ಐಪಿಎಲ್‌ನಲ್ಲಿ 100; ಮುಂಬೈ ವಿರುದ್ಧ ವಿಶೇಷ ದಾಖಲೆ ಬರೆದ ಚಹಾಲ್!

First Published | Apr 9, 2021, 8:41 PM IST

14ನೇ ಆವೃತ್ತಿ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಯಜುವೇಂದ್ರ ಚಹಾಲ್ ವಿಶೇಷ ದಾಖಲೆ ಬರೆದಿದ್ದಾರೆ. ಚಹಾಲ್ ಬರೆದ ವಿಶೇಷ ದಾಖಲೆ ವಿವರ ಇಲ್ಲಿದೆ.

ಐಪಿಎಲ್ 2021ನೇ ಟೂರ್ನಿ ಆರಂಭಗೊಂಡಿದೆ. ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ನಡುವಿನ ಮೊದಲ ಪಂದ್ಯ ಅಭಿಮಾನಿಗಳ ರೋಚಕತೆ ಹೆಚ್ಚಿಸಿದೆ. ಇದರ ನಡುವೆ ಮತ್ತೊಂದು ದಾಖಲೆ ಕೂಡ ನಿರ್ಮಾಣವಾಗಿದೆ.
ಮುಂಬೈ ವಿರುದ್ಧದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಯಜುವೇಂದ್ರ ಚಹಾಲ್ 100ನೇ ಐಪಿಎಲ್ ಪಂದ್ಯ ಆಡಿದ ದಾಖಲೆ ಬರೆದಿದ್ದಾರೆ.
Tap to resize

ಮುಂಬೈ ವಿರುದ್ದ ಮೊದಲ ಪಂದ್ಯ ಚಹಾಲ್ ಪಾಲಿಗೆ 100ನೇ ಐಪಿಎಲ್ ಪಂದ್ಯವಾಗಿದೆ. ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಟೂರ್ನಿಗೆ ಡೆಬ್ಯೂ ಮಾಡಿದ ಚಹಾಲ್ ಇದೀಗ ಮುಂಬೈ ವಿರುದ್ಧ 100ನೇ ಪಂದ್ಯ ಆಡೋ ಸಾಧನೆ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಯಜುವೇಂದ್ರ ಚಹಾಲ್ ಕಳೆದ ಆವೃತ್ತಿಯಲ್ಲಿ 15 ಪಂದ್ಯಗಳಿಂದ 21 ವಿಕೆಟ್ ಕಬಳಿಸಿ ಮಿಂಚಿದ್ದರು.
2015ರ ಐಪಿಎಲ್ ಟೂರ್ನಿಯಲ್ಲಿ ಚಹಾಲ್ 23 ವಿಕೆಟ್ ಕಬಳಿಸಿ ಮಿಂಚಿದ್ದರು. ಕಳೆದ 2 ಆವೃತ್ತಿಗಳಲ್ಲಿ ಚಹಾಲ್ ಸರಾಸರಿ 20 ವಿಕೆಟ್ ಕಬಳಿಸಿ ಐಪಿಎಲ್ ಆಧಾರ ಸ್ತಂಭವಾಗಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ 100ನೇ ಟಿ20 ಪಂದ್ಯ ಸಾಧನೆ ಮಾಡಿದ ಚಹಾಲ್ ಒಟ್ಟಾರೆ 200 ಟಿ20 ಪಂದ್ಯ ಆಡಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಮುಂಬೈ ವಿರುದ್ಧದ ಮೊದಲ ಪಂದ್ಯದಲ್ಲಿ ಚಹಾಲ್ ಎರಡೆರಡು ದಾಖಲೆ ಬರೆದಿದ್ದಾರೆ
ಟೀಂ ಇಂಡಿಯಾ ಪರ 48 ಟಿ20 ಪಂದ್ಯ ಆಡಿರುವ ಚಹಾಲ್, 100 ಐಪಿಎಲ್ ಪಂದ್ಯ, ದೇಸಿ ಟೂರ್ನಿ ಸೇರಿದಂತೆ ಒಟ್ಟು 200 ಟಿ20 ಪಂದ್ಯ ಆಡಿದ ಸಾಧನೆಗೆ ಚಹಾಲ್ ಪಾತ್ರರಾಗಿದ್ದಾರೆ.
ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ರನೌಟ್‌ನಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ ಚಹಾಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭರ್ಜರಿ ಮೇಲುಗೈ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

Latest Videos

click me!