ಏಷ್ಯಾಕಪ್ ಬಳಿಕ ಎರಡನೇ ಸಲ ಮದುವೆಗೆ ಮುಂದಾದ ಶಾಹೀನ್ ಅಫ್ರಿದಿ..! ಯಾಕೆ ಹೀಗೆ?

First Published | Sep 9, 2023, 3:25 PM IST

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಎಡಗೈ ಮಾರಕ ವೇಗಿ ಶಾಹೀನ್ ಶಾ ಅಫ್ರಿದಿ ಇದೀಗ ಮತ್ತೊಮ್ಮೆ ವಿವಾಹವಾಗಲು ರೆಡಿಯಾಗಿದ್ದಾರೆ. ಈಗಾಗಲೇ ಕೆಲ ತಿಂಗಳ ಹಿಂದಷ್ಟೇ ಒಂಟಿ ಜೀವನದಿಂದ ಜಂಟಿ ಜೀವನಕ್ಕೆ ಕಾಲಿಟ್ಟ ಅಫ್ರಿದಿ, ಇದೀಗ ಮತ್ತೊಮ್ಮೆ ಮದುವೆಯಾಗಲು ಕಾರಣವೇನು ಎಂದು ನಾವಿಂದು ನೋಡೋಣ ಬನ್ನಿ.
 

ಪಾಕಿಸ್ತಾನದ ಸ್ಟಾರ್ ವೇಗಿ ಶಾಹೀನ್ ಶಾ ಅಫ್ರಿದಿ, ಈಗಾಗಲೇ ತಮ್ಮ ಹೊಸ ಇನಿಂಗ್ಸ್‌ ಆರಂಭಿಸಿದ್ದು, ಕ್ರಿಕೆಟ್ ದಂತಕಥೆ ಶಾಹಿದ್ ಅಫ್ರಿದಿ ಪುತ್ರಿ ಅನ್ಷಾ ಅಫ್ರಿದಿ ಜತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು ಬಹುತೇಕರಿಗೆ ಗೊತ್ತೇ ಇದೆ.

ಇದೀಗ ಶಾಹೀನ್ ಅಫ್ರಿದಿ ಹಾಗೂ ಅನ್ಷಾ ಅಫ್ರಿದಿ ಮತ್ತೊಮ್ಮೆ ಮದುವೆಯಾಗುತ್ತಿದ್ದಾರೆ. ಇದನ್ನು ಕೇಳುವುದಕ್ಕೆ ವಿಚಿತ್ರ ಎನಿಸಿದ್ದರೂ ಸತ್ಯ. ಈ ವಿಚಾರ ಕೇಳಿ ನೀವು ಗೊಂದಲಕ್ಕೊಳಗಾಬೇಡಿ.

Tap to resize

ಈ ಮೊದಲು ಶಾಹೀನ್ ಅಫ್ರಿದಿ ಹಾಗೂ ಅನ್ಷಾ ಅಫ್ರಿದಿ ಕಳೆದ ಫೆಬ್ರವರಿ 03ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ತುಂಬಾ ಶಾಸ್ತ್ರೋಕ್ತವಾಗಿ ನಡೆದ ಈ ಖಾಸಗಿ ಮದುವೆ ಸಮಾರಂಭದಲ್ಲಿ ಕೇವಲ ಕುಟುಂಬಸ್ಥರಷ್ಟೇ ಪಾಲ್ಗೊಂಡು ಶುಭ ಹಾರೈಸಿದ್ದರು.

ಈ ಸಂಬಂಧ ಕೆಲವು ಮದುವೆಯ ಫೋಟೋಗಳು ವೈರಲ್ ಆಗಿದ್ದವು. ಆಗ ಸ್ವತಃ ಶಾಹೀನ್ ಅಫ್ರಿದಿ, ತಮ್ಮ ವಿವಾಹದ ಕೆಲ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ತಮ್ಮ ಖಾಸಗಿತನವನ್ನು ದಯವಿಟ್ಟು ಗೌರವಿಸಿ ಎಂದು ಮನವಿ ಮಾಡಿಕೊಂಡಿದ್ದರು.
 

ಇದೀಗ ಏಷ್ಯಾಕಪ್ ಟೂರ್ನಿ ಮುಗಿದು ಎರಡು ದಿನಕ್ಕೆ ಅಂದರೆ ನವೆಂಬರ್ 19ರಂದು ಶಾಹೀನ್ ಅಫ್ರಿದಿ ಹಾಗೂ ಅನ್ಷಾ ಅಫ್ರಿದಿ ಮತ್ತೊಮ್ಮೆ ಅದ್ದೂರಿಯಾಗಿ ಮದುವೆಯಾಗುವ ಮೂಲಕ ಜಗತ್ತಿನ ಮುಂದೆ ತಮ್ಮ ಲವ್ ಸ್ಟೋರಿ ಅನಾವರಣ ಮಾಡಲು ಮುಂದಾಗಿದ್ದಾರೆ.
 

ಇನ್ನು ಇದಾಗಿ ಎರಡು ದಿನದ ಬಳಿಕ ಅಂದರೆ ನವೆಂಬರ್ 21ರಂದು ಈ ಜೋಡಿ ಅದ್ಧೂರಿ ಆರತಕ್ಷತೆ ಕಾರ್ಯವನ್ನು ಆಯೋಜಿಸಿದೆ. ಕುಟುಂಬಸ್ಥರಿಗೆ, ಸ್ನೇಹಿತರಿಗೆ, ಬಂಧು-ಬಾಂಧವರಿಗೆ ಅದ್ದೂರಿ ಡಿನ್ನರ್‌ ಪಾರ್ಟಿಯನ್ನೂ ಸಹಾ ಆಯೋಜಿಸಲಾಗಿದೆ.

ಶಾಹೀನ್ ಅಫ್ರಿದಿ ಹಾಗೂ ಅನ್ಷಾ ಅಫ್ರಿದಿ ಎರಡನೇ ಬಾರಿಗೆ ಮದುವೆಯಾಗಲೂ ಪ್ರಮುಖ ಕಾರಣವೇನೆಂದರೆ ತಮ್ಮ ಪ್ರೀತಿಯನ್ನು ಜಗತ್ತಿನ ಮುಂದೆ ಬಹಿರಂಗವಾಗಿ ಸೆಲಿಬ್ರೇಟ್ ಮಾಡಬೇಕು ಎನ್ನುವುದೇ ಆಗಿದೆ.

23 ವರ್ಷದ ಶಾಹೀನ್ ಅಫ್ರಿದಿ, ಈಗಾಗಲೇ ವಿಶ್ವ ಕ್ರಿಕೆಟ್‌ನ ಮಾರಕ ವೇಗಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಶಾಹೀನ್ ಅಫ್ರಿದಿ, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ತಮ್ಮ ಚಿತ್ತ ನೆಟ್ಟಿದ್ದಾರೆ.

Latest Videos

click me!