2023 ರ ವಿಶ್ವಕಪ್ ಸೋಲು:
ಭಾರತದಲ್ಲಿ ನಡೆದ 2023 ರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಸೋಲು ಕಂಡ ಬಗ್ಗೆ ಮಾತನಾಡಿದ ದಿನೇಶ್ ಲಾಡ್, ಸೋಲಿನಿಂದ ಕುಗ್ಗಿದ ರೋಹಿತ್ ಶರ್ಮಾ ಭಾವುಕರಾಗಿದ್ದರು. ಯಾವಾಗಲೂ ಭಾರತಕ್ಕಾಗಿ ಆಡಬೇಕೆಂಬ ಆಸೆ ಅವರದ್ದು. ಇಂದು ಮಾತ್ರವಲ್ಲ, ಭವಿಷ್ಯದಲ್ಲೂ ಭಾರತಕ್ಕಾಗಿ ಆಡಬೇಕೆಂಬ ಆಸೆ ಅವರಿಗಿದೆ.
ಗೆಲುವು, ಸೋಲುಗಳು ಸಾಮಾನ್ಯ. ಆದರೆ, ಎಲ್ಲಾ ಪಂದ್ಯಗಳಲ್ಲೂ ಭಾರತ ತಂಡ ಗೆದ್ದಿತು. ಆ ಟೂರ್ನಿಯಲ್ಲಿ ರೋಹಿತ್ ಶರ್ಮಾ ಚೆನ್ನಾಗಿಯೇ ಆಡಿದ್ದರು. ಇದನ್ನು ನೀವೆಲ್ಲರೂ ನೋಡಿರುತ್ತೀರಿ. ಆದರೆ, ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ 47 ರನ್ ಗಳಿಸಿ ಔಟಾದರು. ಅವರು ಇನ್ನೂ ಸ್ವಲ್ಪ ಹೊತ್ತು ನಿಂತು ಆಡಿದ್ದರೆ ಭಾರತ ಟ್ರೋಫಿ ಗೆದ್ದಿರುತ್ತಿತ್ತು ಎಂದು ಅವರು ಹೇಳಿದ್ದಾರೆ