ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸಿರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾಗೆ ಐಸಿಸಿ ಸಪ್ರೈಸ್ ಗಿಫ್ಟ್ ನೀಡಿದೆ. ಏನದು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಭಾರತೀಯ ಕ್ರಿಕೆಟ್‌ನ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ, 2026ರ ಟಿ20 ವಿಶ್ವಕಪ್‌ಗೆ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ 2024ರ ವಿಶ್ವಕಪ್ ಗೆದ್ದಿತ್ತು. ಈಗ ಟೂರ್ನಿ ಭಾರತ-ಶ್ರೀಲಂಕಾದಲ್ಲಿ ನಡೆಯಲಿದೆ.
25
ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿರುವ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 4,231 ರನ್ ಗಳಿಸಿದ್ದಾರೆ. ಅವರ ಸರಾಸರಿ 32.01 ಮತ್ತು ಸ್ಟ್ರೈಕ್ ರೇಟ್ 140.89. ಅವರು ಎರಡು ಟಿ20 ವಿಶ್ವಕಪ್ ವಿಜೇತ ತಂಡಗಳ ಭಾಗವಾಗಿದ್ದರು.
35
ಚೊಚ್ಚಲ ವಿಶ್ವಕಪ್‌ನಿಂದ 2024ರ ವರೆಗೆ ರೋಹಿತ್ ಪಯಣ
2007ರ ವಿಶ್ವಕಪ್‌ನಲ್ಲಿ ಪಾದಾರ್ಪಣೆ ಮಾಡಿದ ರೋಹಿತ್, 2024ರಲ್ಲಿ ನಾಯಕನಾಗಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟರು. ಆಸ್ಟ್ರೇಲಿಯಾ ವಿರುದ್ಧ 92 ಮತ್ತು ಇಂಗ್ಲೆಂಡ್ ವಿರುದ್ಧ 57 ರನ್ ಗಳಿಸಿ ಮಿಂಚಿದ್ದರು. ನಂತರ ಟಿ20ಗೆ ನಿವೃತ್ತಿ ಘೋಷಿಸಿದರು.
ರಾಯಭಾರಿಯಾಗಿ ಆಯ್ಕೆಯಾದ ಬಗ್ಗೆ ರೋಹಿತ್ ಶರ್ಮಾ, "ಈ ಟೂರ್ನಿ ಮತ್ತೆ ಭಾರತದಲ್ಲಿ ನಡೆಯುತ್ತಿರುವುದು ಖುಷಿ ತಂದಿದೆ. ರಾಯಭಾರಿಯಾಗಿರುವುದು ವಿಶೇಷ ಅನುಭವ. ಎಲ್ಲಾ ತಂಡಗಳಿಗೂ ನನ್ನ ಶುಭಾಶಯಗಳು" ಎಂದು ಹೇಳಿದರು.
55
ಮುಂಬರುವ ಫೆಬ್ರವರಿ 07ರಿಂದ ಟೂರ್ನಿ ಆರಂಭ
2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಈ ಬಾರಿ ಹೊಸ ಮೈದಾನಗಳು ಮತ್ತು ತಂತ್ರಜ್ಞಾನದೊಂದಿಗೆ ಐಸಿಸಿ ಭಾರಿ ಸಿದ್ಧತೆ ನಡೆಸುತ್ತಿದೆ.