ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ Net Worth ಎಷ್ಟು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

First Published | Nov 3, 2023, 5:26 PM IST

ಮುಂಬೈ: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಮೊಹಮ್ಮದ್ ಶಮಿ ಇದೀಗ ಟಾಕ್ ಆಫ್‌ ದಿ ಟೌನ್ ಎನಿಸಿದ್ದಾರೆ. ನಾವಿಂದು ಮೊಹಮ್ಮದ್ ಶಮಿ ಅವರ ಸಂಪತ್ತು ಎಷ್ಟು? ನೆಟ್‌ ವರ್ಥ್ ಎಷ್ಟು ಎನ್ನುವುದನ್ನು ನಾವಿಂದು ನೋಡೋಣ ಬನ್ನಿ.
 

ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ವೇಗಿ ಮೊಹಮ್ಮದ್ ಶಮಿ, ಇದೀಗ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 45 ವಿಕೆಟ್ ಕಬಳಿಸುವ ಮೂಲಕ ಭಾರತದ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊದಲ 4 ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಶಮಿ, ಆ ಬಳಿಕ ತಾನಾಡಿದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 5-4-5 ಹೀಗೆ ಕೇವಲ 3 ಪಂದ್ಯದಲ್ಲೇ 14 ಬಲಿ ಪಡೆಯುವ ಮೂಲಕ ಮಿಂಚಿದ್ದಾರೆ.
 

Tap to resize

ಮಾರಕ ದಾಳಿಯ ಮೂಲಕ ಟೀಂ ಇಂಡಿಯಾದ ವೇಗದ ಅಸ್ತ್ರವಾಗಿರುವ ಮೊಹಮ್ಮದ್ ಶಮಿ ಅವರು 2023ರಲ್ಲಿ ಸುಮಾರು 47 ಕೋಟಿ ರುಪಾಯಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

ಶಮಿ ವಾರ್ಷಿಕ ಆದಾಯ:

ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ವಾರ್ಷಿಕವಾಗಿ 7 ಕೋಟಿ ರುಪಾಯಿಗಳನ್ನು ಬ್ರ್ಯಾಂಡ್ ಎಂಡೋರ್ಸ್‌ಮೆಂಟ್, ಇತರ ಜಾಹಿರಾತು ಮೂಲಗಳಿಂದ ಸುಮಾರು 7 ಕೋಟಿ ರುಪಾಯಿಗಳನ್ನು ಸಂಪಾದಿಸುತ್ತಾರೆ.
 

ಐಪಿಎಲ್ ಸಂಬಳ:

2011ರಿಂದಲೂ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಮೊಹಮ್ಮದ್ ಶಮಿ, ಪಂಜಾಬ್ ಕಿಂಗ್ಸ್‌, ಕೋಲ್ಕತಾ ನೈಟ್ ರೈಡರ್ಸ್‌, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಇದೀಗ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2023ರಲ್ಲಿ ಶಮಿ ಐಪಿಎಲ್‌ನಿಂದ ಸುಮಾರು 6.25 ಕೋಟಿ ರುಪಾಯಿಗಳನ್ನು ಜೇಬಿಗಿಳಿಸಿಕೊಂಡಿದ್ದಾರೆ.
 

ಕಳೆದೊಂದು ದಶಕದಿಂದಲೂ ಐಪಿಎಲ್ ಆಡುತ್ತಾ ಬಂದಿರುವ ಮೊಹಮ್ಮದ್ ಶಮಿ, ಐಪಿಎಲ್ ಕಾಂಟ್ರ್ಯಾಕ್ಟ್‌ಗಳಿಂದಲೇ ಸುಮಾರು 47.2 ಕೋಟಿ ರುಪಾಯಿಗಳನ್ನು ಸಂಪಾದಿಸಿದ್ದಾರೆ.

ಬಿಸಿಸಿಐ ಸಂಬಳ:

ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ ಪಡೆದುಕೊಂಡಿರುವ ಮೊಹಮ್ಮದ್ ಶಮಿ A ಗ್ರೇಡ್ ಆಟಗಾರರಾಗಿದ್ದಾರೆ. ಶಮಿ 'ಎ' ಗ್ರೇಡ್ ಆಟಗಾರನಾಗಿರುವುದರಿಂದ ವಾರ್ಷಿಕ 5 ಕೋಟಿ ರುಪಾಯಿ ಸಂಪಾದಿಸುತ್ತಿದ್ದಾರೆ.
 

ಇನ್ನು ಇದಷ್ಟೇ ಅಲ್ಲದೇ ಒಂದು ಟೆಸ್ಟ್‌ ಪಂದ್ಯಕ್ಕೆ 15 ಲಕ್ಷ ರುಪಾಯಿ, ಒಂದು ಏಕದಿನ ಪಂದ್ಯಕ್ಕೆ 6 ಲಕ್ಷ ರುಪಾಯಿ ಹಾಗೂ ಒಂದು ಟಿ20 ಪಂದ್ಯವನ್ನಾಡಿದರೆ ಶಮಿ 3 ಲಕ್ಷ ರುಪಾಯಿಗಳನ್ನು ಪಂದ್ಯದ ಸಂಭಾವನೆ ರೂಪದಲ್ಲಿ ಪಡೆದುಕೊಳ್ಳುತ್ತಿದ್ದಾರೆ.

ಕ್ರಿಕೆಟ್ ಮೈದಾನದಾಚೆಗಿನ ವಿಚಾರದ ಬಗ್ಗೆ ಹೇಳುವುದಾದರೇ, ಶಮಿ ಬಳಿ ಹಲವಾರು ಕ್ಲಾಸಿಕ್ ಹಾಗೂ ಐಶಾರಾಮಿ ಕಾರುಗಳ ಸಂಗ್ರಹವೇ ಇದೆ. ಈ ಪೈಕಿ ಶಮಿ ಬಳಿ ಆಡಿ, ಬಿಎಂಡಬ್ಲ್ಯೂ 5 ಸೀರಿಸ್, ಜಾಗ್ವಾರ್, F-Type ಹಾಗೂ ಟಯೋಟಾ ಫಾರ್ಚ್ಯೂನರ್‌ನಂತಹ ಕಾರುಗಳಿವೆ. ಈ ಎಲ್ಲಾ ಕಾರುಗಳ ಮೌಲ್ಯ ಸುಮಾರು 1.5 ರಿಂದ 2 ಕೋಟಿ ರುಪಾಯಿಗಳಾಗಿವೆ.
 

Latest Videos

click me!