ಬೌಲರ್‌ಗಳನ್ನು ಚಚ್ಚಿ ಕೆಡಗುವ ಸಂಜು ಸ್ಯಾಮ್ಸನ್‌ ಲವ್‌ ಸ್ಟೋರಿ ಹೇಗಿದೆ ಗೊತ್ತಾ?

Published : May 29, 2022, 05:44 PM IST

Rajasthan Royals skipper Sanju Samson Love Story: ಇಂಡಿಯನ್ ಪ್ರೀಮಿಯರ್ ಲೀಗ್ ( (IPL2022) 2022ರ ಅಂತಿಮ ಪಂದ್ಯ ಗುಜರಾತ್ ಟೈಟಾನ್ಸ್ (Gujarat Titans) ಮತ್ತು ರಾಜಸ್ಥಾನ್ ರಾಯಲ್ಸ್ (Rajasthan Royals) ನಡುವೆ ನಡೆಯಲಿದೆ. ಶುಕ್ರವಾರವೇ ರಾಜಸ್ಥಾನ್ ರಾಯಲ್ಸ್ ರಾಯಲ್ ಚಾಲೆಂಜರ್ಸ್ (Royal challengers Bangalore) ಬೆಂಗಳೂರು ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ. ಯುವ ನಾಯಕ ಸಂಜು ಸ್ಯಾಮ್ಸನ್ (Sanju Samson) ಮತ್ತೊಮ್ಮೆ ತಮ್ಮ ತಂಡದ  ಮುನ್ನಡೆಸುವ ಸಾಮರ್ಥ್ಯ ತೋರಿಸಿದ್ದಾರೆ. 2018ರಲ್ಲಿ ಮದುವೆಯಾದ ಸಂಜು ಸ್ಯಾಮ್ಸನ್ ಅವರ ಅವರ ಕ್ಯೂಟ್ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ?  

PREV
19
ಬೌಲರ್‌ಗಳನ್ನು ಚಚ್ಚಿ ಕೆಡಗುವ ಸಂಜು ಸ್ಯಾಮ್ಸನ್‌ ಲವ್‌ ಸ್ಟೋರಿ ಹೇಗಿದೆ ಗೊತ್ತಾ?

ಯುವ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ 22 ಡಿಸೆಂಬರ್ 2018 ರಂದು ಚಾರುಲತಾ ರಮೇಶ್ ಎಂಬ ಹುಡುಗಿಯನ್ನು ವಿವಾಹವಾದರು. ಚಾರುಲತಾ ಮತ್ತು ಸಂಜು ಇಬ್ಬರೂ ಕೇರಳದ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದಾರೆ. ಇಲ್ಲಿಂದ ಶುರುವಾಯಿತು ಇಬ್ಬರ ಪ್ರೇಮಕಥೆ.


 

29

ವಾಸ್ತವವಾಗಿ, ಸಂಜು ತನ್ನ ಸಹಪಾಠಿ ಚಾರುಲತಾಳನ್ನು ನೋಡಿ ತನ್ನ ಹೃದಯವನ್ನು ಕಳೆದುಕೊಂಡಿದ್ದರು ಮತ್ತು ತಡರಾತ್ರಿಯಲ್ಲಿ ಸಂಜುಮಾಡಿದ ಕೆಲಸ ಚಾರುಲತಾಳನ್ನೂ ದಿಗ್ಭ್ರಮೆಗೊಳಿಸಿತ್ತು. ಸಂಜು ಸ್ಯಾಮ್ಸನ್ ಅವರು ಆಗಸ್ಟ್ 22, 2013 ರಂದು 11:11ಕ್ಕೆ ಚಾರುಲತಾ ಅವರಿಗೆ  'ಹಾಯ್' ಎಂದು ಸಂದೇಶ ಕಳುಹಿಸಿದರು .


 

39

ಆದರೆ ಚಾರು ಸಂಜು ಅವರ ಸಂದೇಶಕ್ಕೆ ಪ್ರತಿಕ್ರಿಯಿಸಲಿಲ್ಲ. ಇದರಿಂದ ವಿಚಲಿತರಾದ ಸಂಜು ನೇರವಾಗಿ ಕಾಲೇಜಿಗೆ ತೆರಳಿ ಆಕೆಯನ್ನು ಭೇಟಿಯಾಗಿ ಚಾರುಲತಾಗೆ ಮನದಾಳದ ಮಾತು ಹೇಳಿದರು ಎಂಬ ವಿಷಯವನ್ನು ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು.

49

ಚಾರುಲತಾ ಕೇರಳದ ತಿರುವನಂತಪುರಂ ಮೂಲದವರು. ಅವರು ಅಲ್ಲಿಂದ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು ಮತ್ತು ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದರು. ಇದಾದ ಬಳಿಕ ಎಚ್‌ಆರ್‌ನಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.

59

ಮದುವೆಗೂ ಮುನ್ನ ಸಂಜು ಮತ್ತು ಚಾರುಲತಾ ರಮೇಶ್ 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಈ ಸಮಯದಲ್ಲಿ, ಅವರು ತಮ್ಮ ಸಂಬಂಧವನ್ನು ತುಂಬಾ ವೈಯಕ್ತಿಕವಾಗಿ ಇಟ್ಟುಕೊಂಡಿದ್ದರು ಮತ್ತು ತಮ್ಮ ಸಂಬಂಧವನ್ನು ಮಾಧ್ಯಮದ ಮುಂದೆ ಬರಲು ಬಿಡಲಿಲ್ಲ.

69

22 ಡಿಸೆಂಬರ್ 2018 ರಂದು, ಚಾರು ಮತ್ತು ಸಂಜು ಕೇವಲ 30 ಜನರ ಸಮ್ಮುಖದಲ್ಲಿ ಅತ್ಯಂತ ಸರಳ ರೀತಿಯಲ್ಲಿ ವಿವಾಹವಾದರು. ಸಂಜು ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು.


 

79

ಚಾರುಲತಾ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. ಆದರೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ Instagram ಒಟ್ಟು 41.1K ಅನುಯಾಯಿಗಳು ಹಾಗೂ ಅವರ ಖಾತೆಯಲ್ಲಿ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

89

ಮತ್ತೊಂದೆಡೆ, ಸಂಜು ಸ್ಯಾಮ್ಸನ್ ಅವರಿಗೆ ಐಪಿಎಲ್ 2022 ರ ಸೀಸನ್‌ ಆದೃಷ್ಟದಿಂದ ಕೂಡಿದೆ ಅವರ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಉತ್ತಮ ಲಯದಲ್ಲಿ ಕಾಣುತ್ತಿದೆ ಮತ್ತು ಶುಕ್ರವಾರವೇ, ರಾಜಸ್ಥಾನ್ ರಾಯಲ್ಸ್ RCB ಅನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಇಂದು ಫೈನಲ್‌ ಪಂದ್ಯವನ್ನು ಗುಜರಾತ್‌ ಟೈಟನ್ಸ್‌ ವಿರುದ್ಧ ಆಡಲಿದ್ದಾರೆ.


 

99

ಇನ್ನು ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಎರಡೂ ತಂಡಗಳು ಪಾಯಿಂಟ್‌ಗಳ ಪಟ್ಟಿಯಲ್ಲಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ ಮತ್ತು ರಾಜಸ್ಥಾನ್ ರಾಯಲ್ಸ್ 16 ಪಂದ್ಯಗಳಲ್ಲಿ 10 ಅನ್ನು ಗೆದ್ದಿದೆ.

Read more Photos on
click me!

Recommended Stories