ಐಪಿಎಲ್‌ 2021: ಉದ್ಘಾಟನಾ ಪಂದ್ಯಕ್ಕೂ ಮುನ್ನ ಮುಂಬೈಗೆ ವಾರ್ನ್‌ ಮಾಡಿದ ಎಬಿಡಿ..!

Suvarna News   | Asianet News
Published : Apr 09, 2021, 02:57 PM ISTUpdated : Apr 09, 2021, 03:10 PM IST

ಚೆನ್ನೈ: ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಇನ್ನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಬಲಿಷ್ಠ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಈ ಹೈವೋಲ್ಟೇಜ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್‌ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಆರ್‌ಸಿಬಿ ಸ್ಪೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಎದುರಾಳಿ ಮುಂಬೈ ತಂಡಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.  

PREV
19
ಐಪಿಎಲ್‌ 2021: ಉದ್ಘಾಟನಾ ಪಂದ್ಯಕ್ಕೂ ಮುನ್ನ ಮುಂಬೈಗೆ ವಾರ್ನ್‌ ಮಾಡಿದ ಎಬಿಡಿ..!

ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿಂದು(ಏ.09) 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.

29

ಎರಡು ಬಲಿಷ್ಠ ತಂಡಗಳ ನಡುವಿನ ಹೈವೋಲ್ಟೇಜ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಐಪಿಎಲ್‌ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದು, ಸಂಜೆ 7.30 ಎಷ್ಟು ಬೇಗ ಬರುತ್ತೆ ಎಂದು ಕನವರಿಸುತ್ತಿದ್ದಾರೆ.

39

ಈಗಾಗಲೇ ಐದು ಬಾರಿ ಐಪಿಎಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌, ಇದೀಗ ಹ್ಯಾಟ್ರಿಕ್‌ ಟ್ರೋಫಿ ಎತ್ತಿಹಿಡಿದು ದಾಖಲೆ ಬರೆಯಲು ಎದುರು ನೋಡುತ್ತಿದೆ.

49

ಇನ್ನೊಂದೆಡೆ ಚೊಚ್ಚಲ ಐಪಿಎಲ್‌ ಟ್ರೋಫಿ ಕನವರಿಕೆಯಲ್ಲಿರುವ ಆರ್‌ಸಿಬಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಬಗ್ಗುಬಡಿದು ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದುರು ನೋಡುತ್ತಿದೆ.

59

ಹೀಗಿರುವಾಗಲೇ ಉದ್ಘಾಟನಾ ಪಂದ್ಯಕ್ಕೂ ಮುನ್ನ ಮಿಸ್ಟರ್‌ 360 ಖ್ಯಾತಿಯ ಎಬಿ ಡಿವಿಲಿಯರ್ಸ್‌ ಎದುರಾಳಿ ಮುಂಬೈ ಇಂಡಿಯನ್ಸ್‌ಗೆ ಖಡಕ್‌ ವಾರ್ನಿಂಗ್‌ ಮಾಡಿದ್ದಾರೆ.

69

ಆರ್‌ಸಿಬಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಎಬಿಡಿ, 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೊದಲ ಪಂದ್ಯವನ್ನಾಡಲು ನಾನು ಸಾಕಷ್ಟು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

79

ಮುಂಬೈ ಇಂಡಿಯನ್ಸ್‌ ಒಂದು ಅದ್ಭುತ ತಂಡವಾಗಿದ್ದು, ಈಗಾಗಲೇ ಹಲವು ಟ್ರೋಫಿಗಳನ್ನು ಜಯಿಸಿದೆ. ಹಾಗಂತ ಈ ಬಾರಿ ನಾವೇನು ಮಾಡಬೇಕು ಎನ್ನುವುದು ನಮಗೆ ಗೊತ್ತಿದೆ ಎಂದು ಎಬಿಡಿ ಹೇಳಿದ್ದಾರೆ.

89

ಈ ಬಾರಿ ಸಾಕಷ್ಟು ಒಳ್ಳೆಯ ಅನುಭವಿ ಆಟಗಾರರು ನಮ್ಮ ತಂಡ ಕೂಡಿಕೊಂಡಿದ್ದಾರೆ. ಮುಂಬೈ ತಂಡವನ್ನು ಮಣಿಸುವುದು ಸುಲಭವಲ್ಲ ಎನ್ನುವುದು ಗೊತ್ತಿದೆ. ಅದೇ ರೀತಿ ಮುಂಬೈ ಸವಾಲನ್ನು ನಾವು ಮೆಟ್ಟಿನಿಲ್ಲಲಿದ್ದೇವೆ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

99

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಗೆಲುವಿನೊಂದಿಗೆ ಶುಭಾರಂಭ ಮಾಡಲಿ ಎನ್ನುವುದು ಅಸಂಖ್ಯಾತ ಆರ್‌ಸಿಬಿ ಅಭಿಮಾನಿಗಳ ಹಾರೈಕೆಯಾಗಿದೆ.

click me!

Recommended Stories