ಈ ಪಾಕಿಸ್ತಾನ ವೇಗಿ ಪತ್ನಿ ಬ್ಯೂಟಿಫುಲ್ ಮಾಡೆಲ್‌..! ಪಾಕ್‌ ಕ್ರಿಕೆಟಿಗನ ಮನಗೆದ್ದ ಗೊಂಬೆಯಂತ ಟಿಕ್‌ಟಾಕ್‌ ಚೆಲುವೆ

First Published | Sep 8, 2023, 5:39 PM IST

ಬೆಂಗಳೂರು: ಪಾಕಿಸ್ತಾನ ತಂಡವು ಒಂದು ರೀತಿ ವೇಗದ ಬೌಲರ್‌ಗಳನ್ನು ಸೃಷ್ಟಿ ಮಾಡುವ ಕಾರ್ಖಾನೆ ಎಂದರೆ ಅತಿಶಯೋಕ್ತಿಯಲ್ಲ. ಯಾಕೆಂದರೆ ಪಾಕ್ ತಂಡದಲ್ಲಿ ಪ್ರಚಂಡ ವೇಗಿಗಳ ದಂಡನ್ನು ನಾವು ನೋಡುತ್ತಲೇ ಬಂದಿದ್ದೇವೆ. ಇನ್ನು ಸದ್ಯ ಏಷ್ಯಾಕಪ್‌ ಟೂರ್ನಿಯಲ್ಲಿ ಮಾರಕ ದಾಳಿ ನಡೆಸುತ್ತಿರುವ ಪಾಕಿಸ್ತಾನದ ಮಾರಕ ವೇಗಿಯ ಪತ್ನಿಯ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಯನ್ನು ನಾವಿಂದು ನೋಡೋಣ ಬನ್ನಿ.
 

ಹ್ಯಾರಿಸ್ ರೌಫ್, ಪಾಕಿಸ್ತಾನದ ಮಾರಕ ವೇಗಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಸಕ್ತ 2023ರ ಏಷ್ಯಾಕಪ್ ಟೂರ್ನಿಯ ಗುಂಪು ಹಂತ ಮುಕ್ತಾಯದ ವೇಳೆಗೆ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ

ಇತ್ತೀಚೆಗಷ್ಟೇ ಹ್ಯಾರಿಸ್ ರೌಫ್, ಹೊಸ ಜೀವನವನ್ನು ಆರಂಭಿಸಿದ್ದು, ಬಾಲ್ಯದ ಗೆಳತಿ ಮುಜ್ನಾ ಮಸೂದ್ ಮಲಿಕ್ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಮುದ್ದಾದ ಜೋಡಿಗೆ ಎಲ್ಲರೂ ಶುಭ ಹಾರೈಸಿದ್ದರು. 

Tap to resize

ಬಲಗೈ ವೇಗಿ ಹ್ಯಾರಿಸ್ ರೌಫ್ ಪತ್ನಿ ಮುಜ್ನಾ ಮಸೂದ್ ಮಲಿಕ್ ಅವರು ಯಾರು? ಆಕೆಯ ಹಿನ್ನೆಲೆ ಏನು ಎಂದು ಹಲವು ಮಂದಿ ಅವರ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಹಲವು ಇಂಟ್ರೆಸ್ಟಿಂಗ್ ಸಂಗತಿಗಳು ಸಿಕ್ಕಿವೆ.
 

ಹೌದು, ಮುಜ್ನಾ ಮಸೂದ್ ಮಲಿಕ್ ಪಾಕಿಸ್ತಾನದ ಓರ್ವ ಬ್ಯೂಟಿಫುಲ್ ಮಾಡೆಲ್ ಆಗಿದ್ದು, ಟಿಕ್‌ಟಾಕ್ ಸ್ಟಾರ್ ಕೂಡಾ ಹೌದು. ಹ್ಯಾರಿಸ್ ರೌಫ್ ಹಾಗೂ ಮುಜ್ನಾ ಮಸೂದ್ ಮಲಿಕ್ ಹಲವು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು.

ಇನ್ನೂ ಇಂಟ್ರೆಸ್ಟಿಂಗ್ ಸಂಗತಿಯೆಂದರೆ ಹ್ಯಾರಿಸ್ ರೌಫ್ ಹಾಗೂ ಮುಜ್ನಾ ಮಸೂದ್ ಮಲಿಕ್ ಇಬ್ಬರು ಒಂದೇ ಶಾಲೆಯಲ್ಲಿ ಒಟ್ಟಿಗೆ ಓದಿದ್ದರು ಎಂದು ಕೂಡಾ ವರದಿಯಾಗಿದೆ. 
 

25 ವರ್ಷದ ಮುಜ್ನಾ ಮಸೂದ್ ಮಲಿಕ್, ಅಕ್ಟೋಬರ್ 20, 1997ರಲ್ಲಿ ರಾವುಲ್ಪಿಂಡಿಯಲ್ಲಿ ಜನಿಸಿದ್ದರು. ಹಾಟ್ ಮಾಡೆಲ್ ಆಗಿರುವ ಮುಜ್ನಾ ಮಸೂದ್ ಮಲಿಕ್, ಟಿಕ್‌ಟಾಕ್‌ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಆದ ಫ್ಯಾನ್ ಬೇಸ್ ಹೊಂದಿದ್ದಾರೆ.
 

ಮುಜ್ನಾ ಮಸೂದ್ ಮಲಿಕ್ ಉನ್ನತ ಶಿಕ್ಷಣವನ್ನೂ ಪಡೆದಿದ್ದಾರೆ. ಇಸ್ಲಾಮಾಬಾದ್‌ನಲ್ಲಿರುವ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಯೂನಿವರ್ಸಿಟಿಯಲ್ಲಿ ಮುಜ್ನಾ ಮಸೂದ್ ಮಲಿಕ್, ಮಾಸ್ ಮೀಡಿಯಾ ಪದವಿಯನ್ನು ಪಡೆದಿದ್ದಾರೆ.

ಕಳೆದ 2022ರ ಡಿಸೆಂಬರ್‌ನಲ್ಲಿ ಹ್ಯಾರಿಸ್ ರೌಫ್ ಹಾಗೂ ಮುಜ್ನಾ ಮಸೂದ್ ಮಲಿಕ್ ಸಾಂಪ್ರದಾಯಿಕ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮುಜ್ನಾ ಮಸೂದ್ ಮಲಿಕ್ ಹಲವು ಬ್ರ್ಯಾಂಡ್‌ಗಳ ಪ್ರಚಾರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
 

Latest Videos

click me!