ಪಾಕಿಸ್ತಾನ ಲೀಗ್ ಆಡುತ್ತಿರುವ SRH ಮಾಜಿ ನಾಯಕ ಡೇವಿಡ್ ವಾರ್ನರ್ ಅರೆಸ್ಟ್

Published : Apr 07, 2026, 05:09 PM IST

ಪಾಕಿಸ್ತಾನ ಲೀಗ್ ಆಡುತ್ತಿರುವ SRH ಮಾಜಿ ನಾಯಕ ಡೇವಿಡ್ ವಾರ್ನರ್ ಅರೆಸ್ಟ್, ಐಪಿಎಲ್ ಟೂರ್ನಿಯಲ್ಲಿ ಅವಕಾಶ ಸಿಗದೆ ವಾರ್ನರ್ ಸದ್ಯ ಪಾಕಿಸ್ತಾನ ಸೂಪರ್ ಲೀಗ್ ಆಡುತ್ತಿದ್ದಾರೆ. ಇದರ ನಡುವೆ ಅರೆಸ್ಟ್ ಆಗಿದ್ದಾರೆ

PREV
16
ಡೇವಿಡ್ ವಾರ್ನರ್ ಅರೆಸ್ಟ್

ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ, ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಚಾಂಪಿಯನ್ ಮಾಡಿದ ನಾಯಕ ಡೇವಿಡ್ ವಾರ್ನರ್ ಅರೆಸ್ಟ್ ಆಗಿದ್ದಾರೆ. ಐಪಿಎಲ್ ಹರಾಜಿನಲ್ಲಿ ವಾರ್ನರ್ ಖರೀದಿಸಲು ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ. ಪರಿಣಾಮ ವಾರ್ನರ್ ಸದ್ಯ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಆಡುತ್ತಿದ್ದಾರೆ. ಇದರ ನಡುವೆ ಡೇವಿಡ್ ವಾರ್ನರ್ ಅರೆಸ್ಟ್ ಆಗಿದ್ದಾರೆ.

26
ಪೊಲೀಸರ ಕಸ್ಟಡಿಯಲ್ಲಿ ವಾರ್ನರ್

ಕರಾಚಿ ಕಿಂಗ್ಸ್ ತಂಡದ ಪರ ಆಡುತ್ತಿರುವ ಡೇವಿಡ್ ವಾರ್ನರ್ ದಿಢೀರ್ ಆಸ್ಟ್ರೇಲಿಯಾಗೆ ಮರಳಿದ್ದರು. ಕೆಲಸ ಮುಗಿಸಿ ಮತ್ತೆ ಪಾಕಿಸ್ತಾನಕ್ಕೆ ಮರಳಲು ಮುಂದಾಗುತ್ತಿದ್ದಂತೆ ಅರೆಸ್ಟ್ ಆಗಿದ್ದಾರೆ. ಡೇವಿಡ್ ವಾರ್ನರ್ ಡ್ರಿಂಕ್ ಅಂಡ್ ಡ್ರೈವ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ಮದ್ಯ ಕುಡಿದ ವಾಹನ ಚಲಾಯಿಸಿದ ವಾರ್ನರ್‌ನ್ನು ಸಿಡ್ನಿ ಬಳಿಯ ಮರೌಬ್ರಾ ಬಳಿ ಅರೆಸ್ಟ್ ಆಗಿದ್ದಾರೆ.

36
ಕರಾಚಿ ಕಿಂಗ್ಸ್‌ಗೆ ಸಂಕಷ್ಟ ತಂದ ಅರೆಸ್ಟ್

ಮರೌಬ್ರಾ ಪೊಲೀಸರು ಡ್ರಿಂಕ್ ಡ್ರೈವ್ ಚೆಕ್ ಮಾಡುತ್ತಿದ್ದ ವೇಳೆ ವಾರ್ನರ್ ಸಿಕ್ಕಿ ಬಿದ್ದಿದ್ದಾರೆ. ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ಮದ್ಯ ಕುಡಿದಿರುವುದು ದೃಢಪಡಿಸಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಡೇವಿಡ್ ವಾರ್ನರ್‌ನ್ನು ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ. ಇದರಿಂದ ಪಾಕಿಸ್ತಾನ ಸೂಪರ್ ಲೀಗ್‌ನ ಕರಾಚಿ ಕಿಂಗ್ಸ್ ತಂಡಕ್ಕೆ ಸಂಕಷ್ಟ ಶುರುವಾಗಿದೆ. ನಾಯಕ ಡೇವಿಡ್ ವಾರ್ನರ್ ಕೆಲ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ.

46
2.8 ಕೋಟಿ ರೂಪಾಯಿಗೆ ಕರಾಚಿ ಕಿಂಗ್ಸ್ ಡೀಲ್

ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಡೇವಿಡ್ ವಾರ್ನರ್‌ಗೆ ಕರಾಚಿ ಕಿಂಗ್ಸ್ 2.8 ಕೋಟಿ ರೂಪಾಯಿ ನೀಡಿದೆ. ಕರಾಚಿ ಕಿಂಗ್ಸ್ ತಂಡದ ನಾಯಕನಾಗಿರುವ ಡೇವಿಡ್ ವಾರ್ನರ್ ಇದೀಗ ಪೊಲೀಸ್, ಕೋರ್ಟ್‌ನಲ್ಲಿ ಕಾಲ ಕಳೆಯುವಂತಾಗಿದೆ. ಎರಡನೇ ಬಾರಿ ಡೇವಿಡ್ ವಾರ್ನರ್ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ.

56
ಎಪ್ರಿಲ್ 9ಕ್ಕೆ ಕರಾಚಿ ಕಿಂಗ್ಸ್ ಮುಂದಿನ ಪಂದ್ಯ

ಕರಾಚಿ ಕಿಂಗ್ಸ್ ಪಂದ್ಯದ ನಡುವೆ ಕೆಲ ದಿನಗಳ ವಿಶ್ರಾಂತಿ ಇದ್ದ ಕಾರಣ ವಾರ್ನರ್ ಆಸ್ಟ್ರೇಲಿಯಾಗೆ ಮರಳಿದ್ದರು. ಇದರ ನಡುವೆ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಕರಾಚಿ ಕಿಂಗ್ಸ್ ಮುಂದಿನ ಪಂದ್ಯ ಎಪ್ರಿಲ್ 9 ರಂದು ನಡೆಯಲಿದೆ. ಇದರ ನಡುವೆ ಕಾನೂನು ಪ್ರಕ್ರಿಯೆ ಮುಗಿಸಿ ಡೇವಿಡ್ ವಾರ್ನರ್ ಪಾಕಿಸ್ತಾನಕ್ಕೆ ಮರಳಬೇಕಿದೆ.

66
3 ಪಂದ್ಯದಿಂದ 93 ರನ್ ಸಿಡಿಸಿರುವ ವಾರ್ನರ್

2026ರ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯ 3 ಪಂದ್ಯಗಳಿಂದ ಡೇವಿಡ್ ವಾರ್ನರ್ 93 ರನ್ ಸಿಡಿಸಿದ್ದಾರೆ. ಕರಾಚಿ ಕಿಂಗ್ಸ್ ತಂಡ ಡೇವಿಡ್ ವಾರ್ನರ್ ನಾಯಕತ್ವವನ್ನೇ ನಂಬಿಕೊಂಡಿದೆ. ಇದೀಗ ವಾರ್ನರ್ ಅಲಭ್ಯರಾದರೆ ಕರಾಚಿ ಕಿಂಗ್ಸ್ ತಂಡದ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ.

3 ಪಂದ್ಯದಿಂದ 93 ರನ್ ಸಿಡಿಸಿರುವ ವಾರ್ನರ್

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories