ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋತರೇ ರೋಹಿತ್ ಶರ್ಮಾ ಟೆಸ್ಟ್‌ ಕ್ರಿಕೆಟ್ ವೃತ್ತಿಬದುಕು ಅಂತ್ಯ!

First Published | Nov 5, 2024, 3:49 PM IST

ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಸರ್ಮಾ ಸರಿಯಾಗಿ ಆಡಿಲ್ಲ. ಆಸೀಸ್ ವಿರುದ್ಧದ ಟೆಸ್ಟ್ ಸರಣಿಯನ್ನೂ ಸೋತರೆ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಹೊಂದಬಹುದು ಎಂದು ಮಾಜಿ ದಿಗ್ಗಜ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.

ರೋಹಿತ್ ಟೆಸ್ಟ್ ಕ್ರಿಕೆಟ್ ನಿವೃತ್ತಿ

ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆಸೀಸ್ ಪ್ರವಾಸದಲ್ಲೂ ಟೀಂ ಇಂಡಿಯಾ ಸೋತರೆ ರೋಹಿತ್ ಶರ್ಮಾರನ್ನು ಟೆಸ್ಟ್‌ ತಂಡದಿಂದ ಹೊರ ಹಾಕಬಹುದು ಎಂದು ವರದಿಯಾಗಿದೆ.

ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್, 'ರೋಹಿತ್ ಆಸೀಸ್ ಪ್ರವಾಸದಲ್ಲಿ ಸರಿಯಾಗಿ ಆಡದಿದ್ದರೆ, ಟೆಸ್ಟ್​ನಿಂದ ನಿವೃತ್ತಿ ಪಡೆಯಬಹುದು. ಈಗಾಗಲೇ ಟಿ20ಯಿಂದ ನಿವೃತ್ತಿ ಪಡೆದಿದ್ದಾರೆ. ಟೆಸ್ಟ್​ನಿಂದಲೂ ನಿವೃತ್ತಿ ಪಡೆಯಬಹುದು. ಹೀಗಾದಲ್ಲಿ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡ್ತಾರೆ' ಎಂದಿದ್ದಾರೆ.

Tap to resize

'ರೋಹಿತ್ ಆಸೀಸ್ ಪ್ರವಾಸದಲ್ಲಿ ಸರಿಯಾಗಿ ಆಡದಿದ್ದರೆ, ಭವಿಷ್ಯದ ಬಗ್ಗೆ ಯೋಚಿಸಬೇಕು. ಅವರ ವಯಸ್ಸನ್ನೂ ಪರಿಗಣಿಸಬೇಕು' ಎಂದಿದ್ದಾರೆ. ಶ್ರೀಕಾಂತ್ ಮಾತು ನಿಜವಾದರೆ, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಆಡ್ತಾರಾ ಅನ್ನೋದು ಅನುಮಾನ.

ರೋಹಿತ್​ರನ್ನು ಹೊಗಳಿದ ಶ್ರೀಕಾಂತ್, 'ರೋಹಿತ್ ಈ ಸರಣಿಯಲ್ಲಿ ಕಳಪೆ ಆಟ ಮತ್ತು ನಾಯಕತ್ವ ತೋರಿದ್ದನ್ನು ಒಪ್ಪಿಕೊಂಡಿದ್ದಾರೆ. ಇದು ಒಳ್ಳೆಯದು. ಫಾರ್ಮ್​ಗೆ ಮರಳಲು ಮೊದಲು ತಪ್ಪುಗಳನ್ನು ಒಪ್ಪಿಕೊಳ್ಳಬೇಕು. ರೋಹಿತ್ ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ' ಎಂದರು.

ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯ 6 ಇನ್ನಿಂಗ್ಸ್​ಗಳಲ್ಲಿ ರೋಹಿತ್ ಕೇವಲ 91 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಶ್ರೀಕಾಂತ್

ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯ 6 ಇನ್ನಿಂಗ್ಸ್​ಗಳಲ್ಲಿ ವಿರಾಟ್ ಕೊಹ್ಲಿ ಕೇವಲ 93 ರನ್ ಗಳಿಸಿದ್ದಾರೆ. ಬೆಂಗಳೂರು ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ 70 ರನ್ ಗಳಿಸಿದ್ದರು. ಟೆಸ್ಟ್ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಎಡಗೈ ಸ್ಪಿನ್ನರ್​ಗಳಿಗೆ ವಿರುದ್ಧವಾಗಿ ಅವರು ಕಷ್ಟಪಡುತ್ತಿದ್ದಾರೆ. ಕೊನೆಯ 10 ಟೆಸ್ಟ್ ಇನ್ನಿಂಗ್ಸ್​ಗಳಲ್ಲಿ ವಿರಾಟ್ ಕೇವಲ 192 ರನ್ ಗಳಿಸಿದ್ದಾರೆ. ಆಸೀಸ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ, ರೋಹಿತ್ ಶರ್ಮಾರಂತೆ ವಿರಾಟ್ ಕೊಹ್ಲಿಯನ್ನೂ ಟೆಸ್ಟ್ ತಂಡದಿಂದ ಕೈಬಿಡಬಹುದು ಎಂದು ವರದಿಯಾಗಿದೆ.

ವಿರಾಟ್ ಕೊಹ್ಲಿ ಮತ್ತು ಶ್ರೀಕಾಂತ್

ಶ್ರೀಕಾಂತ್, 'ಆಸೀಸ್ ಪ್ರವಾಸದಲ್ಲಿ ವಿರಾಟ್ ಉತ್ತಮ ಪ್ರದರ್ಶನ ನೀಡ್ತಾರೆ ಅಂತ ನಾನು ಭಾವಿಸುತ್ತೇನೆ. ಅವರು ಆಸೀಸ್​ನಲ್ಲಿ ಚೆನ್ನಾಗಿ ಆಡ್ತಾರೆ. ಅವರು ವೇಗದ ಬೌಲರ್​ಗಳನ್ನು ಚೆನ್ನಾಗಿ ಎದುರಿಸುತ್ತಾರೆ. ಅವರ ಭವಿಷ್ಯದ ಬಗ್ಗೆ ನಾನು ಈಗ ಏನನ್ನೂ ಹೇಳಲು ಬಯಸುವುದಿಲ್ಲ' ಎಂದರು.

Latest Videos

click me!