'ಪ್ಲೀಸ್‌ ನನ್ನ ಕುಟುಂಬವನ್ನು ಒಡೆಯಬೇಡಿ..' Pratik Utekar ಜೊತೆಗಿನ ಫೋಟೋ ಕುರಿತು ಚಾಹಲ್‌ ಪತ್ನಿ ಧನಶ್ರೀ ಪ್ರತಿಕ್ರಿಯೆ!

First Published Mar 17, 2024, 11:57 AM IST

ಕೊರಿಯೋಗ್ರಾಫರ್‌ ಪ್ರತೀಕ್ ಉಟೇಕರ್ ಜೊತೆಗಿನ ಆತ್ಮೀಯವಾದ ಫೋಟೋವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡ ಬೆನ್ನಲ್ಲಿಯೇ ಟೀಮ್‌ ಇಂಡಿಯಾ ಕ್ರಿಕೆಟಿಗರ ಯಜುವೇಂದ್ರ ಚಾಹಲ್‌ ಅವರ ಪತ್ನಿ ಧನಶ್ರೀ ವರ್ಮ ಅವರನ್ನು ಟ್ರೋಲ್‌ ಮಾಡಲಾಗಿತ್ತು.
 

ಕೊರಿಯೋಗ್ರಾಫರ್‌ ಪ್ರತೀಕ್ ಉಟೇಕರ್ ಹಿಂದಿನಿಂದ ತಬ್ಬಿಕೊಂಡಿರುವ ಚಿತ್ರವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದ ಟೀಮ್‌ ಇಂಡಿಯಾ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಅವರ ಪತ್ನಿ ಧನಶ್ರೀ ವರ್ಮ, ಇದಕ್ಕಾಗಿ ದೊಡ್ಡ ಮಟ್ಟದ ಟ್ರೋಲ್‌ ಎದುರಿಸಿದ್ದರು. ಈಗ ಈ ವಿಚಾರವಾಗಿ ಅವರು ಮೊದಲ ಬಾರಿಗೆ ಮಾತನಾಡಿದ್ದಾರೆ.


ತನ್ನ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಈ ಬಗ್ಗೆ ವಿಡಿಯೋ ಪೋಸ್ಟ್‌ ಮಾಡಿರುವ ಆಕೆ, ಪ್ಲೀಸ್‌ ನನ್ನ ಕುಟುಂಬವನ್ನು ಒಡೆಯಬೇಡಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಈ ಚಿತ್ರಕ್ಕೆ ಬರುತ್ತಿರುವ ಸಂದೇಶಗಳು ಹಾಗೂ ಕಾಮೆಂಟ್‌ಗಳಿಂದ ನನ್ನ ಕುಟುಂಬದ ಮೇಲೆ ದೊಡ್ಡ ಮಟ್ಟ ಪರಿಣಾಮ ಬೀರಿದೆ ಎಂದಿದ್ದಾರೆ.

ಪೋಸ್ಟ್‌ಗೆ ಸಾಕಷ್ಟು ಕೆಟ್ಟ ಕಾಮೆಂಟ್ಸ್‌ಗಳು ಬಂದ ಬಳಕ ಧನಶ್ರಿ ವರ್ಮ ತಮ್ಮ ಪೇಜ್‌ನಿಂದ ಈ ಫೋಟೋವನ್ನು ಡಿಲೀಟ್‌ ಕೂಡ ಮಾಡಿದ್ದರು. ಆದರೆ, ಧನಶ್ರೀ ವರ್ಮ ಈಗಲೂ ಕೂಡ ಇದೇ ಫೋಟೋ ವಿಚಾರವಾಗಿ ಟ್ರೋಲ್‌ ಆಗುತ್ತಿದ್ದಾರೆ.

ಡ್ಯಾನ್ಸ್ ರಿಯಾಲಿಟಿ ಶೋ ಜಲಕ್ ದಿಖ್ಲಾ ಜಾ ಸೀಸನ್ 11 ರ ನಂತರ ಫರಾ ಖಾನ್ ಆಯೋಜಿಸಿದ್ದ ಪಾರ್ಟಿಯಲ್ಲಿ ತೆಗೆದ ಫೋಟೋ ಇದಾಗಿತ್ತು. ಈ ಪಾರ್ಟಿಯಲ್ಲಿ ಸ್ವತಃ ಯಜುವೇಂದ್ರ ಚಾಹಲ್‌ ಕೂಡ ಉಪಸ್ಥಿತರಿದ್ದರು.

"ನಾನು ನನ್ನ ಇನ್‌ಸ್ಟಾಗ್ರಾಮ್ ಅನ್ನು ಪುನರಾರಂಭಿಸುವ ಮೊದಲು, ನಾನು ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕು ಎಂದು ನನಗೆ ಅನಿಸಿತು, ಹಾಗಾಗಿ ನಾನು ಅದನ್ನು ಮಾತನಾಡುತ್ತೇನೆ. ನಾನು ಅದನ್ನು ಬರೆದಿದ್ದೇನೆ. ಅದನ್ನು ಓದುತ್ತೇನೆ' ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. 


ನನ್ನ ಜೀವನದಲ್ಲಿ ನಾನು ಎಂದಿಗೂ ಟ್ರೋಲ್‌ಗಳು ಅಥವಾ ಮೀಮ್‌ಗಳು ಎಫೆಕ್ಟ್‌ ನೀಡಿಲ್ಲ. ಏಕೆಂದರೆ ಇತ್ತೀಚಿನ ಟ್ರೋಲ್ ಆಗುವವರೆಗೂ ನನ್ನ ಬಗ್ಗೆ ಬರುವ ಟ್ರೋಲ್‌ಗಳನ್ನು ಒಂದೋ ನಿರ್ಲಕ್ಷ್ಯ ಮಾಡುತ್ತಿದ್ದೆ ಅಥವಾ ಜೋರಾಗಿ ನಕ್ಕು ಸುಮ್ಮನಾಗುತ್ತಿದ್ದೆ.

ಇದು ಈ ಬಾರಿ ನನ್ನ ಮೇಲೆ ಪರಿಣಾಮ ಬೀರಲು ಕಾರಣ ಅದು ನನ್ನ ಕುಟುಂಬ ಮತ್ತು ಹತ್ತಿರದ ಮತ್ತು ಆತ್ಮೀಯರ ಮೇಲೆ ಪರಿಣಾಮ ಬೀರಿದೆ. ಹಾಗಾಗಿ ಈ ಸೋಶಿಯಲ್‌ ಮೀಡಿಯಾದಿಂದ ದೂರು ಇರುವುದೇ ನೆಮ್ಮದಿ ಎಂದು ಧನಶ್ರಿ ಹೇಳಿದ್ದಾರೆ.


ಎಲ್ಲರಿಗೂ ಸೋಶಿಯಲ್‌ ಮೀಡಿಯಾದಲ್ಲಿ ಸ್ವಾತಂತ್ರ್ಯವಿದೆ. ಆದರೆ, ನಮ್ಮ ಕುಟುಂಬಗಳ ಭಾವನೆಗಳನ್ನು ಗಮನಿಸಲು ನೀವು ಮರೆತುಬಿಡುತ್ತೀರಿ. ಇದು ಸಾಮಾಜಿಕ ಮಾಧ್ಯಮದಿಂದ ಡಿಟಾಕ್ಸ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾರಣವಾಯಿತು ಎಂದಿದ್ದಾರೆ.


ಇದೇ ಕಾರಣಕ್ಕಾಗಿ ನಾನು ಸೋಶಿಯಲ್‌ ಮೀಡಿಯಾದಿಂದ ದೂರವಿದ್ದೆ. ಇದು ನೆಮ್ಮದಿ ನೀಡಿತ್ತು. ಸೋಶಿಯಲ್‌ ಮೀಡಿಯಾವನ್ನು ದ್ವೇಷ ಹಂಚಿಕೊಳ್ಳುವ ರೀತಿಯಲ್ಲಿ ಬಳಸಬೇಡಿ ಎಂದು ತಿಳಿಸಿದ್ದಾರೆ.

ನಾನು ಮಾಡುವ ಕೆಲಸದಲ್ಲಿ ತುಂಬಾ ದಿನ ಸೋಶಿಯಲ್‌ ಮೀಡಿಯಾದಿಂದ ಹೊರಗಿರಲು ಸಾಧ್ಯವಿಲ್ಲ. ಆದರೆ, ಯಾರ ಬಗ್ಗೆಯೇ ಆಗಲಿ ನೋವುಂಟು ಮಾಡುವ ಪೋಸ್ಟ್‌ ಹಾಕುವ ಮುನ್ನ ಎರಡು ಬಾರಿ ಯೋಚಿಸಿ ಎಂದು 27 ವರ್ಷದ ಧನಶ್ರೀ ಹೇಳಿದ್ದಾರೆ.


ನಿಮ್ಮ ಸಹೋದರಿ, ತಾಯಿ, ಸ್ನೇಹಿತ ಹೆಂಡತಿಯಂತೆ ನಾನು ಕೂಡ ಒಬ್ಬ ಮಹಿಳೆ ಎಂಬುದನ್ನು ಮರೆಯಬೇಡಿ. ನನ್ನ ವಿಚಾರದಲ್ಲಿ ನೀವು ಮಾಡುತ್ತಿರುವ ಪೋಸ್ಟ್‌ಗಳು ಸರಿಯಲ್ಲ ಎಂದು ಬರೆದಿದ್ದಾರೆ.

ನಾನು ಫೈಟರ್‌ ಆಗಿ ಹೆಸರಾಗಿದ್ದೇನೆ. ನಾನು ಎಂದೂ ಯಾರನ್ನೂ ಬಿಟ್ಟುಕೊಡೋದಿಲ್ಲ. ದಯವಿಟ್ಟು ಪ್ರೀತಿಯನ್ನು ಹರಡಿ. ಕೆಲ ವಿಚಾರದಲ್ಲಿ ಸಂವೇದನೆಯಿಂದ ಮಾತನಾಡಿ ದ್ವೇಷವನ್ನು ಹರಬೇಡಿ ಎಂದು ಮನವಿ ಮಾಡಿದ್ದಾರೆ.

ಇಲ್ಲಿಂದ ಮುಂದೆ ನಾವು ಒಳ್ಳೆಯ ವಿಷಯಗಳ ಮೇಲೆ ಕೇಂದ್ರೀಕರಿಸುತ್ತೇವೆ ಮತ್ತು ಜೀವನದಲ್ಲಿ ಮುಂದುವರಿಯುತ್ತೇವೆ ಮತ್ತು ಈ ರೀತಿ ಯಾರನ್ನೂ ಕೀಳಾಗಿಸಬಾರದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

click me!