ಪ್ರೀತಿಯ ಮಡದಿಗಾಗಿ ದಿಢೀರ್ ನಿವೃತ್ತಿ ತಗೊಂಡ್ರಾ ಧೋನಿ..? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

First Published Apr 9, 2024, 4:35 PM IST

ಬೆಂಗಳೂರು: ಮಿಸ್ಟರ್ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರ ಹಿಂದೆ ಪತ್ನಿ ಸಾಕ್ಷಿ ಸಿಂಗ್ ಪಾತ್ರವಿದೆ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡಂತಹ ದಿಗ್ಗಜ ನಾಯಕರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಧೋನಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವು ಮೂರು ಐಸಿಸಿ ಟ್ರೋಫಿ ಜಯಿಸಿದೆ.
 

ಹೌದು, 2007ರಲ್ಲಿ ಐಸಿಸಿ ಟಿ20 ವಿಶ್ವಕಪ್, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹೀಗೆ ಧೋನಿ ನಾಯಕತ್ವದಲ್ಲಿ ಭಾರತ ತಂಡವು ಮೂರು ಐಸಿಸಿ ಟ್ರೋಫಿ ಜಯಿಸಿದ ಸಾಧನೆ ಮಾಡಿದೆ.
 

Latest Videos


ಮಹೇಂದ್ರ ಸಿಂಗ್ ಧೋನಿ, 2020ರ ಆಗಸ್ಟ್ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ, ಐಪಿಎಲ್‌ನಲ್ಲಿ ಆಡುತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ವಿದಾಯ ಹೇಳುವುದಕ್ಕೂ ಸಾಕಷ್ಟು ಮುಂಚೆ, ಅಂದರೆ 2014ರ ಡಿಸೆಂಬರ್ 30ರಂದೆ ಧೋನಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಧೋನಿ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸುವ ನಿರ್ಧಾರದ ಹಿಂದೆ ಪತ್ನಿ ಸಾಕ್ಷಿ ಸಿಂಗ್ ಅವರ ಪಾತ್ರವಿತ್ತು ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಮಗುವಿನ ಜತೆ ಸಮಯ ಕಳೆಯಲು ನೀವು ಒಂದು ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿ ಎಂದು ಸಾಕ್ಷಿ ಪತಿ ಧೋನಿಗೆ ಸಲಹೆ ನೀಡಿದ್ದರು.

ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಸಂದರ್ಭದಲ್ಲಿ ಪತ್ನಿ ಸಾಕ್ಷಿ ಸಿಂಗ್ ಪ್ರಗ್ನೆಂಟ್ ಆಗಿದ್ದರು. ಈ ಕುರಿತಂತೆ ಸಾಕ್ಷಿ ಈ ಹಿಂದೆ ಮಾತನಾಡಿದ್ದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಮುಂಚೆಯೇ ನಮಗೆ ಅದರ ಸುಳಿವು ಸಿಕ್ಕಿತ್ತು. ನಾನು ಅವರಿಗೆ ಮೊದಲೇ ಹೇಳಿದ್ದೆ, ನಿಮಗೆ ಮಗು ಬೇಕಿದ್ದರೆ, ಕನಿಷ್ಠವೆಂದರೂ ಒಂದು ಮಾದರಿಯ ಕ್ರಿಕೆಟ್‌ ಬಿಡಿ ಎಂದು ಹೇಳಿದ್ದೆ. ಯಾಕೆಂದರೆ ಅವರಿಗೆ ಕುಟುಂಬದ ಜತೆ ಕಾಲ ಕಳೆಯಲು ಸಮಯವೇ ಸಿಗುತ್ತಿರಲಿಲ್ಲ.

"ಝಿವಾ ಅವಳ ಜನನವಾದ ಮೇಲೆ ಆಸ್ಪತ್ರೆಯಲ್ಲಿದ್ದ ಅವರಿವರು ಪತಿ ಮಗು ನೋಡುವುದಕ್ಕೆ ಬರುವುದಿಲ್ಲವೇ ಎಂದು ಕೇಳುತ್ತಿದ್ದರು. ನಾನು ಅವರಿಗೆಲ್ಲಾ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳುತ್ತಿದ್ದೆ. ಅವರಿಗೆ ಕ್ರಿಕೆಟ್ ಆದ್ಯತೆಯಾಗಿತ್ತು, ನನಗೆ ಅವರೇ ಆದ್ಯತೆಯಾಗಿದ್ದರು. ಹೀಗಾಗಿ ಅವರ ಆದ್ಯತೆಯೇ ನನ್ನ ಆದ್ಯತೆ" ಎಂದು ಸಾಕ್ಷಿ ಈ ಹಿಂದೆ ಹೇಳಿದ್ದರು.

ಸದ್ಯ ಧೋನಿ 2024ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನವೇ ಧೋನಿ ಸಿಎಸ್‌ಕೆ ನಾಯಕತ್ವದಿಂದಲೂ ಕೆಳಗಿಳಿದಿದ್ದು, ಕೇವಲ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

click me!