ಬೆಂಗಳೂರು: ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಪಾಲಿಗೆ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವು ಮರಿಚಿಕೆಯಾಗಿದೆ. ಇದೀಗ ಅಜಿಂಕ್ಯ ರಹಾನೆ ಪಡೆ ಟೂರ್ನಿಯಲ್ಲಿ ಮತ್ತೊಂದು ಸೋಲು ಕಂಡಿದೆ. ಈ ರೀತಿ ಸೋಲಲು ಆ ಒಬ್ಬ ಆಟಗಾರ ನೇರ ಕಾರಣ. ಯಾರದು ನೋಡೋಣ ಬನ್ನಿ.
2026ರ ಐಪಿಎಲ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಸತತ ಸೋಲುಗಳನ್ನು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದೆ. ಆಡಿದ ಆರು ಪಂದ್ಯಗಳ ಪೈಕಿ ಐದು ಪಂದ್ಯ ಸೋತಿದ್ದರೇ, ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿತ್ತು.
26
ಉಳಿದ ಎಲ್ಲಾ ಪಂದ್ಯ ಗೆಲ್ಲಬೇಕಾದ ಒತ್ತಡದಲ್ಲಿ ಕೆಕೆಆರ್
ಹೀಗಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಖಾತೆಯಲ್ಲಿ ಕೇವಲ ಒಂದು ಅಂಕವಿದ್ದು, ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಇನ್ನು ಕೆಕೆಆರ್ ತಂಡವು ಪ್ಲೇ ಆಫ್ ಪ್ರವೇಶಿಸಬೇಕಿದ್ದರೇ ತನ್ನ ಪಾಲಿನ ಎಂಟೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
36
ಕೆಕೆಆರ್ ವೈಫಲ್ಯಕ್ಕೆ ರಹಾನೆ ಮಾತ್ರ ಕಾರಣವಲ್ಲ
ಎರಡು ವರ್ಷಗಳ ಹಿಂದಷ್ಟೇ ಚಾಂಪಿಯನ್ ಆಗಿ ಬೀಗಿದ್ದ ಕೆಕೆಆರ್ ತಂಡವು ಕಳೆದೆರಡು ಸೀಸನ್‌ಗಳಲ್ಲಿ ದಯನೀಯ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದಲ್ಲೇ ತನ್ನ ಅಭಿಯಾನ ಮುಗಿಸುತ್ತಿದೆ. ಇದಕ್ಕೆ ಕಾರಣ ಕೇವಲ ನಾಯಕ ಅಜಿಂಕ್ಯ ರಹಾನೆ ಮಾತ್ರವಲ್ಲ ಬದಲಾಗಿ ತಂಡದ ಅತ್ಯಂತ ನಂಬಿಗಸ್ಥ ಆಟಗಾರ ಎನಿಸಿಕೊಂಡಿದ್ದ ರಿಂಕು ಸಿಂಗ್ ಕಾರಣ. ಇದು ಅಚ್ಚರಿಯೆನಿಸಿದ್ರೂ ಸತ್ಯ.
ಈ ಸೀಸನ್ ಐಪಿಎಲ್‌ನ ಆರು ಪಂದ್ಯಗಳ ಐದು ಇನ್ನಿಂಗ್ಸ್‌ಗಳಿಂದ ರಿಂಕು ಸಿಂಗ್ ಕೇವಲ 79 ರನ್ ಬಾರಿಸಿದ್ದಾರೆ. ಅದರಲ್ಲೂ ಕಳೆದ ಮೂರು ಪಂದ್ಯಗಳಲ್ಲಿ ರಿಂಕು ಕೇವಲ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ. ಎಲ್ಲಿ ತಂಡ ವೇಗವಾಗಿ ರನ್ ಗಳಿಸಬೇಕಿತ್ತೋ ಅಲ್ಲೇ ರಿಂಕು ಪದೇ ಪದೇ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುತ್ತಿರುವುದು ಕೆಕೆಆರ್ ಪಾಲಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
56
ಇದುವರೆಗೂ ಕೇವಲ 79 ರನ್ ಬಾರಿಸಿರುವ ರಿಂಕು
ಐಪಿಎಲ್ 2026ರಲ್ಲಿ ರಿಂಕು ಸಿಂಗ್ ಫಾರ್ಮ್ ಅತ್ಯಂತ ಕಳಪೆಯಾಗಿದೆ. ಕಳೆದ ಆರು ಪಂದ್ಯಗಳಲ್ಲಿ ಅವರು ಗಳಿಸಿದ ರನ್‌ಗಳು ಕ್ರಮವಾಗಿ 33*, 35, 4, 6, 1. ಈ ಸೀಸನ್‌ನಲ್ಲಿ ಇಲ್ಲಿಯವರೆಗೆ ಆಡಿದ 6 ಪಂದ್ಯಗಳಲ್ಲಿ ಕೇವಲ 19.75 ಸರಾಸರಿಯಲ್ಲಿ 79 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಕೇವಲ 35 ರನ್ ಮಾತ್ರ ಎಂಬುದು ಗಮನಾರ್ಹ.
66
ಮತ್ತೆ ನಿರಾಸೆ ಮೂಡಿಸಿದ ರಿಂಕು ಸಿಂಗ್
ಕೆಕೆಆರ್ ತಂಡದಲ್ಲಿ ಫಿನಿಶರ್ ಆಗಿ ದೊಡ್ಡ ನಿರೀಕ್ಷೆಗಳೊಂದಿಗೆ ಕಣಕ್ಕಿಳಿದ ರಿಂಕು ಸಿಂಗ್, ಈ ಪಂದ್ಯದಲ್ಲಿ ಮತ್ತೊಮ್ಮೆ ತೀವ್ರ ನಿರಾಸೆ ಮೂಡಿಸಿದರು. ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ಅವರು, ಕೇವಲ 2 ಎಸೆತಗಳನ್ನು ಎದುರಿಸಿ 1 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. 14.5 ಓವರ್‌ಗಳಲ್ಲಿ ಕೆಕೆಆರ್ ಸ್ಕೋರ್ 147/5 ಆಗಿದ್ದಾಗ ರಿಂಕು ಸಿಂಗ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಕ್ರೀಸ್‌ನಲ್ಲಿದ್ದ ಕ್ಯಾಮರೂನ್ ಗ್ರೀನ್ ಜೊತೆ ಉತ್ತಮ ಜೊತೆಯಾಟ ನಿರೀಕ್ಷಿಸಲಾಗಿತ್ತು. ಆದರೆ ಕಗಿಸೊ ರಬಾಡ ಎಸೆತದಲ್ಲಿ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿ ಔಟಾದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.