2011ವಿಶ್ವಕಪ್ ಫೈನಲ್‌ನಲ್ಲಿ ಧೋನಿ 3ನೇ ಕ್ರಮಾಂಕಕ್ಕೆ ಪ್ರಮೋಷನ್: ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಸಚಿನ್

Published : Aug 28, 2025, 10:00 AM IST

2011ರ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಬ್ಯಾಟಿಂಗ್ ಆರ್ಡರ್‌ನಲ್ಲಿ ಬದಲಾವಣೆಗಳಾಗಿತ್ತು. ಯುವರಾಜ್‌ಗಿಂತ ಮೊದಲು ಧೋನಿ ಬ್ಯಾಟಿಂಗ್‌ಗೆ ಬಂದಿದ್ರು. ಹೀಗೆ ಯಾಕೆ ಮಾಡಬೇಕಾಯ್ತು ಅಂತ ಆಗಿನ ಟೀಂ ಮೆಂಬರ್ ಸಚಿನ್ ತೆಂಡೂಲ್ಕರ್ ರಿವೀಲ್ ಮಾಡಿದ್ದಾರೆ.

PREV
17
ಮನಬಿಚ್ಚಿ ಮಾತನಾಡಿದ ಸಚಿನ್

ಸಚಿನ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಡೆದ ಆಸಕ್ತಿಕರ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. 'ರೆಡಿಟ್'ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತಮ್ಮ ಕೆಲವು ಅವಿಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

27
1. ನೈರೋಬಿಯಲ್ಲಿ ಮೆಕ್‌ಗ್ರಾತ್ ವಿರುದ್ಧ ಹೋರಾಟ

2000ದಲ್ಲಿ ನೈರೋಬಿಯಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ಗ್ಲೆನ್ ಮೆಕ್‌ಗ್ರಾತ್‌ರನ್ನು ಎದುರಿಸಿದ್ದನ್ನು ಸಚಿನ್ ನೆನಪಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಸಚಿನ್ 37 ಎಸೆತಗಳಲ್ಲಿ 38 ರನ್ ಗಳಿಸಿದ್ದರು.

37
2. ಮಾಜಿ ಅಂಪೈರ್ ಸ್ಟೀವ್ ಬಕ್ನರ್ ಬಗ್ಗೆ ಸಚಿನ್ ಜೋಕ್
ತಮ್ಮನ್ನು ಹಲವು ಬಾರಿ ವಿವಾದಾತ್ಮಕವಾಗಿ ಔಟ್ ನೀಡಿದ ಮಾಜಿ ಅಂಪೈರ್ ಸ್ಟೀವ್ ಬಕ್ನರ್ ಬಗ್ಗೆ ಸಚಿನ್ ಹಾಸ್ಯ ಮಾಡಿದ್ದಾರೆ. “ನಾನು ಬ್ಯಾಟಿಂಗ್ ಮಾಡುವಾಗ ಅವರಿಗೆ ಬಾಕ್ಸಿಂಗ್ ಗ್ಲೌಸ್ ಹಾಕಬೇಕಿತ್ತು” ಎಂದಿದ್ದಾರೆ.
47
3. ಡಿಆರ್‌ಎಸ್‌ನಲ್ಲಿ ಅಂಪೈರ್ ಕಾಲ್ ತೆಗೆದುಹಾಕಬೇಕು

ಡಿಆರ್‌ಎಸ್ ನಿಯಮಗಳಲ್ಲಿ ಅಂಪೈರ್ ಕಾಲ್ ಅನ್ನು ತೆಗೆದುಹಾಕಬೇಕು ಎಂದು ಸಚಿನ್ ಹೇಳಿದ್ದಾರೆ. ಡಿಆರ್‌ಎಸ್ ತೆಗೆದುಕೊಂಡ ನಂತರ ಫಲಿತಾಂಶವು ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

57
4. 2011 ವಿಶ್ವಕಪ್ ಫೈನಲ್‌ನಲ್ಲಿ ಧೋನಿ ಪ್ರಮೋಷನ್

2011ರ ವಿಶ್ವಕಪ್ ಫೈನಲ್‌ನಲ್ಲಿ ಧೋನಿಯನ್ನು ಯುವರಾಜ್‌ಗಿಂತ ಮೊದಲು ಬ್ಯಾಟಿಂಗ್‌ಗೆ ಕಳುಹಿಸಲು ಎರಡು ಕಾರಣಗಳಿವೆ ಎಂದು ಸಚಿನ್ ಹೇಳಿದ್ದಾರೆ. ಎಡ-ಬಲ ಸಂಯೋಜನೆಯಿಂದ ಸ್ಪಿನ್ನರ್‌ಗಳಿಗೆ ತೊಂದರೆಯಾಗುತ್ತಿತ್ತು. ಇದೇ ಕಾರಣಕ್ಕೆ ಧೋನಿ ಕಣಕ್ಕಿಳಿಸಲಾಯಿತು ಎಂದಿದ್ದಾರೆ. ಯಾಕೆಂದರೆ ಕ್ರೀಸ್‌ನಲ್ಲಿ ಗೌತಮ್ ಗಂಭೀರ್ ಬ್ಯಾಟ್ ಮಾಡುತ್ತಿದ್ದರು. 

ಆಗ ಲಂಕಾ ಪರ ಮುತ್ತಯ್ಯ ಮುರುಳೀಧರನ್ ಬೌಲಿಂಗ್ ಮಾಡುತ್ತಿದ್ದರು.

67
5. ಜೋ ರೂಟ್ ಬಗ್ಗೆ ಸಚಿನ್ ಮೊದಲೇ ಹೇಳಿದ್ದರಂತೆ!

2012ರಲ್ಲಿ ಭಾರತ ಪ್ರವಾಸದಲ್ಲಿ ಜೋ ರೂಟ್ ಪಾದಾರ್ಪಣೆ ಮಾಡಿದಾಗ, ಅವರು ಭವಿಷ್ಯದಲ್ಲಿ ಇಂಗ್ಲೆಂಡ್ ನಾಯಕರಾಗುತ್ತಾರೆ ಎಂದು ತಮ್ಮ ತಂಡದ ಸದಸ್ಯರಿಗೆ ಹೇಳಿದ್ದಾಗಿ ಸಚಿನ್ ನೆನಪಿಸಿಕೊಂಡಿದ್ದಾರೆ.

77
6. ಅಭಿಮಾನಿಗಳ ನಿರೀಕ್ಷೆಗಳಿಗೆ ಸಚಿನ್ ಪ್ರತಿಕ್ರಿಯೆ
ತಂಡದ ಅಭಿಮಾನಿಗಳೇ ತಮ್ಮನ್ನು ಮುನ್ನಡೆಸಿದ್ದಾರೆ ಎಂದು ಸಚಿನ್ ಹೇಳಿದ್ದಾರೆ. “ಕೋಟ್ಯಂತರ ಜನರು ನನ್ನ ಬೆನ್ನ ಹಿಂದೆ ಇದ್ದರು, ಇದರಿಂದ ನಾನು ಮುಂದೆ ಸಾಗಿದೆ” ಎಂದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories