RCB ಟ್ರೋಫಿ ಗೆದ್ದರೂ ಶೋ ಕದ್ದ ವೈಭವ್! 72 ಸಿಕ್ಸರ್, 776 ರನ್‌, 5 ದೊಡ್ಡ ಪ್ರಶಸ್ತಿ

Published : Jun 01, 2026, 10:30 AM IST

IPL 2026 ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿತು. ಆದರೆ ಟ್ರೋಫಿ ಸಂಭ್ರಮದ ನಡುವೆ ಎಲ್ಲರ ಕಣ್ಣು ಸೆಳೆದಿದ್ದು ಕೇವಲ 15 ವರ್ಷದ ಯುವ ಬ್ಯಾಟರ್ Vaibhav Sooryavanshi 

PREV
17
ವೈಭವ್ ಗೆ ಒಂದೇ ಸೀಸನ್‌ನಲ್ಲಿ ಒಟ್ಟು 5 ಪ್ರಮುಖ ಪ್ರಶಸ್ತಿ

ರಾಜಸ್ಥಾನ್ ರಾಯಲ್ಸ್ ಫೈನಲ್ ತಲುಪದಿದ್ದರೂ, ಇಡೀ ಟೂರ್ನಿಯಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ ವೈಭವ್, ಒಂದೇ ಸೀಸನ್‌ನಲ್ಲಿ ಒಟ್ಟು 5 ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಹೊಸ ದಾಖಲೆ ಬರೆದಿದ್ದಾರೆ.

27
ಆರೆಂಜ್ ಕ್ಯಾಪ್ ಗೆದ್ದ ಕಿರಿಯ ಆಟಗಾರ!

ಐಪಿಎಲ್ 2026ರಲ್ಲಿ ವೈಭವ್ 16 ಪಂದ್ಯಗಳಲ್ಲಿ 776 ರನ್ ಸಿಡಿಸಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದರು. ಈ ಸಾಧನೆಯೊಂದಿಗೆ ಅವರು ಪ್ರತಿಷ್ಠಿತ ಆರೆಂಜ್ ಕ್ಯಾಪ್ ಗೆದ್ದು ₹10 ಲಕ್ಷ ಬಹುಮಾನ ಪಡೆದರು.

37
MVP ಪ್ರಶಸ್ತಿ ಕೂಡ ವೈಭವ್ ಖಾತೆಗೆ

ಸೀಸನ್ ಪೂರ್ತಿ ಸ್ಥಿರ ಪ್ರದರ್ಶನ ನೀಡಿದ ವೈಭವ್ 436.5 MVP ಅಂಕಗಳೊಂದಿಗೆ Most Valuable Player (MVP) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ₹15 ಲಕ್ಷ ಬಹುಮಾನವೂ ದೊರಕಿತು.

47
ಬೌಲರ್‌ಗಳಿಗೆ ದುಸ್ವಪ್ನವಾದ ಬ್ಯಾಟಿಂಗ್!

ವೈಭವ್ ಬ್ಯಾಟಿಂಗ್ ಮಾಡಿದರೆ ಸಾಕು ಬೌಂಡರಿ, ಸಿಕ್ಸರ್‌ಗಳ ಮಳೆ. ಈ ಸೀಸನ್‌ನಲ್ಲಿ ಅವರ ಸ್ಟ್ರೈಕ್ ರೇಟ್ 237.30 ಆಗಿದ್ದು, ಎಲ್ಲಾ ಬ್ಯಾಟರ್‌ಗಳಲ್ಲಿ ಅಗ್ರಸ್ಥಾನದಲ್ಲಿತ್ತು. ಪರಿಣಾಮವಾಗಿ ಅವರಿಗೆ Super Striker of the Season ಪ್ರಶಸ್ತಿ ಲಭಿಸಿತು.

57
ಉದಯೋನ್ಮುಖ ಆಟಗಾರ ಪ್ರಶಸ್ತಿ

15ನೇ ವಯಸ್ಸಿನಲ್ಲೇ ಇಷ್ಟು ದೊಡ್ಡ ವೇದಿಕೆಯಲ್ಲಿ ಮಿಂಚಿದ ವೈಭವ್, Emerging Player of the Season ಪ್ರಶಸ್ತಿಯನ್ನು ಗೆದ್ದು ಮತ್ತೊಮ್ಮೆ ಸುದ್ದಿಯಾದರು. ಜೊತೆಗೆ ₹10 ಲಕ್ಷ ಬಹುಮಾನವೂ ಪಡೆದರು.

67
ಕ್ರಿಸ್ ಗೇಲ್ ದಾಖಲೆಯನ್ನೇ ಮುರಿದ ಸಿಕ್ಸರ್ ಕಿಂಗ್!

ಈ ಸೀಸನ್‌ನಲ್ಲಿ ವೈಭವ್ ಒಟ್ಟು 72 ಸಿಕ್ಸರ್‌ಗಳನ್ನು ಸಿಡಿಸಿದರು. ಇದರೊಂದಿಗೆ ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಹೊಂದಿದ್ದ Chris Gayle ಅವರ ದಾಖಲೆಯನ್ನು ಹಿಂದಿಕ್ಕಿದರು. ಅವರಿಗೆ Super Sixes of the Season ಪ್ರಶಸ್ತಿಯೂ ದೊರೆಯಿತು.

77
ವೈಭವ್ ಸೂರ್ಯವಂಶಿ IPL 2026 ಅಂಕಿ-ಅಂಶಗಳು

ಪಂದ್ಯಗಳು: 16

ರನ್‌ಗಳು: 776

ಸರಾಸರಿ: 48.50

ಸ್ಟ್ರೈಕ್ ರೇಟ್: 237.31

ಶತಕ: 1

ಅರ್ಧಶತಕ: 5

ಸಿಕ್ಸರ್‌ಗಳು: 72

ಒಟ್ಟು ಪ್ರಶಸ್ತಿಗಳು: 5

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories