ವಿರಾಟ್ ಕೊಹ್ಲಿ ಬಳಿಯಿರುವ ಟಾಪ್ 10 ಕಾಸ್ಟ್ಲಿ ವಾಚ್‌ಗಳಿವು..! ಒಂದು ವಾಚ್‌ ಬೆಲೆ 100 ಕುಟುಂಬಗಳ ವರ್ಷದ ಆದಾಯ..!

First Published | Aug 11, 2023, 6:54 PM IST

ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ರನ್‌ ಗಳಿಸುವ ವಿಚಾರದಲ್ಲಿ ಮಾತ್ರವಲ್ಲ, ಫ್ಯಾಷನ್ ಮಾಡುವುದರಲ್ಲೂ ಎತ್ತಿದ ಕೈ. ಕಿಂಗ್ ಕೊಹ್ಲಿ ಡ್ರೆಸ್‌ ಸೆನ್ಸ್ ಹೇಗಿರುತ್ತೆ ಎಂದರೆ ಮೈದಾನದಾಚೆಗೆ ಬಂದರೆ ಯಾವ ಮಾಡೆಲ್‌ಗೂ ಕಮ್ಮಿಯಿಲ್ಲ ಎನ್ನುವಂತಿರುತ್ತದೆ. ಇನ್ನು ವಿರಾಟ್ ಕೊಹ್ಲಿ ಬಳಿ ಇರುವ ವಾಚ್ ಕಲೆಕ್ಷನ್‌, ಅವುಗಳ ಬೆಲೆ ಕೇಳಿದರೆ ನೀವೂ ಕೂಡಾ ಒಂದು ಕ್ಷಣ ಥ್ರಿಲ್ ಆಗಬಹುದು. ಕೊಹ್ಲಿ ಒಂದು ವಾಚಿನ ಬೆಲೆಯಲ್ಲಿ 100 ಕುಟುಂಬಗಳು ಒಂದು ವರ್ಷ ಜೀವನ ಮಾಡಬಹುದು. ಕೊಹ್ಲಿ ಬಳಿಯಿರುವ 10 ಐಶಾರಾಮಿ ವಾಚ್‌ಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.

1. ರೊಲೆಕ್ಸ್‌ ಡೆಟೊನಾ ರೈನ್‌ಬೊ ಎವರೋಸ್‌ ಗೋಲ್ಡ್: ಬೆಲೆ 4.6 ಕೋಟಿ ರುಪಾಯಿ

ಇದು ವಿರಾಟ್ ಕೊಹ್ಲಿ ಬಳಿಯಿರುವ ಅತ್ಯಂತ ಐಶಾರಾಮಿ ಹಾಗೂ ದುಬಾರಿ ವಾಚ್‌. ಈ ವಾಚ್‌ನಲ್ಲಿ 36 ಬ್ಯಾಗುಟೆ ಕಟ್‌ ಡೈಮಂಡ್‌ ಅಳವಡಿಸಲಾಗಿದೆ. ಅಭಿಮಾನಿ ಪೇಜ್‌ವೊಂದು ಹಂಚಿಕೊಂಡ ಪ್ರಕಾರ ಇದರ ಬೆಲೆ ಬರೋಬ್ಬರಿ 4.6 ಕೋಟಿ ರುಪಾಯಿಗಳು..!

2. ಪ್ಲಾಟಿನಂ ರೊಲೆಕ್ಸ್‌ ಡೆಟೊನಾ ವಿತ್ ಐಸ್ ಬ್ಲೂ ಡಯಲ್ & ಬ್ರೌನ್ ಸೆರೆಮಿಕ್ ಬೆಝೆಲ್: ಬೆಲೆ 1.23 ಕೋಟಿ ರುಪಾಯಿ

ವಿರಾಟ್ ಕೊಹ್ಲಿ ಧರಿಸುವ ದ ಡೆಟೊನಾ 116506 ಸನ್‌ರೇ ಫಿನಿಶ್‌ ಹೊಂದಿದ ಐಶಾರಾಮಿ ವಾಚ್ ಆಗಿದೆ. ಪ್ಲಾಟಿನಂ ಮೇಲ್ಗವಚ ಹೊಂದಿರುವ ಈ ವಾಚ್‌ನ ಬೆಲೆ 1.23 ಕೋಟಿ ರುಪಾಯಿಗಳಾಗಿವೆ.

Tap to resize

3. ಪ್ಲಾಟಿನಂ ಪಾಟೆಕ್ ಫಿಲಿಫ್ಫಿ ಗ್ರ್ಯಾಂಡ್‌ ಕಾಂಪ್ಲಿಕೇಶನ್: ಬೆಲೆ 2.6 ಕೋಟಿ ರುಪಾಯಿ

ಹೆಸರೇ ಸೂಚಿಸುವಂತೆ ಇದು ಸಂಪೂರ್ಣ ಪ್ಲಾಟಿನಂನಿಂದ ಆವೃತವಾಗಿರುವ ಐಶಾರಾಮಿ ವಾಚ್ ಇದಾಗಿದ್ದು, ಇದರ ಬೆಲೆ ಬರೋಬ್ಬರಿ 2.6 ಕೋಟಿ ರುಪಾಯಿಗಳು. ಈ ವಾಚ್‌ನ ಮತ್ತೊಂದು ವಿಶೇಷ ಎಂದರೆ ಸಮಯ ತೋರಿಸುವ ವಾಚ್‌ನ ಮುಳ್ಳು ಕೂಡಾ ಅಪ್ಪಟ ಬಂಗಾರದಿಂದ ಕೂಡಿದೆ

4. ಆಡಮರ್ಸ್‌ ಫಿಯುಟ್ ರಾಯಲ್‌ ಓಕ್‌ ಡಬಲ್ ಬ್ಯಾಲೆನ್ಸ್ ವೀಲ್: ಬೆಲೆ 1.2 ಕೋಟಿ ರುಪಾಯಿ

ಆಡಮರ್ಸ್‌ ಫಿಯುಟ್ ರಾಯಲ್‌ ಓಕ್‌ ಡಬಲ್ ಬ್ಯಾಲೆನ್ಸ್ ವೀಲ್ ಐಶಾರಾಮಿ ವಾಚ್‌ 18 ಕ್ಯಾರೆಟ್‌ ಗುಲಾಬಿ ಬಣ್ಣದ ಚಿನ್ನದ ಕೇಸ್‌ ಒಳಗೊಂಡಿದ್ದು, ನೀಲಮಣಿ ಸ್ಪಟಿಕ & ಆಂಟಿಗ್ಲೇರ್‌ ಗುಣಲಕ್ಷಣಗಳನ್ನು ಹೊಂದಿದೆ. ಈ ವಾಚ್‌ನ ಬೆಲೆ 1.2 ಕೋಟಿ ರುಪಾಯಿಗಳಾಗಿವೆ.

5.18KT ಯೆಲ್ಲೋ ಗೋಲ್ಡ್‌ ರೊಲೆಕ್ಸ್‌ ಡೆಟೊನಾ ವಿತ್ ಗ್ರೀನ್‌ ಡಯಲ್: ಬೆಲೆ 1.1 ಕೋಟಿ ರುಪಾಯಿ

18 ಕ್ಯಾರೆಟ್ ಚಿನ್ನದಿಂದ ಸೊಗಸಾಗಿ ವಿನ್ಯಾಸಗೊಳಿಸಲಾಗಿರುವ ಈ ಐಶಾರಾಮಿ ವಾಚ್‌, ಸ್ಕ್ರಾಚ್‌ ಪ್ರೂಫ್ ಆಗಿದೆ. ನೀಲಮಣಿ ಸ್ಪಟಿಕದಿಂದ ಆವರಿಸಲ್ಪಟ್ಟಿರುವ ಈ ವಾಚ್‌, ಹಸಿರು ಡಯಲ್ ಹೊಂದಿದ್ದು, ಇದರ ಬೆಲ್ಲೆ 1.1 ಕೋಟಿ ರುಪಾಯಿಗಳಾಗಿವೆ.

6. ಪಾಟಕ್ ಫಿಲಿಫ್ಫಿ ಆಕ್ವಾನಟ್‌ 18kt ರೋಸ್‌ ಗೋಲ್ಡ್‌ 5167A-001: ಬೆಲೆ 87 ಲಕ್ಷ ರುಪಾಯಿ

ಈ ಅಕ್ವಾನಾಟ್ ಮಾದರಿಯು ಪ್ರಕಾಶಮಾನ-ಲೇಪಿತ ಚಿನ್ನದ ಅಂಕಿಗಳಿಂದ ಅಲಂಕರಿಸಲ್ಪಟ್ಟ ಶ್ರೀಮಂತ ಕಂದು ಉಬ್ಬು ಡಯಲ್ ಅನ್ನು ಈ ವಾಚ್‌ ಒಳಗೊಂಡಿದೆ. ಅಂದವಾದ ಗುಲಾಬಿ ಚಿನ್ನದಲ್ಲಿ ಸುತ್ತುವರಿಯಲ್ಪಟ್ಟಿರುವ ಈ ವಾಚ್‌ನ ಬೆಲೆ ಸರಿಸುಮಾರು 87 ಲಕ್ಷ ರುಪಾಯಿಗಳು.

7. ಪಾಟಕ್ ಫಿಲಿಫ್ಫಿ ನೌಟಿಲ್ಸ್‌ 57121A: ಬೆಲೆ 1.14 ಕೋಟಿ

ಪಾಟಕ್ ಫಿಲಿಫ್ಫಿ ನೌಟಿಲ್ಸ್ ವಾಚ್‌ ಕೂಡಾ ವಿರಾಟ್ ಕೊಹ್ಲಿ ಬಳಿ ಇರುವ ದುಬಾರಿ ವಾಚ್‌ಗಳ ಪೈಕಿ ಒಂದು ಎನಿಸಿದೆ. ಈ ವಾಚ್‌ನ ಬೆಲೆ 1.14 ಕೋಟಿ ರುಪಾಯಿಗಳಾಗಿವೆ.

8. ರೊಲೆಕ್ಸ್ ಓಸ್ಟರ್ ಪೆರ್‌ಪೆಚುವಲ್ ಸ್ಕೈ-ಡ್ವೆಲ್ಲರ್: ಬೆಲೆ 1.8 ಕೋಟಿ ರುಪಾಯಿ.

ಕಿಂಗ್ ಕೊಹ್ಲಿ ಬಳಿಯಿರುವ ದುಬಾರಿ ವಾಚ್‌ಗಳ ಪೈಕಿ ರೊಲೆಕ್ಸ್ ಓಸ್ಟರ್ ಪರ್‌ಪೆಚುವಲ್ ವಾಚ್‌ ಕೂಡಾ ಒಂದೆನಿಸಿದೆ. ಈ ವಾಚ್‌ನ ಬೆಲೆ ಬರೋಬ್ಬರಿ 1.8 ಕೋಟಿ ರುಪಾಯಿಗಳಾಗಿವೆ.

9. ರೊಲೆಕ್ಸ್‌ ಡೆಟೊನಾ ವಿತ್ ವೈಟ್ ಡಯಲ್‌: ಬೆಲೆ 3.2 ಕೋಟಿ ರುಪಾಯಿ

ರೊಲೆಕ್ಸ್ ಡೆಟೋನಾ ವಿತ್ ವೈಟ್‌ ಡಯಲ್ ವಾಚ್‌, ವಿರಾಟ್ ಕೊಹ್ಲಿ ಕೈಗೊಪ್ಪುವ ವಾಚ್‌ಗಳಲ್ಲಿ ಒಂದು ಎನಿಸಿಕೊಂಡಿದೆ. ಈ ವಾಚ್‌ ವಿರಾಟ್ ಕೊಹ್ಲಿ ಬಳಿ ಇರುವ ಎರಡನೇ ದುಬಾರಿ ವಾಚ್ ಎನಿಸಿಕೊಂಡಿದೆ.

10. ರೊಲೆಕ್ಸ್‌ ಡೇ-ಡೇಟ್‌ ರೋಸ್‌ ಗೋಲ್ಡ್ ಓಲಿವ್ ಡಯಲ್‌: ಬೆಲೆ 57 ಲಕ್ಷ ರುಪಾಯಿ

ರೊಲೆಕ್ಸ್ ಡೇ-ಡೇಟ್‌ ರೋಸ್‌ ಗೋಲ್ಡ್ ಓಲಿವ್ ಡಯಲ್‌ ವಾಚ್‌, ವಿರಾಟ್ ಕೊಹ್ಲಿ ಬಳಿ ಇರುವ ಮತ್ತೊಂದು ಸುಂದರ ವಾಚ್ ಇದಾಗಿದೆ. ಈ ವಾಚ್‌ ಬೆಲೆ ಬರೋಬ್ಬರಿ 57 ಲಕ್ಷ ರುಪಾಯಿಗಳಾಗಿವೆ

Latest Videos

click me!