ಸೆಕ್ಸ್‌ ಹಗರಣದಲ್ಲಿ ಸಿಕ್ಕಿಬಿದ್ದ ಟಾಪ್ 5 ಸ್ಟಾರ್ ಕ್ರಿಕೆಟಿಗರು..! ಇವರೇನು ಸಾಮಾನ್ಯ ಕ್ರಿಕೆಟಿಗರಲ್ಲ..!

First Published Aug 2, 2023, 3:08 PM IST

ಬೆಂಗಳೂರು: ಕ್ರಿಕೆಟ್‌ ಆಟಗಾರರು ಉಳಿದ ಕ್ರೀಡಾಪಟುಗಳಿಗಿಂತ ವಿಭಿನ್ನ ರೀತಿ ಜೀವನ ಶೈಲಿ ಅಳವಡಿಸಿಕೊಂಡಿದ್ದಾರೆ. ಅದರಲ್ಲೂ ಐಪಿಎಲ್ ಪರಿಚಯವಾದ ಮೇಲಂತೂ ಆಟಗಾರರ ಮೇಲೆ ಹಣದ ಹೊಳೆಯೇ ಹರಿಯಲಾರಂಭಿಸಿದೆ. ಕ್ರಿಕೆಟ್‌ ಮೂಲಕ ರಾಜ್ಯ, ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶಗಿಟ್ಟಿಕೊಂಡ ಆಟಗಾರರು, ಪಾರ್ಟಿ-ಪಬ್‌ನಲ್ಲಿ ಮಿತಿಮೀರಿ ವರ್ತಿಸುವ ಘಟನೆಗಳು ಜಂಟಲ್‌ಮನ್ ಕ್ರೀಡೆ ಎನಿಸಿಕೊಂಡ ಕ್ರಿಕೆಟ್‌ಗೆ ಅಪವಾದ ಎನಿಸಿವೆ. ಈ ಸಂದರ್ಭದಲ್ಲಿ ಸೆಕ್ಸ್‌ ಸ್ಕ್ಯಾಂಡಲ್‌ನಲ್ಲಿ ಸಿಕ್ಕಿಬಿದ್ದ ಟಾಪ್ 5 ಆಟಗಾರರ ಮಾಹಿತಿಯನ್ನು ನಾವಿಂದು ಮುಂದಿಡುತ್ತಿದ್ದೇವೆ ನೋಡಿ.
 

1. ಧನುಷ್ಕಾ ಗುಣತಿಲಕ:

2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆಯಲ್ಲೇ ಶ್ರೀಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಅವರನ್ನು ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ ಸಿಡ್ನಿಯಲ್ಲಿ ಆರೆಸ್ಟ್‌ ಮಾಡಲಾಗಿತ್ತು. 

ಸಿಡ್ನಿಯ ರೋಸ್ ಬೇನಲ್ಲಿ ಗುಣತಿಲಕ ತಮ್ಮ ಮೇಲೆ 4 ಬಾರಿ ಲೈಂಗಿಕ ದೌರ್ಜನ್ಯ ಮಾಡಿದ್ದಾಗಿ ಮಹಿಳೆಯೊಬ್ಬರು ಆರೋಪಿಸಿದ್ದರು. ಲಂಕಾ ಕ್ರಿಕೆಟಿಗನ ಜತೆ ಡೇಟಿಂಗ್‌ಗೆ ಹೋಗಿದ್ದಾಗ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಇದಾದ ಬಳಿಕ ಗುಣತಿಲಕ ಅವರನ್ನು ಎಲ್ಲಾ ಮಾದರಿಯ ಲಂಕಾ ತಂಡದಿಂದ ಹೊರಹಾಕಲಾಗಿದೆ.

2. ಇಮಾಮ್ ಉಲ್‌ ಹಕ್‌:

ಪಾಕ್‌ ತಂಡಕ್ಕೆ ಆಯ್ಕೆಯಾಗಿದ್ದಾಗಲೇ ಸ್ವಜನಪಕ್ಷಪಾತದ ಆರೋಪ ಹೊತ್ತಿದ್ದ ಇಮಾಮ್ ಉಲ್‌ ಹಕ್‌, 2019ರಲ್ಲಿ ಹಲವು ಮಹಿಳೆಯರ ಜತೆ ಸೆಕ್ಸ್‌ ಚಾಟಿಂಗ್ ನಡೆಸಿರುವ ಸ್ಕ್ರೀನ್‌ಶಾಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಕೆಲವು ಪಾಕಿಸ್ತಾನ ಮಾಧ್ಯಮಗಳ ವರದಿಯ ಪ್ರಕಾರ, ಇಮಾಮ್ ಉಲ್‌ ಹಕ್ ಏಕಕಾಲದಲ್ಲಿ 7-8 ಮಹಿಳೆಯರ ಜತೆ ಸೆಕ್ಸ್‌ ಚಾಟ್‌ ನಡೆಸಿದ್ದರ ಕುರಿತಂತೆ ವಾಟ್‌ಅಪ್‌ ಚಾಟ್‌ಗಳು ವೈರಲ್ ಆಗಿದ್ದವು. ಇದಾದ ಬಳಿಕ ಇಮಾಮ್‌ ಉಲ್‌ ಹಕ್ ಅವರ ಮತ್ತೊಂದು ಮುಖ ಅನಾವರಣವಾಗಿತ್ತು.

3. ಸ್ಕಾಟ್‌ ಕಗ್ಗಲೇನ್‌:

2015ರ ಮೇ ತಿಂಗಳಿನಲ್ಲಿ ಸ್ಕಾಟ್ ಕಗ್ಗಲೇನ್‌, ಹ್ಯಾಮಿಲ್ಟನ್‌ನಲ್ಲಿ 21 ವರ್ಷದ ಯುವತಿಯ ಮೇಲೆ ಬಲತ್ಕಾರ ನಡೆಸಿದ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ 2015ರ ಜುಲೈನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲ್ ಪಡೆದುಕೊಂಡಿದ್ದರು. 
 

2017ರ ಫೆಬ್ರವರಿ 24ರಂದು ಅತ್ಯಾಚಾರ ಆರೋಪದ ವಿಚಾರಣೆ ನಡೆಸಿದ ಜ್ಯೂರಿ, ಯಾವುದೇ ಸಾಕ್ಷ್ಯಾಧಾರ ದೊರೆಯದ ಹಿನ್ನೆಲೆಯಲ್ಲಿ ಸ್ಕಾಟ್ ಕುಗ್ಗಲೇನ್ ಅವರನ್ನು ನಿರಪರಾಧಿ ಎಂದು ಘೋಷಿಸಿದರು.  

ಇನ್ನು ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಸ್ಕಾಟ್‌ ಕಗ್ಗಲೇನ್ ಅವರನ್ನು ಹರಾಜಿನಲ್ಲಿ ಖರೀದಿಸಿದಾಗ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ತಮ್ಮ ಮೇಲೆ ಆರೋಪ ಹೊರಿಸಿದ ಮಹಿಳೆಯ ಜತೆ ನಾನು ಸೆಕ್ಸ್‌ ಮಾಡಿದ್ದೇನೆ, ಆದರೆ ಅತ್ಯಾಚಾರ ಮಾಡಿಲ್ಲ ಎನ್ನುವ ವಿಚಾರವನ್ನು ಸ್ಕಾಟ್ ಕುಗ್ಗಲೇನ್ ಒಪ್ಪಿಕೊಂಡಿದ್ದಾರೆ.

4. ಮಕಾಯ ಎಂಟಿನಿ:

ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ದಕ್ಷಿಣ ಆಫ್ರಿಕಾದ ಮಾರಕ ವೇಗಿ ಮಕಾಯ್ ಎಂಟಿನಿ ಅವರನ್ನು 1998ರಲ್ಲಿ ಬಂಧಿಸಲಾಗಿತ್ತು. ಪೂರ್ವ ಲಂಡನ್‌ನ ಮಹಿಳೆಯ ಮೇಲೆ ಎಂಟಿನಿ ಅತ್ಯಾಚಾರ ಎಸಗಿದ ಆರೋಪದಡಿ ಆರೆಸ್ಟ್‌ ಮಾಡಲಾಗಿತ್ತು.
 

ಇದರ ಹೊರತಾಗಿಯೂ  ಸೂಕ್ತ ಸಾಕ್ಷ್ಯಾಧಾರ ಸಿಗದ ಹಿನ್ನಲೆಯಲ್ಲಿ 6 ವರ್ಷ ಬಂಧನಕ್ಕೊಳಗಾಗುವುದರಿಂದ ಎಂಟಿನಿ ಬಚಾವಾಗಿದ್ದರು. ಆದರೆ ಕೆಲವು ಸಮಯಗಳ ಕಾಲ ಎಂಟಿನಿ ಬಂಧನದಲ್ಲಿದ್ದರು. ಎಂಟಿನಿ ರಿಲೀಸ್ ಆದ ಬಳಿಕ ಕೋರ್ಟ್‌ ಹೊರಗೆ ಎಂಟಿನಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದರು.

5. ಟಿಮ್ ಪೈನ್‌:

ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿದ್ದ ಟಿಮ್ ಪೈನ್ ವಿರುದ್ದ ಟಾಸ್ಮೇನಿಯಾದ ಉದ್ಯೋಗಿ ರೆನಿ ಫರ್ಗ್ಯೂಸನ್ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದರು. ಟ್ಯಾಸ್ಮೇನಿಯಾ ಕ್ರಿಕೆಟ್‌ನ ಮಹಿಳಾ ಸಿಬ್ಬಂದಿಗೆ ಪೈನ್‌ ಅಶ್ಲೀಲ ಚಿತ್ರ ಹಾಗೂ ಸಂದೇಶ ಕಳುಹಿಸಿ ಸ್ಕ್ರೀನ್‌ ಶಾಟ್‌ಗಳು ಸಾಕಷ್ಟು ಸದ್ದು ಮಾಡಿತ್ತು. 

ಇನ್ನು ಇದರ ಬೆನ್ನಲ್ಲೇ ತಮ್ಮ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವ ಹುದ್ದೆಗೆ ಪೈನ್ ದಿಢೀರ್ ರಾಜೀನಾಮೆ ನೀಡಿದ್ದರು. 2017ರಲ್ಲಿ ಮಾಡಿದ್ದ ಅವಾಂತರಕ್ಕೆ ಪೈನ್ 2021ರಲ್ಲಿ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಇನ್ನು ವರ್ಷದ ಬಿಡುವಿನ ಬಳಿಕ ಪೈನ್ 2022ರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು.
 

click me!