WPL ಕಪ್‌ ಗೆದ್ದು ಬಾಯ್‌ ಫ್ರೆಂಡ್‌ ಜತೆ ಫೋಸ್‌ ಕೊಟ್ಟ RCB ಕ್ವೀನ್ ಸ್ಮೃತಿ ಮಂಧನಾ..! ನಮ್ಮ ಕ್ರಶ್‌ ಬಿಟ್ಬಿಡು ಎಂದ ಫ್ಯಾನ್ಸ್

First Published | Mar 20, 2024, 3:53 PM IST

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೀಗ ಸ್ಮೃತಿ ಮಂಧನಾ ಅವರದ್ದೇ ಧ್ಯಾನ. ಆರ್‌ಸಿಬಿಗೆ ಕಪ್‌ ಗೆದ್ದ ಬೆನ್ನಲ್ಲೇ ಸ್ಮೃತಿ ಮಂಧನಾ ಮೈದಾನದಲ್ಲೇ ಬಾಯ್‌ಫ್ರೆಂಡ್ ಜತೆ ಫೋಸ್ ಕೊಟ್ಟಿದ್ದು ಅವರ ಅಭಿಮಾನಿಗಳಿಗೆ ಕೊಂಚ ಕಸಿವಿಸಿಯುನ್ನುಂಟು ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
 

ನವದೆಹಲಿ ಅರುಣ್‌ ಜೇಟ್ಲಿ ಮೈದಾನದಲ್ಲಿ ಮಾರ್ಚ್ 17ರಂದು ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಎದುರು 8 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿ ತಂಡವು ಪ್ರಶಸ್ತಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Tap to resize

ಐಪಿಎಲ್‌ನಲ್ಲಿ ಆರ್‌ಸಿಬಿ ಪುರುಷರ ತಂಡವು ಕಳೆದ 16 ವರ್ಷಗಳಿಂದ ಮಾಡಲಾಗದ ಸಾಧನೆಯನ್ನು ಸ್ಮೃತಿ ಮಂಧನಾ ನೇತೃತ್ವದ ಮಹಿಳಾ ತಂಡವು WPL ಟೂರ್ನಿಯಲ್ಲಿ ಕೇವಲ ಎರಡನೇ ಪ್ರಯತ್ನದಲ್ಲೇ ಸಾಕಾರಪಡಿಸಿಕೊಂಡಿದೆ.

ಸ್ಮೃತಿ ಮಂಧನಾ ಪಡೆ ಚಾಂಪಿಯನ್ ಆಗುತ್ತಿದ್ದಂತೆಯೇ ಆರ್‌ಸಿಬಿ ಅಭಿಮಾನಿಗಳು ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ರಸ್ತೆಗಿಳಿದು ತಡರಾತ್ರಿವರೆಗೂ ಪಟಾಕಿ ಸಂಭ್ರಮಿಸಿದ ಘಟನೆಗಳು ವರದಿಯಾಗಿವೆ.

ಮೊದಲಿನಿಂದಲೂ ಬ್ಯೂಟಿ ಕ್ವೀನ್ ಎನಿಸಿಕೊಂಡಿದ್ದ ಸ್ಮೃತಿ ಮಂಧನಾ ಅವರನ್ನು ಅಭಿಮಾನಿಗಳು ನ್ಯಾಷನಲ್ ಕ್ರಶ್ ಎಂದೇ ಕರೆಯುತ್ತಿದ್ದರು. ಇದೀಗ ಕಪ್ ಗೆಲ್ಲುತ್ತಿದ್ದಂತೆಯೇ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಸ್ಮೃತಿ ಮಂಧನಾ ಆರಾಧ್ಯ ದೇವತೆಯಾಗಿದ್ದಾರೆ.

ಇನ್ನು ಇದೆಲ್ಲದರ ನಡುವೆ ಆರ್‌ಸಿಬಿ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಖ್ಯಾತ ಮ್ಯೂಸಿಕ್ ಕಂಪೋಸರ್ ಆಗಿರುವ ಪಾಲಾಶ್ ಮುಚ್ಚಲ್ ಅವರು ಮೈದಾನಕ್ಕಿಳಿದು ಗೆಳತಿ ಸ್ಮೃತಿ ಮಂಧನಾಗೆ ಶುಭಾಶಯ ಕೋರಿದ್ದಾರೆ.

ಈ ಹಿಂದಿನಿಂದಲೂ ಸ್ಮೃತಿ ಮಂಧನಾ ಹಾಗೂ ಮ್ಯೂಸಿಕ್ ಕಂಪೋಸರ್ ಪಾಲಾಶ್ ಮುಚ್ಚಲ್ ಇಬ್ಬರು ಡೇಟಿಂಗ್ ನಡೆಸುತ್ತಿದ್ದರು ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿತ್ತು. ಆದರೆ ಅದು ಈಗ ನಿಜ ಎನ್ನುವಂತೆ ಭಾಸವಾಗುತ್ತಿದೆ.

ಇದಾದ ಬಳಿಕ ಟ್ರೋಫಿ ಹಿಡಿದ ಸ್ಮೃತಿ ಮಂಧನಾ ಹೆಗಲ ಮೇಲೆ ಸಲುಗೆಯಿಂದ ಕೈಹಾಕಿ ಫೋಟೋಗೆ ಫೋಸ್ ನೀಡಿದ್ದಾರೆ. ಈ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

ಇನ್ನು ಸ್ವತಃ ಪಾಲಾಶ್ ಮುಚ್ಚಲ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಸ್ಮೃತಿ ಮಂಧನಾ ಜತೆಗಿರುವ ಫೋಟೋವನ್ನು ಫೋಸ್ಟ್ ಮಾಡಿದ್ದು, "ಈ ಸಲ ಕಪ್ ನಮ್ದು" ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ WPL ಫೈನಲ್ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ಸ್ಮೃತಿ ಮಂಧನಾ, "ಇಷ್ಟು ದಿನ ಆರ್‌ಸಿಬಿ ಎಂದಾಕ್ಷಣ ಈ ಸಲ ಕಪ್ ನಮ್ದೇ ಎನ್ನುವ ಮಾತುಗಳು ಜೋರಾಗಿ ಕೇಳಿ ಬರುತ್ತಿತ್ತು. ಆದರೆ "ಈ ಸಲ ಕಪ್ ನಮ್ದೇ ಅಲ್ಲ ಈ ಸಲ ಕಪ್ ನಮ್ದು" ಎಂದು ಕನ್ನಡದಲ್ಲೇ ಸಂತಸವನ್ನು ವ್ಯಕ್ತಪಡಿಸಿದ್ದರು.

ಇನ್ನು ಪಾಲಾಶ್ ಮುಚ್ಚಲ್ ಹಂಚಿಕೊಂಡ ಫೋಟೋಗೆ ಅಭಿಮಾನಿಗಳಿಂದ ಸಾಕಷ್ಟು ಪರ-ವಿರೋಧದ ಚರ್ಚೆ ವ್ಯಕ್ತವಾಗಿದೆ. ಕೆಲವರು ಮುದ್ದಾದ ಜೋಡಿ ಎಂದು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ಸ್ಮೃತಿ ನಮ್ಮ ಕ್ರಶ್ ದಯವಿಟ್ಟು ಆಕೆಯಿಂದ ದೂರವಾಗು ಎಂದು ಕಮೆಂಟ್ ಮಾಡಿದ್ದಾರೆ.

Latest Videos

click me!