ಅಭಿಮಾನಿಗಳು ಕಾದು ಕುಳಿತಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ರೋಟಕ ಘಟ್ಟ ತಲುಪಿದೆ. ಅಹಮ್ಮದಾಬಾದ್‌ನ ಮೋದಿ ಕ್ರೀಡಾಂಗಣದಲ್ಲಿ ಲಕ್ಷಕ್ಕೂ ಅಧಿಕ ಅಭಿಮಾನಿಗಳು ಈ ಪಂದ್ಯಕ್ಕೆ ಸಾಕ್ಷಿಯಾಗಿದ್ದಾರೆ.
Indian Bowlers
ಪಾಕಿಸ್ತಾನದ ದಿಟ್ಟ ಬ್ಯಾಟಿಂಗ್ ಹೋರಾಟಕ್ಕೆ ಬ್ರೇಕ್ ಹಾಕಿರುವ ಭಾರತ, 191 ರನ್‌ಗೆ ಪಾಕ್ ತಂಡವನ್ನು ಆಲೌಟ್ ಮಾಡಿದೆ . ಇಡೀ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಕ್ರಿಕೆಟಿಗರಿಗೆ ವಿವಿಧ ರೀತಿಯಲ್ಲಿ ಬೆಂಬಲ ನೀಡುತ್ತಿದ್ದಾರೆ. ತ್ರಿವರ್ಣ ಧ್ವಜ, ಕ್ರಿಕೆಟಿಗರ ಪೋಸ್ಟರ್‌ಗಳು ರಾರಾಜಿಸುತ್ತಿದೆ.
ಈ ಪೋಸ್ಟರ್ ನಡುವೆ ಅಭಿಮಾನಿಯೊಬ್ಬರು ಇಂಡಿಯಾ ಸ್ಟಾಂಡ್ ವಿಥ್ ಇಸ್ರೇಲ್ ಪ್ಲಕಾರ್ಡ್ ಗಮನಸೆಳೆದಿದೆ. ಹರ್ಷಲ್ ಪುರೋಹಿತ್ ಎಕ್ಸ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಭಾರತ, ಇಸ್ರೇಲ್ ಬೆಂಬಲಕ್ಕಿದೆ ಎಂದು ಬರೆದಿರುವ ಪೋಸ್ಟರ್ ಇದಾಗಿದೆ. ಜೊತೆಗೆ ಪ್ರಧಾನಿ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಫೋಟೋ ಇರುವ ಪ್ಲಕಾರ್ಡ್ ಭಾರಿ ಸದ್ದು ಮಾಡುತ್ತಿದೆ.
ಹಮಾಸ್ ಉಗ್ರರು ನಡೆಸಿದ ಭೀಕರ ದಾಳಿಗೆ ಪ್ರತಿದಾಳಿ ಆರಂಭಿಸಿರುವ ಇಸ್ರೇಲ್‌ಗೆ ಹಲವು ದೇಶಗಳು ಬೆಂಬಲ ನೀಡಿದೆ. ಉಗ್ರರ ವಿರುದ್ದ ಹೋರಾಟಕ್ಕೆ ಭಾರತ ಕೂಡ ಬೆಂಬಲ ನೀಡಿದೆ. ಇದೀಗ ಅಭಿಮಾನಿಗಳು ಭಾರತದ ನಿಲವನ್ನು ಬೆಂಬಲಿಸಿದ ಪೋಸ್ಟರ್ ಕಾಣಸಿಗುತ್ತಿದೆ.
ಈ ಪೋಸ್ಟರ್ ವೈರಲ್ ಆಗುತ್ತಿದ್ದಂತೆ ಇಸ್ರೇಲ್ ಸರ್ಕಾರ ತನ್ನ ಅಧಿಕೃತ ಎಕ್ಸ್ ಖಾತೆಯಿಂದ ಪ್ರತಿಕ್ರಿಯೆ ನೀಡಿದೆ. ಧನ್ಯವಾದ ಭಾರತ ಎಂದು ಇಸ್ರೇಲ್ ಪ್ರತಿಕ್ರಿಯೆ ನೀಡಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸ್ಟಾಂಡ್ ವಿಥ್ ಇಸ್ರೇಲ್ ಪ್ಲಕಾರ್ಡ್ ಇದೀಗ ಇಸ್ರೇಲ್ ಸರ್ಕಾರಕ್ಕೂ ಮುಟ್ಟಿದೆ. ಇತ್ತ ಭಾರತ ತಂಡ ಪಾಕ್ ವಿರುದ್ದ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿ 191 ರನ್‌ಗೆ ಆಲೌಟ್ ಮಾಡಿದೆ.
ಬೃಹತ್ ಮೊತ್ತದ ಸೂಚನೆ ನೀಡಿದ ಪಾಕಿಸ್ತಾನ ತಂಡ 191 ರನ್‌ಗೆ ಆಲೌಟ್ ಆಗಿದ್ದರೆ, ಇತ್ತ ಭಾರತೀಯ ಅಭಿಮಾನಿಗಳ ಬೆಂಬಲಕ್ಕೆ ಇಸ್ರೇಲ್ ಸರ್ಕಾರ ಕ್ಲೀನ್ ಬೋಲ್ಡ್ ಆಗಿದೆ.