ರೋಹಿತ್ ಶರ್ಮಾ-ಜಸ್ಪ್ರೀತ್ ಬುಮ್ರಾ: ಟೀಮ್‌ ಇಂಡಿಯಾದ ಆಟಗಾರರ ಲುಕ್‌ಅಲೈಕ್‌ ಇಲ್ಲಿದ್ದಾರೆ!

Suvarna News   | Asianet News
Published : Oct 04, 2021, 08:58 PM IST

ಪ್ರಪಂಚದಲ್ಲಿ ಒಬ್ಬರ ಹಾಗೇ ನೋ 7 ಜನರಿರುತ್ತಾರೆ ಎಂದು ಹೇಳಲಾಗುತ್ತದೆ. ಇತ್ತೀಚೆಗೆ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರನ್ನು ಹೋಲುವ ವ್ಯಕ್ತಿಯನ್ನು ಪಾಕಿಸ್ತಾನದಲ್ಲಿ ನೋಡಲಾಯಿತು.  ಈ ದಿನಗಳಲ್ಲಿ ಒಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ. ರೋಹಿತ್ ಶರ್ಮನಂತೆ ಕಾಣುವ ಈ ವ್ಯಕ್ತಿ ಪಾಕಿಸ್ತಾನದಲ್ಲಿ ತಪ್ರಿಯಲ್ಲಿ ಕುಳಿತು ಜ್ಯೂಸ್‌  ಕುಡಿಯುತ್ತಿದ್ದಾನೆ. ರೋಹಿತ್ ಮಾತ್ರವಲ್ಲ, ಭಾರತೀಯ ಕ್ರಿಕೆಟ್ ತಂಡದ ಅನೇಕ ಆಟಗಾರರ ಲುಕ್‌ಅಲೈಕ್‌ ವ್ಯಕ್ತಿಗಳು ಇದ್ದಾರೆ. ವಿರಾಟ್ ಕೊಹ್ಲಿಯಿಂದ ಜಸ್‌ಪ್ರೀತ್ ಬುಮ್ರಾ ವರೆಗೆ ಅನೇಕ ಕ್ರಿಕೆಟಿಗರನ್ನು ಹೋಲುವ ವ್ಯಕ್ತಿಗಳು ಇಲ್ಲಿ ಇದ್ದಾರೆ. 

PREV
17
ರೋಹಿತ್ ಶರ್ಮಾ-ಜಸ್ಪ್ರೀತ್ ಬುಮ್ರಾ: ಟೀಮ್‌ ಇಂಡಿಯಾದ  ಆಟಗಾರರ ಲುಕ್‌ಅಲೈಕ್‌ ಇಲ್ಲಿದ್ದಾರೆ!

ಟೀಮ್‌ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರಂತೆ ಕಾಣುವ ಈ ವ್ಯಕ್ತಿ ಪಾಕಿಸ್ತಾನದ ವ್ಯಕ್ತಿಯಾಗಿದ್ದಾರೆ. ಅವರು ತಮ್ಮ ಮುಖದ ಮೇಲೆ ಪಾಕಿಸ್ತಾನದ ಧ್ವಜದ ಚಿತ್ರವನ್ನು ಹಾಕಿಕೊಂಡಿರುವುದನ್ನು ಫೋಟೋದಲ್ಲಿ ಕಾಣಬಹುದು.

27

ಇತ್ತೀಚೆಗೆ, ರೋಹಿತ್ ಶರ್ಮಾ ಅವರನ್ನು ಹೋಲುವ ವ್ಯಕ್ತಿಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಮತ್ತು 'ಪಾಕಿಸ್ತಾನವು ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಸುರಕ್ಷಿತವಲ್ಲ ಎಂದು ಯಾರು ಹೇಳುತ್ತಾರೆ' ಈಗಷ್ಟೇ ಭಾರತದ ಸ್ಟಾರ್ ಆಟಗಾರ ರೋಹಿತ್ ಶರ್ಮಾ (Rohith Sharma) ಇತ್ತೀಚೆಗೆ ರಾವಲ್ಪಿಂಡಿಯ ಸದರ್ ನಲ್ಲಿ ಆಲೂ ಬುಖಾರ ಶರ್ಬತ್ ಅನ್ನು ಆನಂದಿಸುತ್ತಿದ್ದರು. ಈ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ' ಎಂದು ' ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ. 

37

ರೋಹಿತ್ ಶರ್ಮರ ಹೊರತಾಗಿ, ಆರ್‌ಸಿಬಿ (RCB) ನಾಯಕ ವಿರಾಟ್ ಕೊಹ್ಲಿಯನ್ನು ಹೋಲುವ ವ್ಯಕ್ತಿ ಸಹ  ಪಾಕಿಸ್ತಾನದಲ್ಲಿ ಇದ್ದಾರೆ. ವಾಸ್ತವವಾಗಿ, ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಅವರ ಮುಖವು ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿಯ ಮುಖವನ್ನು ಹೋಲುತ್ತದೆ. ಕೊಹ್ಲಿಯಂತೆ ಕಾಣುವ ಇನ್ನೊಬ್ಬ ವ್ಯಕ್ತಿ ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್‌ ಆಗಿದ್ದಾರೆ.  ವಿರಾಟ್ ಕೊಹ್ಲಿಯಂತೆ ಕಾಣುವ ವ್ಯಕ್ತಿ ಸ್ಟೇಡಿಯಂನಲ್ಲಿ ಅವರಿಗೆ ಚಿಯರ್‌ ಮಾಡುವುದು ಕಂಡುಬರುತ್ತದೆ. 

47

ಇದು ಭಾರತೀಯ ತಂಡದ ಗಬ್ಬರ್ ಶಿಖರ್ ಧವನ್ ಅವರ ನಕಲಿ. ಇವರ ಫೋಟೋಗಳು  ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಧವನ್ ಅವರ ಈ ಲುಕ್‌ಅಲೈಕ್‌  ಕನ್ನಡ ಚಿತ್ರಗಳಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಾರೆ.

57

ಭಾರತೀಯ ತಂಡದ ಮಾಜಿ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ ಅವರ ಲುಕ್‌ಅಲೈಕ್‌ ಇಲ್ಲಿದ್ದಾರೆ. ಅವರ ಹೆಸರು ಜೀವನ್ ಶರ್ಮಾ ಮತ್ತು  ಮಹಾರಾಷ್ಟ್ರ ಮೂಲದವರು, ಅವರ ಮುಖವು ವೀರೇಂದ್ರ ಸೆಹ್ವಾಗ್‌ನಂತಿದೆ.

 

67

ಸಚಿನ್ ತೆಂಡೂಲ್ಕರ್, 'ಗಾಡ್‌ ಆಫ್ ಕ್ರಿಕೆಟ್' ಎಂದು ಕರೆಯಲ್ಪಡುತ್ತಾರೆ.ಅ ವರು  ತಮ್ಮ ಲುಕ್‌ಅಲೈಕ್‌ ಬಲಬೀರ್ ಸಿಂಗ್ ಜೊತೆಗೆ ಜಾಹೀರಾತನ್ನು ಚಿತ್ರೀಕರಿಸಿದ್ದಾರೆ. ಸಚ್ಚಿನ್‌ ಅವರನ್ನು ಹೋಲುವ ವ್ಯಕ್ತಿಯನ್ನಯ ಟಿವಿಯಲ್ಲಿ ಹಲವು ಬಾರಿ ನೋಡಲಾಗಿದೆ.

77

ಐಪಿಎಲ್‌ನಲ್ಲಿ ವಿದೇಶಿ ಆಟಗಾರರ ತುಂಬಾ ಜನಪ್ರಿಯತೆಗಳಿಸಿದ್ದಾರೆ. ಅವರಲ್ಲಿ ಒಬ್ಬರು ಶ್ರೀಲಂಕಾದ ಲೆಜೆಂಡ್‌ ಲಸಿತ್ ಮಾಲಿಂಗ, ಅವರು ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದರು. ಆದರೆ, ಈಗ ಅವರು ನಿವೃತ್ತಿಯನ್ನು ತೆಗೆದುಕೊಂಡಿದ್ದಾರೆ.   ಈ ಫೋಟೋದಲ್ಲಿ ಅವರ  ಲುಕ್‌ಅಲೈಕ್‌  ಅನ್ನು ನೋಡಬಹುದು.

click me!

Recommended Stories