ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಆರ್‌ಸಿಬಿ ತಂಡಕ್ಕೆ ಶಾಕ್ ಎದುರಾಗಿದೆ. ಐಪಿಎಲ್ ಸ್ಟಾರ್ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತುಗೊಂಡಿದ್ದಾರೆ. ಜೊತೆಗೆ ಪಂದ್ಯದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ.
ಐಪಿಎಲ್ 2026 ಟೂರ್ನಿಯಲ್ಲಿ ಆರ್‌ಸಿಬಿ ಸತತ 2ನೇ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಅದ್ಭುತ ಹೋರಾಟ ನೀಡಿದ ಆರ್‌ಸಿಬಿ ತಂಡ ಗುಜರಾತ್ ಟೈಟಾನ್ಸ್ ಮಣಿಸಿ ಚಾಂಪಿಯನ್ ಆಗಿದೆ. ಆರ್‌ಸಿಬಿ ಅಭಿಮಾನಿಗಳು, ಆಟಗಾರರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಈ ಗೆಲುವನ್ನು ಸಂಭ್ರಮಿಸಿದ್ದಾರೆ. ಆದರೆ ಇದರ ಬೆನ್ನಲ್ಲೇ ಆರ್‌ಸಿಬಿ ಸ್ಟಾರ್ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತುಗೊಂಡಿದ್ದಾರೆ.
26
ಅಂಪೈರ್‌ನತ್ತ ಐಸ್ ಬ್ಯಾಗ್ ಎಸೆದ ಟಿಮ್ ಡೇವಿಡ್
ಆರ್‌ಸಿಬಿ ಫೈನಲ್ ಪಂದ್ಯದ ಗೆಲುವಿನಲ್ಲಿ ಟಿಮ್ ಡೇವಿಡ್ ಪಾತ್ರವೂ ಪ್ರಮುಖವಾಗಿದೆ. 17 ಎಸೆತದಲ್ಲಿ 24 ರನ್ ಕೊಡುಗೆ ನೀಡಿದ್ದರು. ಆದರೆ ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ ವೇಳೆ ಅಂಪೈರ್ ನಿತಿನ್ ಮೆನೊನ್ ನೇರವಾಗಿ ಐಸ್ ಬ್ಯಾಗ್ ಎಸೆದು ಆಕ್ರೋಶ ಹೊರಹಾಕಿದ್ದರು. ನಿಯಮ ಉಲ್ಲಂಘಿಸಿದ ಟಿಮ್ ಡೇವಿಡ್‌ಗೆ ಅಮಾನತು ಶಿಕ್ಷೆ ನೀಡಲಾಗಿದೆ.
36
10ನೇ ಓವರ್‌ನಲ್ಲಿ ಘಟನೆ
ಗುಜರಾತ್ ಬ್ಯಾಟಿಂಗ್ ವೇಳೆ 10 ನೇ ಓವರ್‌ನಲ್ಲಿ ವಿಕೆಟ್ ಪತನಗೊಂಡಿತ್ತು. ಈ ವೇಳೆ ಸಂಭ್ರಮಾಚರಣೆ ಜೊತೆ ಆಕ್ರೋಶ ಹೊರಹಾಕಿದ ಟಿಮ್ ಡೇವಿಡ್ ತನ್ನಲ್ಲಿದ್ದ ಐಸ್ ಬ್ಯಾಗನ್ನು ಅಂಪೈರ್ ನಿತಿನ್ ಮೆನೊನ್‌ನತ್ತ ಎಸೆದಿದ್ದಾರೆ. ಇದು ಐಪಿಎಲ್ ಕೋಡ್ ಆಫ್ ಕಂಡಕ್ಟ್ ಆರ್ಟಿಕಲ್ 2.9 ನಿಯಮದ ಉಲ್ಲಂಘನೆಯಾಗಿದೆ. ಎರಡು ಡಿಮೆರಿಟ್ ಪಾಯಿಂಟ್ಸ್ ಪಡೆದ ಟಿಮ್ ಡೇವಿಡ್‌ಗೆ ಐಪಿಎಲ್ ಟೂರ್ನಿಯ ಒಂದು ಪಂದ್ಯದಿಂದ ಅಮಾನತು ಶಿಕ್ಷೆ ನೀಡಲಾಗಿದೆ.
ಟಿಮ್ ಡೇವಿಡ್ ಈ ಟೂರ್ನಿಯಲ್ಲಿ ಹಲವು ಬಾರಿ ಐಪಿಎಲ್ ಕೋಡ್ ಆಫ್ ಕಂಡಕ್ಟ್ ನಿಯಮ ಉಲ್ಲಂಘಿಸಿದ್ದಾರೆ. 20ನೇ ಪಂದ್ಯ, 54ನೇ ಪಂದ್ಯದಲ್ಲಿ ನಿಯಮ ಉಲ್ಲಂಘಸಿದ್ದಾರೆ. ಫೈನಲ್ ಪಂದ್ಯದ ಉಲ್ಲಂಘನೆ ಸೇರಿ ಒಟ್ಟು 5 ಡಿಮೇರಿಟ್ ಪಾಯಿಂಟ್ಸ್ ಪಡೆದಿದ್ದಾರೆ. ಐದು ಡಿಮೆರಿಟ್ಸ್ ಪಡೆದ ಆಟಗಾರನಿಗೆ ಒಂದು ಪಂದ್ಯದಿಂದ ಅಮಾನತು ಮಾಡಲಾಗುತ್ತದೆ. ಜೊತೆಗೆ ಪಂದ್ಯದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ.
56
ತಪ್ಪು ಒಪ್ಪಿಕೊಂಡ ಟಿಮ್ ಡೇವಿಡ್
ತಾವು ಮಾಡಿದ ತಪ್ಪನ್ನು ಟಿಮ್ ಡೇವಿಡ್ ಒಪ್ಪಿಕೊಂಡಿದ್ದಾರೆ. ಬಳಿಕ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ದಂಡ ಹಾಗೂ ಅಮಾನತು ಶಿಕ್ಷೆ ವಿಧಿಸಿದ್ದಾರೆ. ಸಿಂಗಾಪುರ ಮೂಲದ ಟಿಮ್ ಡೇವಿಡ್, ಆಸ್ಟ್ರೇಲಿಯಾ ತಂಡದ ಪರ ಆಡುತ್ತಿದ್ದಾರೆ. ಇದೀಗ ಆರ್‌ಸಿಬಿ ಮೂಲಕ ಭಾರತದಲ್ಲಿ ಸ್ಟಾರ್ ಆಗಿ ಮಿಂಚಿದ್ದಾರೆ.
66
ಮುಂದಿನ ಟೂರ್ನಿಯಲ್ಲಿ ಒಂದು ಪಂದ್ಯದಿಂದ ಟಿಮ್ ಡೇವಿಡ್ ಹೊರಕ್ಕೆ
ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಟಿಮ್ ಡೇವಿಡ್ ಶಿಕ್ಷೆ ಕಾರಣದಿಂದ ಒಂದು ಪಂದ್ಯದಿಂದ ಹೊರಗುಳಿಯಬೇಕಿದೆ. 2027ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಅನಿವಾರ್ಯವಾಗಿ ಮಿಡ್ಲ್ ಆರ್ಡರ್‌ನಲ್ಲಿ ಬದಲಾವಣೆ ಮಾಡಬೇಕಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.