ಇತ್ತೀಚೆಗಷ್ಟೇ ಐಪಿಎಲ್‌ಗೆ ನಿವೃತ್ತಿ ಘೋಷಿಸಿರುವ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ಯುಎಇ ದೇಶದ ಇಂಟರ್‌ನ್ಯಾಷನಲ್ ಲೀಗ್ ಟಿ20(ಐಎಲ್‌ಟಿ20) ಆಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
29
ಇದೇ ಸೆಪ್ಟೆಂಬರ್ 30ರಂದು ಯುಎಇ ದೇಶದ ಇಂಟರ್‌ನ್ಯಾಷನಲ್ ಲೀಗ್ ಟಿ20ನ ಆಟಗಾರರ ಹರಾಜು ನಡೆಯಲಿದ್ದು, ಚೆನ್ನೈ ಮೂಲದ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹರಾಜಿಗೆ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿದ್ದಾರೆ ಎಂದು ವರದಿಯಾಗಿದೆ.
39
ಈ ಬಗ್ಗೆ ಅಶ್ವಿನ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಆಯೋಜಕರ ಜೊತೆ ಮಾತನಾಡುತ್ತಿದ್ದೇನೆ. ನಾನು ಈಗಾಗಲೇ ಐಎಲ್‌ಟಿ20 ಟೂರ್ನಿಯ ಆಟಗಾರರ ಹರಾಜಿನಲ್ಲಿ ಹೆಸರು ನೋಂದಾಯಿಸಿದ್ದೇನೆ, ನನ್ನನ್ನು ಯಾರಾದರೂ ಖರೀದಿಸುವ ವಿಶ್ವಾಸವಿದೆ’ ಎಂದಿದ್ದಾರೆ.
ಒಂದು ದಶಕಗಳ ಕಾಲ ಭಾರತ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ರವಿಚಂದ್ರನ್ ಅಶ್ವಿನ್, ಕೆಲದಿನಗಳ ಹಿಂದಷ್ಟೇ ಐಪಿಎಲ್‌ಗೂ ವಿದಾಯ ಘೋಷಿಸಿದ್ದರು. ಇದೀಗ 38 ವರ್ಷದ ಅಶ್ವಿನ್ ಜಾಗತಿಕ ಮಟ್ಟದ ವಿದೇಶಿ ಟೂರ್ನಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.
59
ಐಎಲ್‌ಟಿ20 ಟೂರ್ನಿಯಲ್ಲಿ ಈಗಾಗಲೇ ರಾಬಿನ್ ಉತ್ತಪ್ಪ, ಯೂಸುಫ್ ಪಠಾಣ್ ಹಾಗೂ ಅಂಬಟಿ ರಾಯುಡು ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಈ ಸಾಲಿಗೆ ಸೇರಲು ರವಿಚಂದ್ರನ್ ಅಶ್ವಿನ್ ತುದಿಗಾಲಿನಲ್ಲಿ ನಿಂತಿದ್ದಾರೆ.
69
ಭಾರತದ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಳಿಕವಷ್ಟೇ ಭಾರತ ಪುರುಷ ಕ್ರಿಕೆಟಿಗರು ವಿದೇಶಿ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಕಳೆದ ಆಗಸ್ಟ್ 27ರಂದು ಐಪಿಎಲ್ ಸೇರಿದಂತೆ ಭಾರತದ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಅಶ್ವಿನ್ ನಿವೃತ್ತಿ ಘೋಷಿಸಿದ್ದರು.
79
ರವಿಚಂದ್ರನ್ ಅಶ್ವಿನ್ ಭಾರತ ಕಂಡ ಅತ್ಯಂತ ಯಶಸ್ವಿ ಸ್ಪಿನ್ನರ್‌ಗಳಲ್ಲಿ ಒಬ್ಬರೆನಿಸಿದ್ದು, ಅನಿಲ್ ಕುಂಬ್ಳೆ(619) ಬಳಿಕ ಟೀಂ ಇಂಡಿಯಾ ಪರ ಎರಡನೇ ಅತಿಹೆಚ್ಚು ಟೆಸ್ಟ್ ವಿಕೆಟ್(537) ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
89
ಕಳೆದ ಡಿಸೆಂಬರ್‌ನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮಧ್ಯದಲ್ಲೇ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.
99
ಐಎಲ್‌ಟಿ20ನ ಮುಂದಿನ ಆವೃತ್ತಿಯು ಡಿಸೆಂಬರ್ 2ರಿಂದ ಜನವರಿ 4ರ ವರೆಗೆ ನಡೆಯಲಿದೆ. ಒಟ್ಟು 6 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.