕಾಗಿ ಕ್ಷಮಿಸಿ. ಆದರೆ ರೋಹಿತ್ ಹೇಳಿದಂತೆ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾನು ಪ್ರಮುಖ ಸದಸ್ಯನಾಗಿದ್ದೆ. ತಂಡದ ಗೆಲುವಿನಲ್ಲಿ ಕೊಡುಗೆ ನೀಡಲು ಸಾಧ್ಯವಾಗಿದೆ. ರೋಹಿತ್ ಶರ್ಮಾ ನೀಡಿದ ಧೈರ್ಯ, ಮಾನಸ್ಥಿಕ ಸ್ಥೈರ್ಯ, ಅಭಯದ ಮಾತುಗಳು ನನ್ನ ಕರಿಯರ್ ಬದಲಾಯಿಸಿತು ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
56
ನಿಧಾನವಾಗಿ ಚೇತರಿಸಿಕೊಂಡೆ
ನ್ಯೂಜಿಲೆಂಡ್ ಸರಣಿ ನನ್ನ ಮೇಲೆ ತೀವ್ರ ಪರಿಣಾಮ ಬೀರಿತ್ತು. ವಿಶ್ವಕಪ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಇತ್ತು. ನಾನು ಮಾನಸಿಕವಾಗಿ ಅಸ್ವಸ್ಥನಾಗಿದ್ದೆ. ಒಂದು ವಾರ ನನಗೆ ಈ ನೋವಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ನನ್ನ ಮುಖದಲ್ಲೇ ಕಾಣುತ್ತಿತ್ತು. ಆದರೆ ನಿಧಾನವಾಗಿ ಚೇತರಿಸಿಕೊಂಡು ಗೇಮ್ ಮೇಲೆ ಫೋಕಸ್ ಮಾಡಲು ಆರಂಭಿಸಿದೆ ಎಂದು ಸ್ಯಾಮ್ಸನ್ ಹೇಳಿದ್ದಾರೆ.
66
ರೋಹಿತ್ ನೀಡಿದ್ದ ಧೈರ್ಯ
ರೋಹಿತ್ ಶರ್ಮಾ ಅವರು ನನ್ನ ಮೇಲಿಟ್ಟಿದ್ದ ನಂಬಿಕೆ, ಅವರ ಧೈರ್ಯದ ಮಾತುಗಳು ವೆಸ್ಟ್ ಇಂಡೀಸ್ ವಿರುದ್ದ ಉತ್ತಮ ಇನ್ನಿಂಗ್ಸ್ ಆಡಲು ಸಾಧ್ಯವಾಯಿತು. ವಿಕೆಟ್ ಬೀಳುತ್ತಿದ್ದರೂ ತಂಡದ ಪರಿಸ್ಥಿತಿಗೆ ತಕ್ಕಂತೆ ಆಟವಾಡಿ ಗೆಲುವಿನಲ್ಲಿ ಪಾತ್ರವಹಿಸಲು ಸಾಧ್ಯವಾಯಿತು. ಇದು ನನ್ನ ಕರಿಯರ್ ಪ್ರಮುಖ ಪಂದ್ಯವಾಗಿ ನಾನು ಗುರಿತಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.