IPL 2023 'ಎಂಟರ್‌ಟೈನ್‌ಮೆಂಟ್ ಅಧಿಕೃತ ಆರಂಭ': ಆರ್‌ಸಿಬಿ ಕೂಡಿಕೊಂಡ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್‌..!

First Published | Mar 25, 2023, 1:41 PM IST

ಬೆಂಗಳೂರು: ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. 10 ತಂಡಗಳು, ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ದತೆ ಆರಂಭಿಸಿವೆ. ಇದೀಗ ಆರ್‌ಸಿಬಿ ಅನ್‌ಬಾಕ್ಸಿಂಗ್‌ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ದಿಗ್ಗಜ ಕ್ರಿಕೆಟಿಗರಾದ ಕ್ರಿಸ್ ಗೇಲ್ ಹಾಗೂ ಎಬಿ ಡಿಲಿಯರ್ಸ್‌ ಇದೀಗ ಆರ್‌ಸಿಬಿ ಪಾಳಯ ಕೂಡಿಕೊಂಡಿದ್ದಾರೆ.
 

2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 31ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಹಾಲಿ ಚಾಂಪಿಯನ್‌ ಗುಜರಾತ್ ಟೈಟಾನ್ಸ್ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೆಣಸಾಡಲಿವೆ. 

ಇನ್ನು ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಯಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಕೂಡಾ ಹೊಸ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಈ ಬಾರಿ ಆರ್‌ಸಿಬಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

Tap to resize

ಇನ್ನು ಇದೆಲ್ಲದರ ನಡುವೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಮಾರ್ಚ್ 26ರಂದು ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅಂದೇ ನೂತನ ಜೆರ್ಸಿ ಅನಾವರಣ ಕಾರ್ಯಕ್ರಮ ಹಾಗೂ ಆರ್‌ಸಿಬಿ ದಿಗ್ಗಜ ಕ್ರಿಕೆಟಿಗರಾದ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್‌ಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
 

ಈ ಇಬ್ಬರು ಕ್ರಿಕೆಟಿಗರಿಗೆ ಆರ್‌ಸಿಬಿ ಫ್ರಾಂಚೈಸಿಯು, ಹಾಲ್ ಆಫ್ ಫೇಮ್‌ ಗೌರವ ನೀಡಲು ತೀರ್ಮಾನಿಸಿದ್ದು, ಈ ಸಂದರ್ಭದಲ್ಲಿ ಎಬಿ ಡಿವಿಲಿಯರ್ಸ್‌ ಧರಿಸುತ್ತಿದ್ದ ಜೆರ್ಸಿ ನಂ.17 ಹಾಗೂ ಕ್ರಿಸ್ ಗೇಲ್ ಧರಿಸುತ್ತಿದ್ದ ಜೆರ್ಸಿ ನಂ.333 ಅನ್ನು ಶಾಶ್ವತವಾಗಿ ನಿವೃತ್ತಿಗೊಳಿಸಲು ಆರ್‌ಸಿಬಿ ಫ್ರಾಂಚೈಸಿಯು ನಿರ್ಧರಿಸಿದೆ. 

ಇದೀಗ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್‌ ಗೇಲ್‌, ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿಳಿದಿದ್ದು, ಆರ್‌ಸಿಬಿ ಫ್ರಾಂಚೈಸಿಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ, "ತಮ್ಮ ನೆಚ್ಚಿನ ತವರಿಗೆ ಯೂನಿವರ್ಸೆಲ್ ಬಾಸ್ ಕ್ರಿಸ್ ಗೇಲ್‌ ಬಂದಿಳಿದಿದ್ದಾರೆ. ಈ ಮೂಲಕ ಎಂಟರ್‌ಟೈನ್‌ಮೆಂಟ್ ಅಧಿಕೃತವಾಗಿ ಆರಂಭವಾಗಿದೆ" ಎಂದು ಟ್ವೀಟ್ ಮಾಡಿದೆ.

ಇನ್ನು ತಮ್ಮ ಅಸಾಧಾರಣ ಆಟದ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಸೂರೆಗೊಂಡಿರುವ ಎಬಿ ಡಿವಿಲಿಯರ್ಸ್‌ ಕೂಡಾ ಬೆಂಗಳೂರಿಗೆ ಬಂದಿಳಿದಿದ್ದು, ಬೆಂಗಳೂರಿಗೆ ಏಲಿಯನ್ ಬಂದಿರುವುದು ವರದಿಯಾಗಿದೆ ಎಂದು ಎಬಿಡಿಯನ್ನು ವಿನೂತನವಾಗಿಯೇ ಸ್ವಾಗತಿಸಿದೆ.

ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮದ ದಿನ ಸೋನು ನಿಗಮ್‌, ಜೇಸನ್‌ ಡೆರುಲೊ ಸೇರಿ​ದಂತೆ ವಿವಿಧ ಬ್ಯಾಂಡ್‌​ಗ​ಳಿಂದ ಸಂಗೀತ ಕಾರ‍್ಯಕ್ರಮ ಆಯೋ​ಜಿ​ಸ​ಲಾ​ಗು​ತ್ತದೆ. ಸಂಜೆ 4ರಿಂದ ರಾತ್ರಿ 10ರ ವರೆಗೆ ಅಭ್ಯಾಸ, ಸಂಗೀತ, ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಫ್ರಾಂಚೈಸಿಯು ತಿಳಿಸಿದೆ.

ಆರ್‌​ಸಿಬಿ ತವ​ರಿನ ಮೊದಲ ಪಂದ್ಯ​ವನ್ನು ಏಪ್ರಿಲ್ 2ಕ್ಕೆ ಮುಂಬೈ ವಿರುದ್ಧ ಆಡ​ಲಿ​ದ್ದು, ಮಾರ್ಚ್‌ 26ರಂದು ಎಲ್ಲಾ ಆಟ​ಗಾ​ರರು ಕ್ರೀಡಾಂಗ​ಣ​ದಲ್ಲಿ ಅಭ್ಯಾಸ ನಡೆ​ಸ​ಲಿ​ದ್ದಾರೆ. ಇದಕ್ಕೆ ಟಿಕೆಟ್‌ ಇಟ್ಟಿ​ರುವ ಫ್ರಾಂಚೈ​ಸಿಯು ಕನಿಷ್ಠ 640 ರುಪಾಯಿನಿಂದ ಗರಿಷ್ಠ 7,500 ರುಪಾಯಿ ವರೆಗೆ ದರ ನಿಗ​ದಿ​ಪ​ಡಿ​ಸಿದೆ.
 

Latest Videos

click me!