ಒಂದು ವೇಳೆ ವಿರಾಟ್ ಕೊಹ್ಲಿಯಾಗಿ ಬದಲಾದರೇ ಎಬಿ ಡಿವಿಲಿಯರ್ಸ್ ಮೊದಲು ಮಾಡುವ ಕೆಲಸ ಏನು?

Published : Nov 12, 2025, 06:02 PM IST

ಬೆಂಗಳೂರು: ಎಬಿ ಡಿವಿಲಿಯರ್ಸ್ ಯಾರಿಗೆ ಗೊತ್ತಿಲ್ಲ ಹೇಳಿ? ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್, ಆರ್‌ಸಿಬಿ ಪಾಲಿನ ಆಪತ್ಬಾಂದವ ಎಂದೇ ಕರೆಸಿಕೊಳ್ಳುವ ಎಬಿಡಿ, Q&A ಕಾರ್ಯಕ್ರಮವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

PREV
18
2018ರಲ್ಲಿ ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ

2018ರಲ್ಲಿ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಎಬಿ ಡಿವಿಲಿಯರ್ಸ್ ಕೆಲ ಕಾಲ ಜಗತ್ತಿನ ನಾನಾ ಟಿ20 ಲೀಗ್‌ನಲ್ಲಿ ಸ್ಪೋಟಕ ಕ್ರಿಕೆಟ್ ಆಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು.

28
ಒಂದು ದಶಕ ಆರ್‌ಸಿಬಿ ಪ್ರತಿನಿಧಿಸಿದ್ದ ಎಬಿಡಿ

2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಂಡ ಎಬಿ ಡಿವಿಲಿಯರ್ಸ್, 2011ರವರೆಗೂ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಎಬಿಡಿ ಏಕಾಂಗಿಯಾಗಿ ಆರ್‌ಸಿಬಿ ತಂಡಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದಾರೆ.

38
ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಎಬಿಡಿ

ಇದೇ ಕಾರಣಕ್ಕೆ ಎಬಿ ಡಿವಿಲಿಯರ್ಸ್‌ಗೆ ಭಾರತದಲ್ಲೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇದೀಗ ಎಬಿಡಿ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಹಲವು ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

48
ಎಬಿಡಿ ಬಳಿ ಇರುವ ಫೇಮಸ್ ಕಾಂಟ್ಯಾಕ್ಟ್ ನಂಬರ್?

ನಿಮ್ಮ ಮೊಬೈಲ್ ಫೋನ್‌ನಲ್ಲಿರುವ ಅತ್ಯಂತ ಪ್ರಖ್ಯಾತ ವ್ಯಕ್ತಿಯ ಫೋನ್ ನಂಬರ್ ಯಾರದ್ದು ಎನ್ನುವ ಪ್ರಶ್ನೆಗೆ ಎಬಿಡಿ, ವಿರಾಟ್ ಕೊಹ್ಲಿಯದ್ದು ಎಂದು ಉತ್ತರಿಸಿದ್ದಾರೆ.

58
ಮೊಬೈಲ್‌ನಲ್ಲಿ ಎಬಿಡಿ ಅತಿಹೆಚ್ಚು ಬಳಸುವ ಆ್ಯಪ್ ಯಾವುದು?

ಮೊಬೈಲ್‌ನಲ್ಲಿ ನೀವು ಅತಿಹೆಚ್ಚು ಬಳಸುವ ಆ್ಯಪ್ ಯಾವುದು ಎನ್ನುವ ಪ್ರಶ್ನೆಗೆ ಎಬಿಡಿ, ವಾಟ್ಸ್‌ ಆ್ಯಪ್ ಎನ್ನುವ ಉತ್ತರ ನೀಡಿದ್ದಾರೆ

68
ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ಎಬಿಡಿ ಮೊದಲು ಗೂಗಲ್ ಮಾಡುವುದು?

ನೀವು ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ನೀವು ಗೂಗಲ್‌ನಲ್ಲಿ ಹುಡುಕುವುದೇನು ಎನ್ನುವ ಪ್ರಶ್ನೆಗೆ, ಎಲ್ಲಿ ಹತ್ತಿರದಲ್ಲಿ ಒಳ್ಳೆಯ ಚಿಕನ್ ಟಿಕ್ಕಾ ಸಿಗುತ್ತೆ ಎನ್ನುವುದನ್ನು ಹುಡುಕುತ್ತೇನೆ ಎಂದಿದ್ದಾರೆ.

78
ಎಬಿಡಿ ಕೊಹ್ಲಿಯಾಗಿ ಬದಲಾದರೇ?

ಇನ್ನು ಅಕಸ್ಮಾನ್ ನೀವು ಬೆಳಗ್ಗೆ ಏಳುವಾಗ ವಿರಾಟ್ ಕೊಹ್ಲಿಯಾಗಿ ಬದಲಾಗಿದ್ದರೇ ಮೊದಲು ನೀವು ಮಾಡುವ ಕೆಲಸ ಏನು ಎನ್ನುವ ಪ್ರಶ್ನೆಗೆ ಎಬಿಡಿ, ಮಿಸ್ಟರ್ 360ಗೆ ಕಾಲ್ ಮಾಡ್ತೇನೆ ಎಂದಿದ್ದಾರೆ.

88
ಎಬಿಡಿ ನಿಕ್‌ನೇಮ್ ಮಿಸ್ಟರ್ 360

ಮಿಸ್ಟರ್ 360 ಎನ್ನುವುದು ಎಬಿ ಡಿವಿಲಿಯರ್ಸ್‌ಗೆ ಇರುವ ನಿಕ್ ನೇಮ್ ಆಗಿದೆ. ಇನ್ನು ವಿರಾಟ್ ಕೊಹ್ಲಿ- ಎಬಿ ಡಿವಿಲಿಯರ್ಸ್ ಗೆಳೆತನದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ವೇ?

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories