ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎಂದೇ ಕರೆಸಿಕೊಳ್ಳುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿದೇಶಿ ತಾರಾ ಆಟಗಾರರಿಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ವಿದೇಶಿ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಫ್ರಾಂಚೈಸಿಗಳು ಸಾಕಷ್ಟು ಹಣ ಖರ್ಚು ಮಾಡಲು ಹಿಂದೆ-ಮುಂದು ನೋಡುವುದಿಲ್ಲ.
ಇನ್ನು ಕಳೆದ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 18.50 ರುಪಾಯಿ ನೀಡಿ ಸ್ಯಾಮ್ ಕರ್ರನ್ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ಮೂಲಕ ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್(16.25 ಕೋಟಿ ರುಪಾಯಿ) ಅವರನ್ನು ಹಿಂದಿಕ್ಕಿ 24 ವರ್ಷದ ಸ್ಯಾಮ್ ಕರ್ರನ್ ಇದೀಗ ಐಪಿಎಲ್‌ನ ಅತಿ ದುಬಾರಿ ಆಟಗಾರ ಎನ್ನುವ ದಾಖಲೆಯನ್ನು ಬರೆದಿದ್ದಾರೆ.
ಸ್ಯಾಮ್ ಕರ್ರನ್ ಮೈದಾನದಲ್ಲಿ ತಮ್ಮ ಆಕರ್ಷಕ ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚುತ್ತಿದ್ದಾರೆ. ಕಳೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಯಾಮ್ ಕರ್ರನ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಜಯಿಸಿದ್ದರು. ಸ್ಯಾಮ್ ಕರ್ರನ್, ಮೈದಾನದೊಳಗೆ ಮಾತ್ರವಲ್ಲ, ಮೈದಾನದ ಹೊರಗು ಒಳ್ಳೆಯ ಆಟಗಾರನಾಗಿದ್ದಾರೆ.
ಯುವ ಕ್ರಿಕೆಟಿಗ ಸ್ಯಾಮ್ ಕರ್ರನ್, ಮೈದಾನದ ಹೊರಗೆ ಬಿಂದಾಸ್ ಜೀವನ ನಡೆಸುತ್ತಿದ್ದಾರೆ. ಸ್ಯಾಮ್ ಕರ್ರನ್‌ಗೆ ಸುಂದರವಾದ ಗರ್ಲ್ ಫ್ರೆಂಡ್ ಕೂಡಾ ಇದ್ದಾಳೆ. ಆಕೆಯ ಹೆಸರು ಇಸಾಬೆಲ್ಲಾ ಗ್ರೇಸ್. ಲಂಡನ್‌ನ ಮೂಲದ ಇಸಾಬೆಲ್ಲಾ ಜತೆ ಸ್ಯಾಮ್ ಕರ್ರನ್ ಕಳೆದ ಹಲವು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ.
ಸ್ಯಾಮ್ ಕರ್ರನ್ ಹಾಗೂ ಇಸಾಬೆಲ್ಲಾ ಗ್ರೇಸ್ ಹಲವು ಬಾರಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಲೇ ಬಂದಿದ್ದಾರೆ. 2019ರ ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ಸ್ಯಾಮ್ ಕರ್ರನ್, ಇಸಾಬೆಲ್ಲಾ ಅವರನ್ನು ಭಾರತಕ್ಕೂ ಕರೆದುಕೊಂಡು ಬಂದಿದ್ದರು.
ಸ್ಯಾಮ್ ಕರ್ರನ್ ಐಪಿಎಲ್ ಪಂದ್ಯಗಳನ್ನು ಆಡುವಾಗ ಇಸಾಬೆಲ್ಲಾ ಮೈದಾನದ ಸ್ಟ್ಯಾಂಡ್‌ನಲ್ಲಿ ನಿಂತು ಸ್ಯಾಮ್ ಕರ್ರನ್ ಅವರ ತಂಡವನ್ನು ಬೆಂಬಲಿಸುತ್ತಿದ್ದರು. ಇಸಾಬೆಲ್ಲಾ ಕ್ಲಾಸಿಕಲ್ ಮ್ಯೂಸಿಕ್ ಕಲಿಯುತ್ತಿದ್ದು, ಡಿಸೈನರ್ ಹಾಗೂ ಆರ್ಟಿಸ್ಟ್ ಕೂಡಾ ಹೌದು.
ಸ್ಯಾಮ್ ಕರ್ರನ್ ತಮ್ಮ ಗರ್ಲ್ ಫ್ರೆಂಡ್ ಇಸಾಬೆಲ್ಲಾ ಜತೆಗೆ ಹೊರಗಡೆ ಸುತ್ತುವುದನ್ನು ಸಾಕಷ್ಟು ಇಷ್ಟಪಡುತ್ತಾರೆ. ಈ ಜೋಡಿ ತಮ್ಮ ಗೆಳೆತವನ್ನು ಜಗತ್ತಿನ ಮುಂದೆ ಈಗಾಗಲೇ ಅನಾವರಣ ಮಾಡಿದ್ದಾರೆ. ತಮ್ಮ ಸುತ್ತಾಟದ ಫೋಟೋಗಳನ್ನು ಈ ಜೋಡಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.