ಈ ವಾರದಲ್ಲಿ RCB ಮಾಲೀಕತ್ವ ಅಂತಿಮ, 9 ಬಿಡ್ಡರ್ ಪೈಕಿ ವಿಜಯ್ ಮಲ್ಯ ಇದ್ದಾರಾ?

Published : Feb 16, 2026, 08:36 PM IST

ಈ ವಾರದಲ್ಲಿ ಆರ್‌ಸಿಬಿ ಮಾಲೀಕತ್ವ ಅಂತಿಮ, 9 ಬಿಡ್ಡರ್ ಪೈಕಿ ವಿಜಯ್ ಮಲ್ಯ ಇದ್ದಾರಾ? ಆರ್‌ಸಿಬಿ ಮಾಲೀಕರಾಗಲು ಉದ್ಯಮಿಗಳು, ಕೆಲ ಸಂಸ್ಥೆಗಳು ಆಸಕ್ತಿ ತೋರಿದೆ. ಈ ವಾರ ಹರಾಜು ನಡೆಯಲಿದೆ. 9-10 ಬಿಡ್ಡರ್ ಪೈಕಿ ವಿಜಯ್ ಮಲ್ಯ ಬಿಡ್ಡಿಂಗ್ ಲಿಸ್ಟ್‌ನಲ್ಲಿದ್ದಾರ? 

PREV
16
Royal Challengers Bengaluru ಮಾಲೀಕ ಈ ವಾರ ನಿರ್ಧಾರ

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Chalengers Bengaluru) ತಂಡ ಐಪಿಎಲ್ ಟೂರ್ನಿಯಲ್ಲಿರುವ ಅತ್ಯಂತ ಮೌಲ್ಯಯುತ ತಂಡ. ಕಳೆದ ಕಾಲ್ತುಳಿತ ಪ್ರಕರಣ ಹಾಗೂ ಬಳಿಕ ನಡೆದ ಬೆಳವಣಿಗೆಯಿಂದ ಡಿಯಾಜಿಯೋ ಯುನೈಟೆಡ್ ಸ್ಪಿರಿಟ್ಸ್ ಆರ್‌ಸಿಬಿ ಮಾರಾಟಕ್ಕೆ ಮುಂದಾಗಿತ್ತು ಅನ್ನೋ ವರದಿಗಳು ಹರಿದಾಡಿತ್ತು. ಆರ್‌ಸಿಬಿ ಮಾಲೀಕತ್ವ ಬದಲಾವಣೆಯಾಗುತ್ತಿರುವುದು ಸತ್ಯ. ಆದರೆ ಯಾರು ಮಾಲೀಕರಾಗಲಿದ್ದಾರೆ ಅನ್ನೋದು ಈ ವಾರ ನಿರ್ಧಾರವಾಗಲಿದೆ.

26
ಈ ವಾರ ಆರ್‌ಸಿಬಿ ಮಾಲೀಕತ್ವ ಹರಾಜು

ಡಿಯಾಜಿಯೋ ಯುನೈಟೆಡ್ ಸ್ಪಿರಿಟ್ ಒಡೆತನದ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ( RCSPL) ಈ ಆರ್‌ಸಿಬಿ ತಂಡ ನಿರ್ವಹಣೆ ಮಾಡುತ್ತದೆ. ಈ ವಾರ ಆರ್‌ಸಿಬಿ ತಂಡದ ಹರಾಜು ನಡೆಯಲಿದೆ. ಇದೇ ವಾರ ಆರ್‌ಸಿಬಿ ಮಾಲೀಕ ಯಾರು ಅನ್ನೋದು ಸ್ಪಷ್ಟವಾಗಲಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

36
ವಿಜಯ್ ಮಲ್ಯ ಬಿಡ್ಡರ್ಸ್ ಲಿಸ್ಟ್‌ನಲ್ಲಿದ್ದಾರ

ಆರ್‌ಸಿಬಿ ಮಾಲೀಕತ್ವಕ್ಕೆ ಬಾರಿ ಪೈಪೋಟಿ ಇದೆ. ಹಲವರು ಪಾಲು ಖರೀದಿಸಲು ಆಸಕ್ತಿ ತೋರಿದ್ದಾರೆ. ಹಲವರು ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿದ್ದಾರೆ. ಮಾಲೀಕರಾಗಲು ಆಸಕ್ತಿ ತೋರಿದ ಪಟ್ಟಿಯಲ್ಲಿ 9 ರಿಂದ 10 ಬಿಡ್ಡರ್ಸ್ ಇದೀಗ ಅದಿಕೃತವಾಗಿ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಿಡ್ಡರ್ಸ್ ಲಿಸ್ಟ್‌ನಲ್ಲಿ ಮಾಜಿ ಮಾಲೀಕ ವಿಜಯ್ ಮಲ್ಯ (Vijay Mallya) ಕೂಡ ಇದ್ದಾರ ಅನ್ನೋ ಚರ್ಚೆ ಜೋರಾಗಿದೆ.

46
ಆರ್‌ಸಿಬಿ ಮಾಜಿ ಚೇರ್ಮೆನ್

ಐಪಿಎಲ್ ಆರಂಭಗೊಂಡಾಗ ಬೆಂಗಳೂರು ಫ್ರಾಂಚೈಸಿ ಖರೀದಿಸಿದ ವಿಜಯ್ ಮಲ್ಯ ವಿಶ್ವದ ಅತೀ ದೊಡ್ಡ ಹಗೂ ಮೌಲ್ಯಯುತ ಕ್ರಿಕೆಟ್ ಲೀಗ್ ತಂಡವನ್ನಾಗಿ ಮಾಡಿದ್ದರು. ಆದರೆ ಉದ್ಯಮದಲ್ಲಿ ಆದ ನಷ್ಟದಿಂದ ವಿಜಯ್ ಮಲ್ಯವನ್ನು ಎಲ್ಲವನ್ನೂ ಕಳೆದುಕೊಂಡರು ಹೀಗಾಗಿ ಯುನೈಟೆಡ್ ಸ್ಪಿರಿಟ್ ಡಿಯಾಜಿಯೋ ಮಾಲೀಕತ್ವ ಬಂದಿತ್ತು. ಇದೀಗ ಲಂಡನ್‌ನಲ್ಲಿರುವ ವಿಜಯ್ ಮಲ್ಯ, ಮತ್ತೆ ಆರ್‌ಸಿಬಿ ಮಾಲೀಕತ್ವದ ಬಿಡ್ಡಿಂಗ್ ಲಿಸ್ಟ್‌ನಲ್ಲಿ ಇಲ್ಲ.

56
ಮಾಲೀಕತ್ವ ರೇಸ್‌ನಲ್ಲಿ ಯಾರಿದ್ದಾರೆ

ಸೀರಮ್ ಸಂಸ್ಥೆಯ ಸಿಇಒ ಅದಾರ್ ಪೂನಾವಲ, ಮಣಿಪಾಲ್ ಗ್ರೂಪ್ ಚೇರ್ಮೆನ್ ಡಾ.ರಂಜನ್ ಪೈ, ಸ್ವದೇಶಿ ಪ್ರೈವೇಟ್ ಇಕ್ವಿಟಿ, ಮಾಂಚೆಸ್ಟರ್ ಸಹ ಮಾಲೀಕ ಅವ್ರಮ್ ಗ್ಲೇಜರ್ ಬೆಂಬಲದ ಲ್ಯಾನ್ಸರ್ ಕ್ಯಾಪಿಟಲ್ ಸೇರಿದಂತೆ ಹಲವು ದಿಗ್ಗದ ಹೆಸರುಗಳು ಈ ಬಿಡ್ಡಿಂಗ್ ಪಟ್ಟಿಯಲ್ಲಿದೆ ಎಂದು ವರದಿ ಮಾಡಿದೆ.

66
ಈ ಬಾರಿಯ ಐಪಿಎಲ್‌ಗೆ ಮಾಲೀಕ

2026ರ ಐಪಿಎಲ್ ಟೂರ್ನಿ ಆರಂಭದ ವೇಳೆ ಆರ್‌ಸಿಬಿಗೆ ಹೊಸ ಮಾಲೀಕ ಬರಲಿದ್ದಾರೆ. ಇದೇ ಕಾರಣದಿಂದ ಬೆಂಗಳೂರು ಬೇಸ್ ಆಗಿದ್ದ ಆರ್‌ಸಿಬಿ ಮಾಲೀಕರು ಬದಲಾದಂತೆ ಬೇಸ್ ಸಿಟಿಯೂ ಬದಲಾಗುವ ಸಾಧ್ಯತೆ ಇದೆ. ಇದೇ ಕಾರಣದಿಂದ ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೂ ಫ್ರಾಂಚೈಸಿಯಲ್ಲಿನ ಗೊಂದಲ ಮುಂದುವರಿದಿದೆ.

ಈ ಬಾರಿಯ ಐಪಿಎಲ್‌ಗೆ ಮಾಲೀಕ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories