ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ನಾಯಕ ಈಗ ಪತ್ನಿ ಜೊತೆ ರಿಲ್ಯಾಕ್ಸ್!

First Published | Oct 17, 2023, 1:20 PM IST

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ದಾಖಲೆಯ ಪದಕ ಗೆದ್ದು ಇತಿಹಾಸ ರಚಿಸಿದೆ. ಈ ದಾಖಲೆಯ ಹಿಂದೆ ಭಾರತ ಕ್ರಿಕೆಟ್ ತಂಡದ ಕೂಡುಗೆಯೂ ಇದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡ ಮುನ್ನಡೆಸಿದ ರುತುರಾಜ್ ಗಾಯಕ್ವಾಡ್ ಇದೀಗ ವಿಶ್ರಾಂತಿಗೆ ಜಾರಿದ್ದಾರೆ. 
 

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂಲಕ ಭಾರಿ ಜನಪ್ರಿಯವಾಗಿರುವ ರುತುರಾಜ್ ಗಾಯಕ್ವಾಡ್ ಇದೀಗ ಭಾರತಕ್ಕೆ ಚಿನ್ನ ತಂದುಕೊಟ್ಟ ಅಪ್ಪಟ ಬಂಗಾರ. ಹೌದು ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಕ್ರಿಕೆಟ್ ತಂಡ ಮುನ್ನಡೆಸಿ ಚಿನ್ನ ಗೆಲ್ಲಿಸಿದ ನಾಯಕ.
 

ಏಷ್ಯನ್ ಗೇಮ್ಸ್‌ನಲ್ಲಿ ಪದಕ ವಿಚೇತರನ್ನು ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿ ಸಂವಾದ ನಡೆಸಿದ್ದರು. ಈ ದೇಶದ ಯುವ ಸಮೂಹಕ್ಕೆ ನೀವು ಸ್ಪೂರ್ತಿ ಎಂದು ಮೋದಿ ಹೇಳಿದ್ದರು.
 

Tap to resize

ಏಷ್ಯನ್ ಗೇಮ್ಸ್ ಬಳಿಕ ರುತುರಾಜ್ ಗಾಯಕ್ವಾಡ್ ಇದೀಗ ದೇಸಿ ಕ್ರಿಕೆಟ್ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಇದರ ನಡುವೆ ಸಿಕ್ಕ ಸಮಯದಲ್ಲಿ ಪತ್ನಿ ಜೊತೆ ಹಾಯಾಗಿ ಕಳೆಯುತ್ತಿದ್ದಾರೆ.
 

2023ರ ಐಪಿಎಲ್ ಟೂರ್ನಿ ಫೈನಲ್ ಪಂದ್ಯದಲ್ಲಿ ಸಿಎಸ್‌ಕೆ ಗೆಲುವಿನ ನಗೆ ಬೀರಿತ್ತು. ಈ ವೇಳೆ ರುತುರಾಜ್ ಗಾಯಕ್ವಾಡ್ ತನ್ನ ಗಳೆತಿ ಉತ್ಕರ್ಷ ಜೊತೆ ಕಾಣಿಸಿಕೊಂಡಿದ್ದರು.
 

ರುತುರಾಜ್ ಗಾಯಕ್ವಾಡ್ ಇದೇ ವರ್ಷದ ಜೂನ್ ತಿಂಗಳ 3 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರೆ. ಉತ್ಕರ್ಷ ಪವಾರ್ ಕೈಹಿಡಿದ ರುತುರಾಜ್ ಗಾಯಕ್ವಾಡ್‌ಗೆ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದರು.

ರುತುರಾಜ್ ಮದುವೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ರಿಕೆಟಿಗರು ಪಾಲ್ಗೊಂಡಿದ್ದರು. ರುತುರಾತ್ ಹಾಗೂ ಉತ್ಕರ್ಷ ಆಪ್ತರು, ಕುಟುಂಬಸ್ಥರು ಹಾಗೂ ಕೆಲ ಕ್ರಿಕೆಟಿಗರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು.

ಇಂಡಿಯಾ ಎ ತಂಡ ಖಾಯಂ ಸದಸ್ಯನಾಗಿರುವ ರುತುರಾಜ್ ಗಾಯಕ್ವಾಡ್ 2022ರಲ್ಲಿ ಟೀಂ ಇಂಡಿಯಾ ಏಕದಿನ ಹಾಗೂ ಟಿ20 ಮಾದರಿಗೂ ಪದಾರ್ಪಣೆ ಮಾಡಿದ್ದಾರೆ.

Latest Videos

click me!