IPL 2024: ಪ್ರತಿ ತಂಡದಲ್ಲಿರುವ ದುಬಾರಿ ಆಟಗಾರರಿವರು..!

First Published | Mar 17, 2024, 9:32 AM IST

ಬೆಂಗಳೂರು: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 22ರಿಂದ ಆರಂಭವಾಗಲಿದೆ. ಈ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಎಲ್ಲಾ 10 ತಂಡಗಳು ಸಜ್ಜಾಗಿವೆ. ಈ ಸಂದರ್ಭದಲ್ಲಿ ಈ ತಂಡದಲ್ಲಿರುವ ದುಬಾರಿ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
 

10. ಸಂಜು ಸ್ಯಾಮ್ಸನ್- ರಾಜಸ್ಥಾನ ರಾಯಲ್ಸ್

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, 14 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಾರೆ. ಈ ಮೂಲಕ ರಾಜಸ್ಥಾನ ರಾಯಲ್ಸ್ ಪಡೆಯ ಅತಿ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.
 

09. ರಶೀದ್ ಖಾನ್ - ಗುಜರಾತ್ ಟೈಟಾನ್ಸ್

ಗುಜರಾತ್ ಟೈಟಾನ್ಸ್ ತಂಡದ ಸ್ಪಿನ್ ಅಸ್ತ್ರ ರಶೀದ್ ಖಾನ್, ಒಂದು ಸೀಸನ್‌ ಐಪಿಎಲ್ ಟೂರ್ನಿ ಆಡಿ 15 ಕೋಟಿ ರುಪಾಯಿ ಜೇಬಿಗಿಳಿಸಿಕೊಳ್ಳುತ್ತಾರೆ. ಈ ಮೂಲಕ ಟೈಟಾನ್ಸ್ ತಂಡದ ಕಾಸ್ಟ್ಲಿ ಆಟಗಾರ ಎನಿಸಿದ್ದಾರೆ.
 

Latest Videos


08. ರಿಷಭ್ ಪಂತ್ - ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ತಾರಾ ಕ್ರಿಕೆಟಿಗರಾದ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಅವರಂತೆ 16 ಕೋಟಿ ರುಪಾಯಿಗಳನ್ನು ಜೇಬಿಗಿಳಿಸಿಕೊಳ್ಳುತ್ತಾರೆ.
 

07. ರೋಹಿತ್ ಶರ್ಮಾ - ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ, ತಮ್ಮ ತಂಡಕ್ಕೆ 5 ಬಾರಿ ಐಪಿಎಲ್ ಗೆದ್ದುಕೊಟ್ಟಿದ್ದಾರೆ. ಮುಂಬೈ ಪರ ಹಿಟ್‌ಮ್ಯಾನ್ 16 ಕೋಟಿ ರುಪಾಯಿ ಪಡೆಯುವ ಮೂಲಕ ಈ ತಂಡದ ದುಬಾರಿ ಆಟಗಾರ ಎನಿಸಿದ್ದಾರೆ.
 

06. ರವೀಂದ್ರ ಜಡೇಜಾ - ಚೆನ್ನೈ ಸೂಪರ್ ಕಿಂಗ್ಸ್‌

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ತಂಡದ ಅಧಾರಸ್ತಂಭವೆನಿಸಿಕೊಂಡಿದ್ದಾರೆ. ಜಡ್ಡು ಕೂಡಾ 16 ಕೋಟಿ ರುಪಾಯಿ ಪಡೆಯುವ ಮೂಲಕ ಸಿಎಸ್‌ಕೆ ಪಡೆಯ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.
 

05. ಕೆ ಎಲ್ ರಾಹುಲ್ - ಲಖನೌ ಸೂಪರ್ ಜೈಂಟ್ಸ್

ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್‌ಗೆ ಫ್ರಾಂಚೈಸಿಯು ಪ್ರತಿ ಐಪಿಎಲ್‌ ಸೀಸನ್‌ಗೆ 17 ಕೋಟಿ ರುಪಾಯಿ ನೀಡುತ್ತಾ ಬಂದಿದೆ.
 

04. ಕ್ಯಾಮರೋನ್ ಗ್ರೀನ್ -  ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆರ್‌ಸಿಬಿ ತಂಡವು ಆಸೀಸ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ 17.50 ಕೋಟಿ ನೀಡಿ ಟ್ರೇಡ್ ಮಾಡಿಕೊಂಡಿದೆ. ಈ ಮೂಲಕ ಗ್ರೀನ್ ಆರ್‌ಸಿಬಿ ತಂಡದ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.
 

03. ಸ್ಯಾಮ್ ಕರ್ರನ್ - ಪಂಜಾಬ್ ಕಿಂಗ್ಸ್

ಇಂಗ್ಲೆಂಡ್ ಮೂಲದ ಸ್ಟಾರ್ ಆಲ್ರೌಂಡರ್ ಸ್ಯಾಮ್ ಕರ್ರನ್, ಅವರಿಗೆ ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರುಪಾಯಿ ನೀಡುತ್ತಿದೆ. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡದ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.
 

02. ಪ್ಯಾಟ್ ಕಮಿನ್ಸ್‌ - ಸನ್‌ರೈಸರ್ಸ್ ಹೈದರಾಬಾದ್

ಸನ್‌ರೈಸರ್ಸ್ ಹೈದರಾಬಾದ್ ತಂಡದ ನೂತನ ನಾಯಕ ಪ್ಯಾಟ್ ಕಮಿನ್ಸ್‌ 20.50 ಕೋಟಿ ರುಪಾಯಿ ಜೇಬಿಗಿಳಿಸಿಕೊಳ್ಳಲಿದ್ದಾರೆ. ಈ ಮೂಲಕ ಕಮಿನ್ಸ್‌ ಆರೆಂಜ್ ಆರ್ಮಿ ಪಡೆಯ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.
 

01. ಮಿಚೆಲ್ ಸ್ಟಾರ್ಕ್‌ - ಕೋಲ್ಕತಾ ನೈಟ್ ರೈಡರ್ಸ್

ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಆಸೀಸ್ ಎಡಗೈ ವೇಗಿಯನ್ನು ಬರೋಬ್ಬರಿ 24.75 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದ ಅತಿ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ ಸ್ಟಾರ್ಕ್.
 

click me!