ಸಿಎಸ್‌ಕೆ ಅಲ್ಲ, ಟ್ರೇಡ್ ಮೂಲಕ ಈ ಐಪಿಎಲ್ ತಂಡ ಸೇರಿಕೊಳ್ಳುತ್ತಿದ್ದಾರೆ ಸಂಜು ಸ್ಯಾಮ್ಸನ್

Published : Nov 01, 2025, 07:43 PM IST

ಸಿಎಸ್‌ಕೆ ಅಲ್ಲ, ಟ್ರೇಡ್ ಮೂಲಕ ಈ ಐಪಿಎಲ್ ತಂಡ ಸೇರಿಕೊಳ್ಳುತ್ತಿದ್ದಾರೆ ಸಂಜು ಸ್ಯಾಮ್ಸನ್, ಈಗಾಗಲೇ ಮಾತುಕತೆಗಳು ನಡೆದಿದ್ದು, ಶೀಘ್ರದಲ್ಲೇ ಸಂಜು ಸ್ಯಾಮ್ಸನ್ ಹೊಸ ಫ್ರಾಂಚೈಸಿ ಸೇರಿಕೊಳ್ಳುತ್ತಿದ್ದಾರೆ.

PREV
16
ಸಿಎಸ್‌ಕೆ ಸೇರುತ್ತಿಲ್ಲ ಸಂಜು ಸ್ಯಾಮ್ಸನ್

ಐಪಿಎಲ್ 2026 ಟೂರ್ನಿ ತಯಾರಿಗಳು ಭರ್ಜಿಯಾಗಿ ನಡೆಯುತ್ತಿದೆ. ಐಪಿಎಲ್ ತಂಡಗಳು ರಿಟೇನ್ ಆಟಾರರು, ತಂಡದಿಂದ ಹೊರಹೋಗುವ ಆಟಗಾರರ ಪಟ್ಟಿ ಫೈನಲ್ ಮಾಡಿದೆ. ಇತ್ತ ಹರಾಜಿನಲ್ಲಿ ಯಾರನ್ನು ಖರೀದಿಸಬೇಕು, ಯಾರಿಗೆಲ್ಲಾ ಬಿಡ್ ಮಾಡಬೇಕು ಅನ್ನೋ ಪಟ್ಟಿಯೂ ತಯಾರಾಗುತ್ತಿದೆ. ಇದರ ನಡುವೆ ಸಂಜು ಸ್ಯಾಮ್ಸನ್ 2026ರ ಟೂರ್ನಿಯಲ್ಲಿ ಸಿಎಸ್‌ಕೆ ತಂಡ ಸೇರಿಕೊಳ್ಳುತ್ತಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಸಂಜು ಸ್ಯಾಮ್ಸನ್ ಸಿಎಸ್‌ಕೆ ಸೇರುತ್ತಿಲ್ಲ.

26
ಹೊಸ ಜರ್ಸಿಯಲ್ಲಿ ಸಂಜು ಸ್ಯಾಮ್ಸನ್

ರಾಜಸ್ಥಾನ ರಾಯಲ್ಸ್ ಬಿಡುವುದು ಬಹುತೇಕ ಖಚಿತಗೊಂಡಿದೆ. ಈ ಕುರಿತು ಮುಂದಿನ ಐಪಿಎಲ್ ಟೂರ್ನಿಗೂ ಮುನ್ನ ತಂಡದಿಂದ ರಿಲೀಸ್ ಮಾಡುವಂತೆ ಸಂಜು ಸ್ಯಾಮ್ಸನ್ ಪತ್ರವನ್ನೂ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಐಪಿಎಲ್ ಟ್ರೇಡ್ ಮೂಲಕ ಸಂಜು ಸ್ಯಾಮ್ಸನ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

36
ಭರ್ಜರಿ ಟ್ರೇಡ್ ಡೀಲ್

ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಟ್ರೇಡ್ ಡೀಲ್ ಅಂತಿಮ ಹಂತದಲ್ಲಿದೆ. ಟ್ರೇಡ್ ಮೂಲಕ ಸಂಜು ಸ್ಯಾಮ್ಸನ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಳ್ಳುತ್ತಿದ್ದಾರೆ. ಇತ್ತ ಸಂಜು ಸ್ಯಾಮ್ಸನ್ ಬದಲಿಗೆ ಡೆಲ್ಲಿ ತಂಡದಿಂದ ತ್ರಿಸ್ಟನ್ಸ್ ಸ್ಟಬ್ಸ್ ರಾಜಸ್ಥಾನ ರಾಯಲ್ಸ್ ಸೇರಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಡೀಲ್ ಅಂತಿಮ ಹಂತದಲ್ಲಿದೆ ಎಂದು ವರದಿಯಾಗಿದೆ.

ಭರ್ಜರಿ ಟ್ರೇಡ್ ಡೀಲ್

46
ಕೆಎಲ್ ರಾಹುಲ್ ಉಳಿಸಿಕೊಳ್ಳಲು ಡಿಸಿ ಪ್ಲಾನ್

2025ರ ಐಪಿಎಲ್ ಹರಾಜಿನಲ್ಲಿ ಕೆಎಲ್ ರಾಹುಲ್, ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ 13 ಪಂದ್ಯಗಳಿಂದ 539 ರನ್ ಸಿಡಿಸಿದ್ದ ರಾಹುಲ್ ಹಾಗೂ ಡೆಲ್ಲಿ ಕೋರ್ ತಂಡವನ್ನು ಉಳಿಸಿಕೊಳ್ಳಲು ಪ್ಲಾನ್ ಮಾಡಿದೆ. ಡೆಲ್ಲಿ ತಂಡದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವ ವಹಿಸಿಕೊಳ್ಳು ಸಾಧ್ಯತೆ ಇದೆ. ಹೀಗಾಗಿ ರಾಹುಲ್ ಯಾವುದೇ ಒತ್ತಡವಿಲ್ಲದೆ ಬ್ಯಾಟಿಂಗ್ ಮಾಡಲು ಫ್ರಾಂಚೈಸಿ ಪ್ಲಾನ್ ಮಾಡಲು ಮುಂದಾಗಿದೆ.

ಕೆಎಲ್ ರಾಹುಲ್ ಉಳಿಸಿಕೊಳ್ಳಲು ಡಿಸಿ ಪ್ಲಾನ್

56
2021ರಿಂದ ಆರ್‌ಆರ್ ನಾಯಕ

ಸಂಜು ಸ್ಯಾಮ್ಸನ್ ಸುದೀರ್ಘ ಕಾಲದಿಂದ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದಾರೆ. ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಸಂಜು ಸ್ಯಾಮ್ಸನ್, 2021ರಿಂದ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ವಹಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ಆರಂಭಿಕ ಆವೃತ್ತಿಯಲ್ಲಿ ಟ್ರೋಫಿ ಗೆದ್ದು ಸಾಧನೆ ಮಾಡಿದರೆ, ಉಳಿದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಟ್ರೋಫಿ ಗೆದ್ದಿಲ್ಲ.

2021ರಿಂದ ಆರ್‌ಆರ್ ನಾಯಕ

66
ರಾಜಸ್ಥಾನಕ್ಕೆ ನಾಯಕ ಯಾರು?

ಸಂಜು ಸ್ಯಾಮ್ಸನ್ ಡೆಲ್ಲಿ ತಂಡ ಸೇರಿಕೊಂಡರೆ ರಾಜಸ್ಥಾನಕ್ಕೆ ನಾಯಕ ಯಾರು ಅನ್ನೋ ಕುತೂಹಲ ಶುರುವಾಗಿದೆ. ಹಲವು ಹೆಸರುಗಳು ಕೇಳಿಬರುತ್ತಿದೆ. ಆದರೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಹೊಸ ಹಾಗೂ ಯುವ ಆಟಗಾರನಿಗೆ ಪಟ್ಟ ಕಟ್ಟಲು ಮುಂದಾಗಿದೆ.

ರಾಜಸ್ಥಾನಕ್ಕೆ ನಾಯಕ ಯಾರು?

Read more Photos on
click me!

Recommended Stories