ಬೆಂಗಳೂರು: ಭಾರತ ಮಹಿಳಾ ತಂಡವು ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಬೀಗಿದೆ. ಇನ್ನು ಟೂರ್ನಿಯಲ್ಲಿ ಭಾರತ ಪರ ಗರಿಷ್ಠ ರನ್ ಬಾರಿಸುವ ಮೂಲಕ ಚಾಂಪಿಯನ್ ಆಗಲು ಮಹತ್ವದ ಪಾತ್ರ ವಹಿಸಿದ ಭಾರತದ ಕ್ರಿಕೆಟ್ ಕ್ರಶ್ ಸ್ಮೃತಿ ಮಂಧನಾಗೆ ಕನ್ನಡದ ಈ ಹಾಡು ಅಂದ್ರೆ ಪಂಚಪ್ರಾಣವಂತೆ.
ತವರಿನಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ, ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
28
ಮಹಿಳಾ ವಿಶ್ವಕಪ್‌ನಲ್ಲಿ ಮಂಧನಾ ಭಾರತ ಪರ ಗರಿಷ್ಠ ರನ್ ಸಾಧಕಿ
ಇನ್ನು ಭಾರತ ಚಾಂಪಿಯನ್ ಆಗುವಲ್ಲಿ ಸ್ಮೃತಿ ಮಂಧನಾ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ಪರ 9 ಪಂದ್ಯಗಳನ್ನಾಡಿದ ಎಡಗೈ ಬ್ಯಾಟರ್, 54.25ರ ಬ್ಯಾಟಿಂಗ್ ಸರಾಸರಿಯಲ್ಲಿ 434 ರನ್ ಸಿಡಿಸಿದರು. ಈ ಮೂಲಕ ಭಾರತ ಪರ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದರು.
38
ಮಹಿಳಾ ವಿಶ್ವಕಪ್‌ನಲ್ಲಿ ಅಬ್ಬರಿಸಿದ್ದ ಮಂಧನಾ
ಸ್ಮೃತಿ ಮಂಧನಾ, ವಿಶ್ವಕಪ್ ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಆರಂಭ ಒದಗಿಸಿಕೊಟ್ಟರು. ಸ್ಮೃತಿ ಬ್ಯಾಟ್‌ನಿಂದ ಒಂದು ಶತಕ ಹಾಗೂ ಎರಡು ಆಕರ್ಷಕ ಅರ್ಧಶತಕಗಳು ಮೂಡಿ ಬಂದವು. ಇದು ಭಾರತ ಬೃಹತ್ ಮೊತ್ತ ಕಲೆಹಾಕಲು, ಸವಾಲಿನ ಗುರಿ ಬೆನ್ನತ್ತಲು ನೆರವಾಯಿತು.
ಇನ್ನು ಐಸಿಸಿ ಟೂರ್ನಿ ಮುಗಿದ ಬೆನ್ನಲ್ಲೇ ಸ್ಟೈಲೀಷ್ ಕ್ರಿಕೆಟರ್ ಮಂಧನಾ, ಮ್ಯೂಸಿಕ್ ಡೈರೆಕ್ಟರ್ ಪಲಾಷ್ ಮುಚ್ಚಲ್ ಅವರ ಜತೆ ಸದ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ವಿಚಾರ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
58
ಕನ್ನಡದ ಹಾಡು ಆಯ್ದುಕೊಂಡ ಮಂಧನಾ
ಇನ್ನು ಇದೆಲ್ಲದರ ನಡುವೆ ಸ್ಮೃತಿ ಮಂಧನಾ, ಪಂದ್ಯ ಮುಕ್ತಾಯದ ಬಳಿಕ ಸಂದರ್ಶಕಿಯೊಬ್ಬರು ಕೇಳಿದ ನಿಮ್ಮ ನೆಚ್ಚಿನ ಹಾಡು ಯಾವುದು ಎನ್ನುವ ಪ್ರಶ್ನೆಗೆ ಕನ್ನಡದ ಈ ಫೇಮರ್ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಾರೆ.
68
ಸ್ಮೃತಿ ಮಂಧನಾಗೆ ಕನ್ನಡ ಹಾಡು ಇಷ್ಟ
ಹೌದು, ಮಂಧನಾಗೆ ಸಂದರ್ಶಕಿ, ನೀವು ಬ್ಯಾಟಿಂಗ್ ಮಾಡಲು ಪ್ರತಿ ಬಾರಿ ಮೈದಾನಕ್ಕಿಳಿಯುವಾಗ ಯಾವ ಹಾಡು ಕೇಳಲು ಬಯಸುತ್ತೀರಾ ಎಂದು ಪ್ರಶ್ನಿಸುತ್ತಾರೆ.
78
ಕೆಜಿಎಫ್ ಸಿನಿಮಾದ ತೂಫಾನ್ ಹಾಡಂದ್ರೆ ಇಷ್ಟ
ಆಗ ಸ್ಮೃತಿ ಮಂಧನಾ, ಕನ್ನಡದ ಕೆಜಿಎಫ್ ಸಿನಿಮಾದ, ತೂಫಾನ್ ಸಾಂಗ್ ಕೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
88
ಆರ್‌ಸಿಬಿ ನಾಯಕಿ ಮಂಧನಾ
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸ್ಮೃತಿ ಮಂಧನಾ ಆರ್‌ಸಿಬಿ ತಂಡವನ್ನು ನಾಯಕಿಯಾಗಿ ಮುನ್ನಡೆಸುತ್ತಿದ್ದು, ಎರಡನೇ ಆವೃತ್ತಿಯಲ್ಲೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಸ್ಮೃತಿ ಮಂಧನಾ ಆರ್‌ಸಿಬಿ ಜತೆಗೆ ಬೆಂಗಳೂರಿನ ಬಗ್ಗೆ ಒಳ್ಳೆಯ ಒಲವು ಹೊಂದಿದ್ದಾರೆ.