ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಹಿಂದೆ ವಿರಾಟ್ ಕೊಹ್ಲಿ, ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ LALOG!

Published : Oct 16, 2023, 08:52 PM IST

ಒಲಿಂಪಿಕ್ಸ್  ಗೇಮ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಮಾಡಲಾಗಿದೆ. ಇಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅಧಿಕೃತ ಘೋಷಣೆ ಮಾಡಿದೆ. ಆದರೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಹಿಂದೆ ವಿರಾಟ್ ಕೊಹ್ಲಿ ಕಾರಣ ಅನ್ನೋ ಸ್ಫೋಟಕ ಮಾಹಿತಿಯನ್ನು  LALOG ಅಧ್ಯಕ್ಷ ಬಹಿರಂಗಪಡಿಸಿದ್ದಾರೆ.  

PREV
18
ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಹಿಂದೆ ವಿರಾಟ್ ಕೊಹ್ಲಿ, ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ LALOG!

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಘೋಷಣೆ ಹೊರಬಿದ್ದಿದೆ. 2028ರ ಲಾಸ್ ಎಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಕ್ರಿಕೆಟ್ ಅಧಿಕೃತ ಕ್ರೀಡೆಯಾಗಿ ಒಲಿಂಪಿಕ್ಸ್‌ನಲ್ಲಿ ಆಯೋಜನೆಗೊಳ್ಳಲಿದೆ.
 

28

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮುಂಬೈನಲ್ಲಿ ನಡೆಯುತ್ತಿರುವ 141ನೇ ಅಧಿವೇಶನದಲ್ಲಿ ಘೋಷಣೆ ಮಾಡಿದೆ. ಇದೇ ವೇಳೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗಡಿಸಿದೆ. ಕ್ರಿಕೆಟ್ ಸೇರ್ಪಡೆ ಹಿಂದೆ ವಿರಾಟ್ ಕೊಹ್ಲಿ ಕೂಡ ಕಾರಣರಾಗಿದ್ದಾರೆ.

38

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಹಿಂದೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ.  ಈ ವೇಳೆ ಜನಪ್ರಿಯತೆ ಕುರಿತು ಚರ್ಚೆ ನಡೆದಿದೆ. ವಿರಾಟ್ ಕೊಹ್ಲಿ ಜನಪ್ರಿಯತೆ ಈಗಾಗಲೇ ಒಲಿಂಪಿಕ್ಸ್ ಕ್ರೀಡೆಯಲ್ಲಿರುವ ಹಲವು ಜನಪ್ರಿಯ ಕ್ರೀಡಾಪಟುಗಳ ಜನಪ್ರಿಯತೆಗಿಂತ ಅಧಿಕವಾಗಿದೆ ಅನ್ನೋದನ್ನು ಚರ್ಚಿಸಲಾಗಿದೆ.
 

48

ಕೊಹ್ಲಿ ಕ್ರಿಕೆಟ್‌ನ ಅಂತಾರಾಷ್ಟ್ರೀಯ ರಾಯಭಾರಿ. ಮೇ ತಿಂಗಳಲ್ಲಿ ಕೊಹ್ಲಿ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 250 ಮಿಲಿಯನ್ ಗಡಿ ದಾಟಿದೆ. ಈ ಮೂಲಕ ಕ್ರಿಸ್ಟಿಯಾನೋ ರೋನಾಲ್ಡೋ ಹಾಗೂ ಲಿಯೊನೆಲ್ ಮೆಸ್ಸಗಿಂತ ನಂತರದ ಸ್ಥಾನ ಕೊಹ್ಲಿ ಪಡೆದಿದ್ದಾರೆ ಎಂದು ಲಾಸ್ ಎಂಜಲೀಸ್ ಒಲಿಂಪಿಕ್ಸ್ ಆಯೋಜಕ ಸಮಿತಿ ಅಧ್ಯಕ್ಷ ನಿಕೋಲೋ ಕ್ಯಾಂಪ್ರಿಯಾನಿ ಹೇಳಿದ್ದಾರೆ.

58

ಸಾಮಾಜಿಕ ಜಾಲತಾದಲ್ಲಿ ಕೊಹ್ಲಿ 315 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದಾರೆ.ವಿಶ್ವದ ಖ್ಯಾ ಕ್ರೀಡಾಪಟುಗಳಾದ ಲೇಬ್ರಾನ್ ಜೇಮ್ಸ್, ಟಾಮ್ ಬ್ರಾಡಿ, ಟೈಗರ್ ವುಡ್ಸ್ ಸಾಮಾಜಿಕ ಮಾಧ್ಯಮ ಒಟ್ಟು ಫಾಲೋವರ್ಸ್‌ಗಿಂತ ಕೊಹ್ಲಿಗೆ ಅಧಿಕ ಹಿಂಬಾಲಕರಿದ್ದಾರೆ. ಇದು ಒಲಿಂಪಿಕ್ಸ್ ಕ್ರಿಕೆಟ್ ಸೇರ್ಪಡೆಗೆ ನೆರವಾಗಿದೆ ಎಂದು ನಿಕೋಲೋ ಹೇಳಿದ್ದಾರೆ.
 

68

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಒಲಿಂಪಿಕ್ಸ್ ಕ್ರೀಡೆಗಳ ಜೊತೆ ಕ್ರಿಕೆಟ್ ಕೂಡ ಆಯೋಜನೆಗೊಳ್ಳಲಿದೆ. ಕ್ರಿಕೆಟ್ ಜನಪ್ರಿಯತೆ ಇದೀಗ ಮತ್ತಷ್ಟು ವಿಸ್ತರಣೆಗೊಳ್ಳಲಿದೆ ಎಂದು ನಿಕೋಲೋ ಹೇಳಿದ್ದಾರೆ.

78

ವಿಶ್ವದ ಕ್ರೀಡಾ ತಾರೆಯರಾದ ಸೆರೆನಾ ವಿಲಿಯಮ್ಸ್ ರೋಜರ್ ಫೆಡರ್, ಪ್ಯಾಟ್ರಿಕ್ ಮಹೋಮ್ಸ‌ಗಿಂತ ಅಧಿಕ ಹಿಂಬಾಲಕರನ್ನು ಕೊಹ್ಲಿ ಹೊಂದಿದ್ದರೆ. ಕೊಹ್ಲಿ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಅತ್ಯಂತ ಜನಪ್ರಯರಾಗಿದ್ದಾರೆ ಎಂದು ನಿಕೋಲೋ ಹೇಳಿದ್ದಾರೆ.

88

ಮುಂಬೈನಲ್ಲಿ ನಡೆಯುತ್ತಿರುವ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಿದೆ. ಹಲವು ರಾಷ್ಟ್ರಗಳ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories