ಜೋಸ್ ಹೇಜಲ್‌ವುಡ್‌ ಬದಲಿಗೆ ಸಿಎಸ್‌ಕೆ ಕೂಡಿಕೊಂಡ ಆಸೀಸ್‌ ಎಡಗೈ ವೇಗಿ..!

Suvarna News   | Asianet News
Published : Apr 09, 2021, 06:24 PM IST

ಮುಂಬೈ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ 3 ಬಾರಿಯ ಐಪಿಎಲ್‌ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಕೂಡಿಕೊಂಡಿದ್ದಾರೆ ಆಸೀಸ್‌ ಮಾರಕ ಎಡಗೈ ವೇಗಿ. ಆಸ್ಟ್ರೇಲಿಯಾದ ಅನುಭವಿ ವೇಗಿ ಜೋಸ್‌ ಹೇಜಲ್‌ವುಡ್‌ ಕೊನೆಯ ಕ್ಷಣದಲ್ಲಿ ಸಿಎಸ್‌ಕೆ ತಂಡಕ್ಕೆ ಕೈಕೊಟ್ಟಿದ್ದರು. ಇದೀಗ ಅವರ ಸ್ಥಾನವನ್ನು ಮತ್ತೋರ್ವ ಆಸೀಸ್‌ ವೇಗಿ ತುಂಬಲಿದ್ದಾರೆ.  

PREV
18
ಜೋಸ್ ಹೇಜಲ್‌ವುಡ್‌ ಬದಲಿಗೆ ಸಿಎಸ್‌ಕೆ ಕೂಡಿಕೊಂಡ ಆಸೀಸ್‌ ಎಡಗೈ ವೇಗಿ..!

14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಏಪ್ರಿಲ್‌ 09ರಿಂದ ಆರಂಭವಾಗಲಿದ್ದು, ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿವೆ.
 
28

ಇನ್ನು 3 ಬಾರಿಯ ಐಪಿಎಲ್‌ ಚಾಂಪಿಯನ್‌ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಕಳೆದ ಆವೃತ್ತಿಯ ರನ್ನರ್‌ ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಎದುರಿಸಲಿದೆ.

38

14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಜೋಸ್ ಹೇಜಲ್‌ವುಡ್‌ ಮಿಲಿಯನ್‌ ಡಾಲರ್‌ ಕ್ರಿಕೆಟ್‌ ಟೂರ್ನಿಯಿಂದ ಹಿಂದೆ ಸರಿದಿದ್ದರು.

48

ಟಿ20 ವಿಶ್ವಕಪ್‌ ಹಾಗೂ ಆಷಸ್ ಸರಣಿಗೂ ಮುನ್ನ ವಿಶ್ರಾಂತಿ ಪಡೆಯಲು ತೀರ್ಮಾನಿಸಿ ಸಿಎಸ್‌ಕೆ ತಂಡದ ವೇಗಿ ಜೋಸ್‌ ಹೇಜಲ್‌ವುಡ್‌ ಕೊನೆಯ ಕ್ಷಣದಲ್ಲಿ 14ನೇ ಆವೃತ್ತಿಯ ಐಪಿಎಲ್‌ನಿಂದ ಹಿಂದೆ ಸರಿದಿದ್ದರು.

58

ಇದೀಗ ಜೋಸ್‌ ಹೇಜಲ್‌ವುಡ್‌ ಬದಲಿಗೆ ಆಸೀಸ್‌ ಎಡಗೈ ವೇಗಿ ಜೇಸನ್‌ ಬೆಹ್ರನ್‌ಡ್ರಾಫ್‌ ಸಿಎಸ್‌ಕೆ ತಂಡ ಕೂಡಿಕೊಂಡಿದ್ದಾರೆ. ಸಿಎಸ್‌ಕೆ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಈ ವಿಚಾರವನ್ನು ಖಚಿತಪಡಿಸಿದೆ.

68

2019ನೇ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ಜೇಸನ್‌ ಬೆಹ್ರನ್‌ಡ್ರಾಫ್‌ ಮುಂಬೈ ಇಂಡಿಯನ್ಸ್‌ ತಂಡದ ಪರ 5 ಪಂದ್ಯಗಳನ್ನಾಡಿ 5 ವಿಕೆಟ್ ಕಬಳಿಸಿದ್ದರು.

78

ಆಸ್ಟ್ರೇಲಿಯಾ ಪರ ಜೇಸನ್‌ ಬೆಹ್ರನ್‌ಡ್ರಾಫ್‌ 11 ಏಕದಿನ ಹಾಗೂ 7 ಟಿ20 ಪಂದ್ಯಗಳನ್ನಾಡಿದ್ದು ಒಟ್ಟಾರೆ 12 ವಿಕೆಟ್‌ ಕಬಳಿಸಿದ್ದಾರೆ.

88

ಲುಂಗಿ ಎಂಗಿಡಿ, ಸ್ಯಾಮ್‌ ಕರ್ರನ್‌ ಜತೆ ಜೇಸನ್‌ ಬೆಹ್ರನ್‌ಡ್ರಾಫ್‌ ಇದೀಗ ಸಿಎಸ್‌ಕೆ ವೇಗದ ಬೌಲಿಂಗ್‌ಗೆ ಬಲ ತುಂಬಲಿದ್ದಾರೆ. ಇವರಿಗೆ ಶಾರ್ದೂಲ್ ಠಾಕೂರ್‌, ದೀಪಕ್‌ ಚಹರ್ ಸಹಾ ಸಾಥ್‌ ನೀಡಲಿದ್ದಾರೆ.

click me!

Recommended Stories