ಹೆಣ್ಣು ಮಗುವಿಗೆ ಜನ್ಮ ನೀಡಿದ ಟೀಮ್‌ ಇಂಡಿಯಾ ಸ್ಟಾರ್‌ ವೇಗಿಯ ಪತ್ನಿ!

First Published | Nov 4, 2023, 1:31 PM IST

Ishant Sharma became father to a baby girl on Friday: ಟೀಮ್‌ ಇಂಡಿಯಾ ವೇಗಿ ಇಶಾಂತ್‌ ಶರ್ಮ ಅವರ ಪತ್ನಿ ಹಾಗೂ ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ತಂಡದ ಆಟಗಾರ್ತಿ ಪ್ರತಿಮಾ ಸಿಂಗ್‌ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮದುವೆಯಾದ ಏಳು ವರ್ಷಗಳ ಬಳಿಕ ಪ್ರತಿಮಾ ಮೊದಲ ಮಗುವಿನ ಜನ್ಮ ನೀಡಿದ್ದಾರೆ.
 

ಮದುವೆಯಾದ ಏಳು ವರ್ಷಗಳ ಬಳಿಕ ಟೀಮ್‌ ಇಂಡಿಯಾ ವೇಗಿ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಈ ಕುರಿತಾಗಿ ಅವರು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಟೀಮ್‌ ಇಂಡಿಯಾ ವೇಗಿ ಇಶಾಂತ್‌ ಶರ್ಮ ತಂದೆಯಾಗಿದ್ದಾರೆ. 2016ರಲ್ಲಿ ಅವರು ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಆಟಗಾರ್ತಿಯಾಗಿದ್ದ ಪ್ರತಿಮಾ ಸಿಂಗ್‌ ಅವರನ್ನು ವಿವಾಹವಾಗಿದ್ದರು.

Tap to resize

ಶುಕ್ರವಾರ ಪತ್ನಿ ಪ್ರತಿಮಾ ಸಿಂಗ್‌ ಹೆಣ್ಣು ಮಗುವಿನ ಜನ್ಮ ನೀಡಿರುವ ಸಂಭ್ರಮದ ಸುದ್ದಿಯನ್ನು ಇಶಾಂತ್‌ ಶರ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ದಂಪತಿಗಳು ಸಾಮಾಜಿಕ ಮಾಧ್ಯಮದಲ್ಲಿ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ, ಇಶಾಂತ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ "ಹೆಣ್ಣು ಮಗು, ಅದ್ಭುತ, ಭರವಸೆ ಮತ್ತು ಕನಸುಗಳ ಜಗತ್ತು ಗುಲಾಬಿ ಬಣ್ಣದಿಂದ ಸುತ್ತುವರಿದಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

1988 ಸೆಪ್ಟೆಂಬರ್ 2 ರಂದು ಜನಿಸಿದ ಇಶಾಂತ್ ಶರ್ಮಾ ಅವರು 105 ಟೆಸ್ಟ್, 80 ODI ಮತ್ತು 14 ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

ತೆಳ್ಳಗೆ, ಉದ್ದವಾಗಿದ್ದ ಕಾರಣಕ್ಕೆ ಇಶಾಂತ್‌ ಶರ್ಮಕ್ಕೆ ಟೀಮ್‌ ಇಂಡಿಯಾದಲ್ಲಿ 'ಲಂಬು' ಎನ್ನುವ ಅಡ್ಡ ಹೆಸರಿನಿಂದ ಕರೆಯುತ್ತಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈವರೆಗೂ ಇಶಾಂತ್‌ ಶರ್ಮ 434 ವಿಕೆಟ್‌ ಉರುಳಿಸಿದ್ದಾರೆ.

ಇನ್ನು 1990 ಫೆಬ್ರವರಿ 6 ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನಿಸಿದ್ದ ಪ್ರತಿಮಾ ಸಿಂಗ್‌ ಅವರ ಇಡೀ ಕುಟುಂಬ ಕ್ರೀಡೆಯಲ್ಲಿದೆ.

ಭಾರತ ಮಹಿಳಾ ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ತಂಡವನ್ನು ಪ್ರತಿನಿಧಿಸಿದಗದ ಪ್ರತಿಮಾ ಸಿಂಗ್‌, ನಾಯಕಿಯೂ ಆಗಿದ್ದರು. ಬಾಸ್ಕೆಟ್‌ಬಾಲ್‌ನಲ್ಲಿ ಯಶಸ್ವಿ ವೃತ್ತಿಜೀವನವನ್ನು ಅವರು ಕಂಡಿದ್ದಾರೆ.

ಇಬ್ಬರೂ ಕ್ರೀಡಾಪಟುಗಳು ಆಗಿದ್ದ ಕಾರಣಕ್ಕೆ, ವೃತ್ತಿಪರ ಬದ್ಧತೆಯ ಕಾರಣದಿಂದಾಗಿ ಹತ್ತಿರವಾಗಿದ್ದರು. ಕೆಲ ವರ್ಷಗಳ ಕಾಲ ಪ್ರೀತಿ ಮಾಡಿ ಬಳಿಕ ಮದುವೆಯಾಗಿದ್ದರು.


2016ರ ಡಿಸೆಂಬರ್‌ 10 ರಂದ ಖಾಸಗಿಯಾಗಿ ಇವರಿಬ್ಬರ ವಿವಾಹ ಸಮಾರಂಭ ನಡೆದಿತ್ತು.  ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದವರು ಮಾತ್ರವೇ ಭಾಗವಹಿಸಿದ್ದರು.

ಡಿಸೆಂಬರ್‌ 10 ರಂದು ತಮ್ಮ ಮದುವೆಗೆ ಏಳು ವರ್ಷಗಳಾಗುತ್ತಿರುವ ಸಮಯದಲ್ಲಿ ದಂಪತಿಗಳು ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಇಶಾಂತ್‌ ಶರ್ಮ ಈ ವಿಚಾರ ತಿಳಿಸುತ್ತಿದ್ದಂತೆ, ಸಹ ಕ್ರಿಕೆಟಿಗರು, ಸ್ನೇಹಿತರು ಹಾಗೂ ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ.

ಭಾರತದ ಸೂಪರ್‌ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಇಶಾಂತ್‌-ಪ್ರತಿಮಾ ಜೋಡಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.

ಇಶಾಂತ್‌ ಶರ್ಮ ಹಾಗೂ ಪ್ರತಿಮಾ ಸಿಂಗ್‌ ಜೋಡಿ ಸೋಶಿಯಲ್‌ ಮೀಡಿಯಾದಲ್ಲಿ ಬಹಳ ಆಕ್ಟೀವ್‌ ಆಗಿದ್ದು,ಆಕರ್ಷಕ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇವರಿಬ್ಬರ ಪುತ್ರಿ ಇನ್ನೆಷ್ಟು ಉದ್ದವಾಗಿರಬಹುದು ಎಂದು ಇಶಾಂತ್‌ ಶರ್ಮ ಅವರ ಪೋಸ್ಟ್‌ಗೆ ಹಲವರು ಕಾಮೆಂಟ್‌ ಮಾಡಿದ್ದಾರೆ. ಮಹಿಳಾ ಎನ್‌ಬಿಎ ಪ್ಲೇಯರ್‌ ಕೊನೆಗೂ ಸಿಕ್ಕಿದ್ರು ಎಂದು ಕೆಲವರು ಬರೆದಿದ್ದಾರೆ.

Latest Videos

click me!