IPL 2024: RCB ಬಲಿಷ್ಠ ಆಡುವ ಹನ್ನೊಂದರ ಬಳಗ ಪ್ರಕಟ..! ಯಾರಿಗೆಲ್ಲಾ ಸ್ಥಾನ?

First Published | Mar 21, 2024, 4:35 PM IST

ಬೆಂಗಳೂರು: ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ 17ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಜ್ಜಾಗಿದೆ. ಈ ಆವೃತ್ತಿಯ ಐಪಿಎಲ್ ಟೂರ್ನಿಗೆ ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದೆ. ಈ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ನೀವೇ ನೋಡಿ.
 

1. ವಿರಾಟ್ ಕೊಹ್ಲಿ:

ಆರ್‌ಸಿಬಿ ರನ್‌ ಮಷೀನ್ ವಿರಾಟ್ ಕೊಹ್ಲಿ, ತಂಡದ ಬ್ಯಾಟಿಂಗ್ ಆಧಾರಸ್ತಂಭ. ಆರ್‌ಸಿಬಿ ಪರ ಕೊಹ್ಲಿ 237 ಪಂದ್ಯಗಳನ್ನಾಡಿ 50 ಫಿಫ್ಟಿ 7 ಶತಕ ಸಹಿತ 7,263 ರನ್ ಬಾರಿಸಿದ್ದಾರೆ. ಕೊಹ್ಲಿ ಮತ್ತೊಮ್ಮೆ ಆರಂಭಿನಾಗಿ ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡಲು ಎದುರು ನೋಡುತ್ತಿದ್ದಾರೆ.
 

2. ಫಾಫ್ ಡು ಪ್ಲೆಸಿಸ್:

ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಕಳೆದೆರಡು ಆವೃತ್ತಿಯಲ್ಲೂ ತಂಡದ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದಾರೆ. ಕೊಹ್ಲಿ ಜತೆಗೆ ಉತ್ತಮ ಆರಂಭ ಒದಗಿಸಿಕೊಡುವುದರ ಜತೆಗೆ ನಾಯಕನಾಗಿ ತಂಡಕ್ಕೆ ಕಪ್ ಗೆಲ್ಲಿಸಿಕೊಡಬೇಕಾದ ಸವಾಲು ಫಾಫ್ ಮುಂದಿದೆ.
 

Latest Videos


3. ರಜತ್ ಪಾಟೀದಾರ್:

ಆರ್‌ಸಿಬಿ ತಂಡದ ಪ್ರತಿಭಾನ್ವಿತ ಬ್ಯಾಟರ್ ರಜತ್ ಪಾಟೀದಾರ್, ಗಾಯದ ಸಮಸ್ಯೆಯಿಂದಾಗಿ ಕಳೆದ ಆವೃತ್ತಿಯ ಐಪಿಎಲ್‌ನಿಂದ ಹೊರಗುಳಿದಿದ್ದರು. ಇದೀಗ ದೇಶಿ ಕ್ರಿಕೆಟ್‌ನಲ್ಲಿ ಮಿಂಚಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿರುವ ಪಾಟೀದಾರ್, ಮೂರನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 

4. ಕ್ಯಾಮರೋನ್ ಗ್ರೀನ್:

ಮುಂಬೈ ಇಂಡಿಯನ್ಸ್ ತಂಡದಿಂದ ದಾಖಲೆಯ ಮೊತ್ತಕ್ಕೆ ಆಸೀಸ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಆರ್‌ಸಿಬಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಆರ್‌ಸಿಬಿ ಕಪ್ ಗೆಲ್ಲಬೇಕಿದ್ದರೆ ಗ್ರೀನ್ ಅಮೋಘ ಆಲ್ರೌಂಡ್ ಆಟ ಪ್ರದರ್ಶಿಸಬೇಕಿದೆ.
 

5. ಗ್ಲೆನ್ ಮ್ಯಾಕ್ಸ್‌ವೆಲ್:

ಆಸೀಸ್ ಮೂಲದ ಮತ್ತೋರ್ವ ಆಲ್ರೌಂಡರ್, ಆರ್‌ಸಿಬಿ ಸ್ಪೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಏಕಾಂಗಿಯಾಗಿ ಪಂದ್ಯದ ದಿಕ್ಕು ಬದಲಿಸುವ ಕ್ಷಮತೆ ಹೊಂದಿರುವ ಆಟಗಾರ. ಮ್ಯಾಕ್ಸಿ ಒಳ್ಳೆಯ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

6. ದಿನೇಶ್ ಕಾರ್ತಿಕ್:

ಆರ್‌ಸಿಬಿ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಪಾಲಿಗೆ ಇದೆ ಕೊನೆಯ ಐಪಿಎಲ್‌. ಆರ್‌ಸಿಬಿಗೆ ಕಪ್ ಗೆದ್ದುಕೊಟ್ಟು ಐಪಿಎಲ್‌ಗೆ ವಿದಾಯ ಹೇಳುವ ಲೆಕ್ಕಾಚಾರದಲ್ಲಿದ್ದಾರೆ ಡಿಕೆ ಬಾಸ್.
 

7. ಮಹಿಪಾಲ್ ಲೋಮ್ರರ್:

ಆರ್‌ಸಿಬಿ ತಂಡದ ಮತ್ತೋರ್ವ ಆಲ್ರೌಂಡರ್ ಮಹಿಪಾಲ್ ಲೋಮ್ರಾರ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿ ಆಸರೆಯಾಗುವುದರ ಜತೆಗೆ ಉಪಯುಕ್ತ ಬೌಲಿಂಗ್ ಕೂಡಾ ಸಂಘಟಿಸುವ ಸಾಮರ್ಥ್ಯ ಹೊಂದಿದ್ದಾರೆ.
 

8. ಅಲ್ಜಾರಿ ಜೋಸೆಫ್:

ವೆಸ್ಟ್ ಇಂಡೀಸ್ ಮೂಲದ ನೀಳಕಾಯದ ವೇಗಿ ಅಲ್ಜಾರಿ ಜೋಸೆಫ್ ಹೊಸ ಚೆಂಡಿನಲ್ಲಿ ಮಾರಕ ದಾಳಿ ನಡೆಸಬಲ್ಲರು. ಜೋಸೆಫ್ ಪವರ್‌ಪ್ಲೇನಲ್ಲೇ ವಿಕೆಟ್ ಕಬಳಿಸಿದರೆ ಆರ್‌ಸಿಬಿ ಪಂದ್ಯದಲ್ಲಿ ಹಿಡಿತ ಸಾಧಿಸಬಹುದು.
 

9. ಮೊಹಮ್ಮದ್ ಸಿರಾಜ್:

ಆರ್‌ಸಿಬಿ ವೇಗದ ದಾಳಿಯನ್ನು ಮುನ್ನಡೆಸಲಿರುವ ಮೊಹಮ್ಮದ್ ಸಿರಾಜ್, ತಂಡದ ಪ್ರಮುಖ ಬೌಲಿಂಗ್ ಅಸ್ತ್ರ. ಸಿರಾಜ್ ಪವರ್‌ ಪ್ಲೇ ಹಾಗೂ ಡೆತ್ ಓವರ್‌ನಲ್ಲಿ ಜವಾಬ್ದಾರಿಯುತ ದಾಳಿ ಸಂಘಟಿಸಬೇಕಿದೆ.
 

10. ಆಕಾಶ್‌ದೀಪ್ ಸಿಂಗ್:

ಇತ್ತೀಚೆಗಷ್ಟೇ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿ ಮಿಂಚಿದ್ದ ಆಕಾಶ್‌ದೀಪ್ ಸಿಂಗ್, ಇದೀಗ ಆರ್‌ಸಿಬಿ ತಂಡದಲ್ಲೂ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಆರ್‌ಸಿಬಿ ತಂಡದಲ್ಲಿ ಮಿಂಚಲು ಆಕಾಶ್‌ದೀಪ್‌ಗೆ ಈ ಬಾರಿ ಉತ್ತಮ ಅವಕಾಶವಿದೆ.
 

11. ಕರ್ಣ್ ಶರ್ಮಾ:

ಆರ್‌ಸಿಬಿ ತಂಡದ ನೀಳಕಾಯದ ಅನುಭವಿ ಸ್ಪಿನ್ನರ್ ಕರ್ಣ್ ಶರ್ಮಾ, ಎದುರಾಳಿ ಬ್ಯಾಟರ್‌ಗಳನ್ನು ತಮ್ಮ ಸ್ಪಿನ್ ಅಸ್ತ್ರದ ಮೂಲಕ ಕಾಡಬಲ್ಲರು. ಮಹತ್ವದ ಘಟ್ಟದಲ್ಲಿ ವಿಕೆಟ್ ಕಬಳಿಸಬೇಕಾದ ಜವಾಬ್ದಾರಿ ಕರ್ಣ ಶರ್ಮಾ ಮೇಲಿದೆ.
 

click me!