ಕಾವ್ಯ ಮಾರನ್ ಸೈಡ್‌ಲೈನ್, IPL ಹೊಸ ಕ್ರಶ್ 'ಅನನ್ಯಾ ಬಿರ್ಲಾ'! ₹16,600 ಕೋಟಿ RCB ಮಾಲೀಕನ ಮಗಳ ಹವಾ ಹೇಗಿದೆ ಗೊತ್ತಾ?

Published : Jun 01, 2026, 08:42 PM IST

ಆರ್‌ಸಿಬಿಯ 'ಲಕ್ಕಿ ಚಾರ್ಮ್' ಅನನ್ಯಾ ಬಿರ್ಲಾ (RCB Lucky Charm Ananya Birla) ಯಾರು? ಕಾವ್ಯ ಮಾರನ್‌ಗೆ (Kavya Maran) ಪೈಪೋಟಿ ನೀಡುತ್ತಿರುವ ಈ ಹೊಸ 'ನ್ಯಾಷನಲ್ ಕ್ರಶ್' (IPL New national Crush) ಮತ್ತು ಯಶಸ್ವಿ ಉದ್ಯಮಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.

PREV
17

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಂಗಳದಲ್ಲಿ ಈಗ ಹೊಸ ಸೆನ್ಸೇಷನ್ ಶುರುವಾಗಿದೆ. ಇಲ್ಲಿಯವರೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕಿ ಕಾವ್ಯ ಮಾರನ್ ಅವರನ್ನು 'ಐಪಿಎಲ್ ನ್ಯಾಷನಲ್ ಕ್ರಶ್' ಎಂದು ಕರೆಯಲಾಗುತ್ತಿತ್ತು. ಆದರೆ, ಈಗ ಆ ಸ್ಥಾನಕ್ಕೆ ಪ್ರಬಲ ಪೈಪೋಟಿ ನೀಡಲು ಬಂದಿದ್ದಾರೆ ಅನನ್ಯಾ ಬಿರ್ಲಾ.

27

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಸುಮಾರು 16,600 ಕೋಟಿ ರೂಪಾಯಿಗೆ ಖರೀದಿಸಿದ ನಂತರ, ಮಾಲೀಕ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರಿ ಅನನ್ಯಾ ಬಿರ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಾರೆ.

37

ಆರ್‌ಸಿಬಿಯ 'ಲಕ್ಕಿ ಚಾರ್ಮ್':

ಆರ್‌ಸಿಬಿ ಪಂದ್ಯಗಳ ವೇಳೆ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಅನನ್ಯಾ ಬಿರ್ಲಾ ಅವರನ್ನು ಅಭಿಮಾನಿಗಳು ತಂಡದ 'ಲಕ್ಕಿ ಚಾರ್ಮ್' ಎಂದು ಕರೆಯುತ್ತಿದ್ದಾರೆ. ಈ ಐಪಿಎಲ್ ಸೀಸನ್ ಆರಂಭವಾದಾಗಿನಿಂದ ಅನನ್ಯಾ ಅವರ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿವೆ. ಅವರ ಮುಗ್ಧ ನೋಟ ಮತ್ತು ಸ್ಟೈಲಿಶ್ ಅಪಿಯರೆನ್ಸ್ ಅಭಿಮಾನಿಗಳ ಮನಗೆದ್ದಿದ್ದು, ನೆಟ್ಟಿಗರು ಇವರನ್ನು ಹೊಸ 'ನ್ಯಾಷನಲ್ ಕ್ರಶ್' ಎಂದು ಬಣ್ಣಿಸುತ್ತಿದ್ದಾರೆ.

47

ರಾತ್ರೋರಾತ್ರಿ ಹೆಚ್ಚಿದ ಫಾಲೋವರ್ಸ್:

ಅನನ್ಯಾ ಬಿರ್ಲಾ ಅವರ ಜನಪ್ರಿಯತೆ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ, ಐಪಿಎಲ್ ಆರಂಭಕ್ಕೂ ಮುನ್ನ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಕೇವಲ 4.85 ಲಕ್ಷ ಇತ್ತು. ಆದರೆ ಈಗ ಅದು ಬರೋಬ್ಬರಿ 3.6 ಮಿಲಿಯನ್ (36 ಲಕ್ಷ) ದಾಟಿದೆ. ಅಭಿಮಾನಿಗಳ ಪುಟಗಳು (Fan Pages) ಮತ್ತು ಮೀಮ್ಸ್‌ಗಳ ಮೂಲಕ ಅನನ್ಯಾ ಅವರ ಹವಾ ಇಡೀ ದೇಶಾದ್ಯಂತ ಹರಡಿದೆ.

57

ಕೇವಲ ಸುಂದರಿಯಲ್ಲ, 22,000 ಕೋಟಿಯ ಒಡತಿ!

ಅನನ್ಯಾ ಬಿರ್ಲಾ ಕೇವಲ ಶ್ರೀಮಂತ ಉದ್ಯಮಿಯ ಮಗಳಷ್ಟೇ ಅಲ್ಲ, ಸ್ವತಃ ಒಬ್ಬ ಯಶಸ್ವಿ ಉದ್ಯಮಿ. ಅವರು ಸುಮಾರು 22,000 ಕೋಟಿ ರೂಪಾಯಿ ಮೌಲ್ಯದ ವ್ಯವಹಾರವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

67

ಗಾಯನ ಮತ್ತು ಸಂಗೀತದಲ್ಲೂ ಆಸಕ್ತಿ ಹೊಂದಿರುವ ಇವರು, ಆದಿತ್ಯ ಬಿರ್ಲಾ ಸಮೂಹದ ಪ್ರಮುಖ ನಿರ್ಧಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಉದ್ಯಮ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅನನ್ಯಾ, ಈಗ ಐಪಿಎಲ್ ಮೂಲಕ ಮನೆಮಾತಾಗಿದ್ದಾರೆ.

77

ಒಟ್ಟಾರೆಯಾಗಿ, ಮೈದಾನದಲ್ಲಿ ಆರ್‌ಸಿಬಿ ಆಟಗಾರರ ಪ್ರದರ್ಶನ ಒಂದೆಡೆಯಾದರೆ, ಗ್ಯಾಲರಿಯಲ್ಲಿ ಅನನ್ಯಾ ಬಿರ್ಲಾ ಅವರ ಉಪಸ್ಥಿತಿ ತಂಡಕ್ಕೆ ಹೊಸ ಗ್ಲಾಮರ್ ತಂದಿದೆ. ಇನ್ನು ಆರ್‌ಸಿಬಿ ತಂಡದ ಬಗ್ಗೆಯೂ ಅನನ್ಯ ಬಿರ್ಲಾಗೆ ಭಾರೀ ಒಲವಿದೆ. ಆರ್‌ಸಿಬಿ ಅಭಿಮಾನಿಗಳ ಬೆಂಬಲವನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories