ಟೀಂ ಇಂಡಿಯಾದ ಯುವ ಬೌಲಿಂಗ್ ಸ್ಪೀಡ್ ಗನ್ ಮಯಾಂಕ್ ಯಾದವ್
ಪವರ್‌ಪ್ಲೇಯ ಕೊನೆಯ ಓವರ್ (ಆರನೇ ಓವರ್)ನಲ್ಲಿ ಮಯಾಂಕ್ ಯಾದವ್ ಅವರನ್ನು ಬೌಲಿಂಗ್ ಮಾಡಲು ನಾಯಕ ಸೂರ್ಯಕುಮಾರ್ ಯಾದವ್ ನೀಡಿದರು. ಅದಕ್ಕೂ ಮೊದಲು ಅರ್ಷದೀಪ್ ಸಿಂಗ್ ಎರಡು ವಿಕೆಟ್ ಪಡೆದು ಬಾಂಗ್ಲಾದೇಶಕ್ಕೆ ದೊಡ್ಡ ಆಘಾತ ನೀಡಿ ಆ ತಂಡದ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದ್ದರು. ಮಯಾಂಕ್ ಬೌಲಿಂಗ್ ಮಾಡಲು ಬಂದಾಗ ಎಲ್ಲರ ಕಣ್ಣು ಅವರ ವೇಗದ ಮೇಲೆಯೇ ಇತ್ತು. ಅವರು ನಿರಾಸೆಗೊಳಿಸದೆ ಸೂಪರ್ ಬೌಲಿಂಗ್‌ನೊಂದಿಗೆ ಮಿಂಚಿದರು. ಮೊದಲ ಓವರ್‌ನಲ್ಲಿ ಗಂಟೆಗೆ 145 ಕಿ.ಮೀ ವೇಗವನ್ನು ಎರಡು ಬಾರಿ ದಾಟಿದರು. ಅವರ ವೇಗದ ಎಸೆತ ಗಂಟೆಗೆ 147.6 ಕಿ.ಮೀ. ವೇಗದಲ್ಲಿ ದಾಖಲಾಯಿತು.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಓವರ್‌ನಲ್ಲಿ ಮಯಾಂಕ್ ಯಾದವ್ ಬೌಲಿಂಗ್ ವೇಗ
ಮೊದಲ ಎಸೆತ - 141.9 kph
ಎರಡನೇ ಎಸೆತ - 145.1 kph (ವಿಕೆಟ್)
ಮೂರನೇ ಎಸೆತ - 138.0 kph
ನಾಲ್ಕನೇ ಎಸೆತ - 147.3 kph
ಐದನೇ ಎಸೆತ - 135.2 kph
ಆರನೇ ಎಸೆತ - 147.6 kph