ಮುಂಬೈ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಪ್ರಕಟ: ಬೆಂಗಳೂರು ತಂಡದಲ್ಲಿ ಮೂರು ಮೇಜರ್ ಚೇಂಜ್ ಫಿಕ್ಸ್

First Published Apr 11, 2024, 2:20 PM IST

ಮುಂಬೈ(ಏ.11): ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಇಲ್ಲಿನ ವಾಂಖೇಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಆರ್‌ಸಿಬಿ ಮೂರು ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದ್ದು, ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ
 

1. ಫಾಫ್ ಡು ಪ್ಲೆಸಿಸ್:

ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ನಾಯಕನಾಗಿ ಹಾಗೂ ಆರಂಭಿಕನಾಗಿ ಮೊದಲ 5 ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದಾರೆ. ಫಾಫ್ ಕಳೆದ 5 ಪಂದ್ಯಗಳಿಂದ ಕೇವಲ 109 ರನ್ ಗಳಿಸಿದ್ದು, ಇಂದು ಮುಂಬೈ ಇಂಡಿಯನ್ಸ್ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅಬ್ಬರಿಸುವ ನಿರೀಕ್ಷೆಯಲ್ಲಿದ್ದಾರೆ.
 

2. ವಿರಾಟ್ ಕೊಹ್ಲಿ:

ಆರ್‌ಸಿಬಿ ಪಡೆಯ ಬ್ಯಾಟಿಂಗ್ ಆಪತ್ಬಾಂದವ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಮತ್ತೊಮ್ಮೆ ದೊಡ್ಡ ಇನಿಂಗ್ಸ್ ಆಡುವ ವಿಶ್ವಾಸದಲ್ಲಿದ್ದಾರೆ. ವಿರಾಟ್ ಕಳೆದ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದರು.
 

3. ರಜತ್ ಪಾಟೀದಾರ್:

ರಜತ್ ಪಾಟೀದಾರ್ ಕೂಡಾ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಆದರೆ ಒತ್ತಡದ ಪರಿಸ್ಥಿತಿಯಲ್ಲಿ ದಿಟ್ಟ ಆಟ ಆಡುವ ಕ್ಷಮತೆ ಹೊಂದಿರುವ ಪಾಟೀದಾರ್ ಅವರ ಮೇಲೆ ಟೀಂ ಮ್ಯಾನೇಜ್‌ಮೆಂಟ್ ವಿಶ್ವಾಸವಿಟ್ಟು ಮತ್ತೊಂದು ಅವಕಾಶ ನೀಡುವ ಸಾಧ್ಯತೆಯಿದೆ.
 

4. ವಿಲ್ ಜೇಕ್ಸ್‌:

ಕ್ಯಾಮರೋನ್ ಗ್ರೀನ್ ಪದೇ ಪದೇ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ 5 ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಇಂಗ್ಲೆಂಡ್ ಮೂಲದ ಬಲಗೈ ಸ್ಪೋಟಕ ಬ್ಯಾಟರ್ ವಿಲ್ ಜೇಕ್ಸ್‌ಗೆ ಇಂದು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ. ಜೇಕ್ಸ್ ಆಫ್‌ಸ್ಪಿನ್ನರ್ ಕೂಡಾ ಹೌದು.

5. ಗ್ಲೆನ್ ಮ್ಯಾಕ್ಸ್‌ವೆಲ್:

ಆಸೀಸ್ ಮೂಲದ ಆಲ್ರೌಂಡರ್ ಮ್ಯಾಕ್ಸ್‌ವೆಲ್ ಬ್ಯಾಟ್‌ನಿಂದ ನಿರೀಕ್ಷಿತ ರನ್ ಹರಿದು ಬರುತ್ತಿಲ್ಲ. ಆದರೆ ಬೌಲಿಂಗ್‌ನಲ್ಲಿ 4 ವಿಕೆಟ್ ಕಬಳಿಸಿದ್ದರು. ಮುಂಬೈ ಎದುರು ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಮ್ಯಾಕ್ಸಿ ಮೇಲೆ ಆರ್ಸಿಬಿ ಮ್ಯಾನೇಜ್‌ಮೆಂಟ್ ಮತ್ತೊಂದು ಅವಕಾಶ ನೀಡುವ ಸಾಧ್ಯತೆಯಿದೆ.

6. ಸೌರವ್ ಚೌಹ್ಹಾನ್:

ಪ್ರತಿಭಾನ್ವಿತ ಬ್ಯಾಟರ್ ಸೌರವ್ ಚೌಹ್ಹಾನ್, ರಾಜಸ್ಥಾನ ರಾಯಲ್ಸ್ ವಿರುದ್ದ ಐಪಿಎಲ್‌ಗೆ ಪಾದಾರ್ಪಣೆ ಮಾಡಿ 9 ರನ್ ಬಾರಿಸಿದ್ದರು. ಸ್ಪೋಟಕ ಬ್ಯಾಟಿಂಗ್ ನಡೆಸುವ ಕ್ಷಮತೆ ಹೊಂದಿರುವ ಸೌರವ್‌ಗೆ ಇಂದು ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.
 

7. ದಿನೇಶ್ ಕಾರ್ತಿಕ್;

ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಉತ್ತಮ ಲಯದಲ್ಲಿದ್ದು, 5 ಪಂದ್ಯಗಳಿಂದ 173ರ ಸ್ಟ್ರೈಕ್‌ರೇಟ್‌ನಲ್ಲಿ 90 ರನ್ ಗಳಿಸಿದ್ದು ಮ್ಯಾಚ್ ಫಿನಿಶರ್ ಪಾತ್ರವನ್ನು ನಿಭಾಯಿಸುತ್ತಾ ಬಂದಿದ್ದಾರೆ.
 

8. ಲಾಕಿ ಫರ್ಗ್ಯೂಸನ್:

ಕಿವೀಸ್ ಮೂಲದ ವೇಗದ ಬೌಲರ್‌ಗೆ ಇಂದು ಆರ್‌ಸಿಬಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ. ರೀಸ್ ಟಾಪ್ಲೆ ಬದಲಿಗೆ ಲಾಕಿ ಫರ್ಗ್ಯೂಸನ್ ಆರ್‌ಸಿಬಿ ತಂಡದಲ್ಲಿ ಆಡಲಿ ಎನ್ನುವುದು ಅಭಿಮಾನಿಗಳ ಆಶಯ ಕೂಡಾ ಹೌದು.
 

9. ವೈಶಾಕ್ ವಿಜಯ್‌ಕುಮಾರ್:

ಕರ್ನಾಟಕ ಮೂಲದ ಪ್ರತಿಭಾನ್ವಿತ ವೇಗಿದ ಬೌಲರ್ ವೈಶಾಕ್ ಒಮ್ಮೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದರು. ಆದರೆ ಆ ಬಳಿಕ ಅವಕಾಶ ಸಿಕ್ಕಿರಲಿಲ್ಲ. ಹಿಮಾಂಶು ಶರ್ಮಾ ಬದಲಿಗೆ ಇಂದು ಮುಂಬೈ ಎದುರು ವೈಶಾಕ್‌ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
 

10. ಮೊಹಮ್ಮದ್ ಸಿರಾಜ್:

ಆರ್‌ಸಿಬಿಯ ಪ್ರಮುಖ ವೇಗಿ ಸಿರಾಜ್, ನಿರೀಕ್ಷಿತ ಲಯದಲ್ಲಿ ಇಲ್ಲ. ಆದರೆ ಸಿರಾಜ್ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಅಪಾಯಕಾರಿ ಆಗಬಲ್ಲ ಬೌಲರ್ ಆಗಿದ್ದು, ಆರಂಭದಲ್ಲೇ ಆರ್‌ಸಿಬಿಗೆ ವಿಕೆಟ್ ಕಬಳಿಸಿದರೆ, ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಲು ಸಾಧ್ಯವಾಗಲಿದೆ.
 

11. ಯಶ್ ದಯಾಳ್:

ಆರ್‌ಸಿಬಿ ಎಡಗೈ ವೇಗಿ ಯಶ್ ದಯಾಳ್ ಆಡಿದ 5 ಪಂದ್ಯಗಳಿಂದ 5 ವಿಕೆಟ್ ಕಬಳಿಸಿದ್ದು, ಮಹತ್ವದ ಪಂದ್ಯದಲ್ಲಿ ಮುಂಬೈ ಎದುರು ಮಾರಕ ದಾಳಿ ನಡೆಸಲು ಸಜ್ಜಾಗಿದ್ದಾರೆ.
 

click me!